ಶತಮಾನೋತ್ಸವ ಭವನಕ್ಕೆ ಜಾಗ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಉಪಮುಖ್ಯಮಂತ್ರಿಗೆ ಮನವಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮಂಡಳಿ ಅಧ್ಯಕ್ಷೆ ಹಾಗು ಹಿರಿಯ ನಟಿ ಮತ್ತು ಮಾಜಿ ಸಚಿವರೂ ಆಗಿರುವ ಡಾ. ಜಯಮಾಲ ರಾಮಚಂದ್ರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಚಿತ್ರರಂಗದ ಪರವಾಗಿ ಹಲವು ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ
ಶತಮಾನೋತ್ಸವ ಭವನ ನಿರ್ಮಾಣಕ್ಕೆ ಜಾಗ ನೀಡುವುದು, ಮೈಸೂರಿನಲ್ಲಿ ಚಿತ್ರನಗರಿ ವ್ಯಾಪ್ತಿಯಲ್ಲಿ ಕಾರ್ಮಿಕರು, ತಂತ್ರಜ್ಞರು, ಇತರರಿಗೆ ಸೂರನ್ನು ಕಲ್ಪಿಸಿಕೊಡಲು ಜಾಗ ನೀಡಲು ಮನವಿ ಸಲ್ಲಿಸಲಾಗಿದ್ದು ಈ ಬೇಡಿಕೆಗೆ ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಈ ಪರಮೇಶ್ವರ್ ಸಕಾರಾತ್ಮಕವಾಗಿ ಸ್ಪಂದಿಸಿದ್ಧಾರೆ ಎಂದು ಡಾ, ಜಯಮಾಲ ರಾಮಚಂದ್ರ ಹೇಳಿದ್ದಾರೆ
ನಿಯೋಗದಲ್ಲಿ ಮಂಡಳಿಯ ಪದಾಧಿಕಾರಿಗಳಾದ ಹಿರಿಯ ನಟ ಸುಂದರ್ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಡಾ,ಜಯಮಾಲ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಚಿತ್ರರಂಗಕ್ಕೆ ಆಗಬೇಕಾಗಿರುವ ವಿವಿಧ ವಿಷಯಗಳು ಮತ್ತು ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆಸಿ ಮನವಿ ಸಲ್ಲಿಸಿದ್ದರು

