A gift for Friendship Day from the movie "America America-2"

“ಅಮೆರಿಕಾ ಅಮೆರಿಕಾ-2” ಚಿತ್ರದಿಂದ ಫ್ರೆಂಡ್‍ಶಿಪ್ ಡೇಗೆ ಉಡುಗೊರೆ - CineNewsKannada.com

“ಅಮೆರಿಕಾ ಅಮೆರಿಕಾ-2” ಚಿತ್ರದಿಂದ ಫ್ರೆಂಡ್‍ಶಿಪ್ ಡೇಗೆ ಉಡುಗೊರೆ

ಡಾ.ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಮನೋ ಮೂರ್ತಿ ಅವರ ಜೋಡಿ ಕನ್ನಡ ಸಿನಿಪ್ರೇಮಿಗಳ ಮನದಲ್ಲಿ ಸದಾ ವಿಶೇಷ ಸ್ಥಾನ ಪಡೆದಿದೆ. ಅಮೆರಿಕಾ ಅಮೆರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ ಮತ್ತು ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವು ಚಿತ್ರಗಳ ಮೂಲಕ ಈ ಜೋಡಿ ನೆನಪಿನಲ್ಲಿ ಉಳಿಯುವ ಸಂಗೀತ ನೀಡಿದೆ.

ಈಗ ಆ ಪ್ರಿಯ ಜೋಡಿ ಮತ್ತೆ ಅಮೆರಿಕಾ ಅಮೆರಿಕಾ 2 ಮೂಲಕ ಒಂದಾಗುತ್ತಿದೆ. `ಫ್ರೆಂಡ್‍ಶಿಪ್ ಡೇ’ಯಾದ ಆಗಸ್ಟ್ 2ರಂದು ತಮ್ಮ ಸ್ನೇಹದ ನೆನಪನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಅವರು ವಿಶೇಷ ಹೆಜ್ಜೆ ಇಟ್ಟಿದ್ದಾರೆ, ಅಮೆರಿಕಾ ಅಮೆರಿಕಾ 2 ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಮನೋ ಮೂರ್ತಿ ಮ್ಯೂಸಿಕ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಸ್ನೇಹ ಮತ್ತು ಸೃಜನಶೀಲ ಸಹಯೋಗಕ್ಕೆ ಗೌರವ ಸಲ್ಲಿಸುವಂತೆ ಈ ಪ್ರಕಟಣೆ ಹೊರಬಿದ್ದಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಮತ್ತು ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin