ತಂದೆ-ಮಗನ ಹೃದಯಸ್ಪರ್ಶಿ ಕಥೆ `ಬೆಲ್ ಬಟನ್’ ಚಿತ್ರ ನವೆಂಬರ್ 27ಕ್ಕೆ ತೆರೆಗೆ

ಮಧ್ಯಮವರ್ಗದ ತಂದೆಯೊಬ್ಬನಿಗೆ ತನ್ನ ಮಗ ಪ್ರೇಮವಿವಾಹವಾಗಬೇಕು ಎಂಬ ಬಹುದಿನಗಳ ಆಸೆ. ಮಗ ಚಿರು ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂಬ ವಿಷಯ ತಿಳಿದಾಗ ತಂದೆಗೆ ಎಲ್ಲಿಲ್ಲದ ಸಂತೋಷ. ಆದರೆ ಆತ ಪ್ರೀತಿಸಿದ ಹುಡುಗಿ ಪ್ರೀತಿಯನ್ನು ನಿರಾಕರಿಸಿದಾಗ ಕಥೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಪ್ರೀತಿಯ ವೈಫಲ್ಯವನ್ನು ತಂದೆಯಿಂದ ಮುಚ್ಚಿಡುವ ಚಿರು ಮುಂದೆ ಏನು ಮಾಡುತ್ತಾನೆ ತಂದೆಯ ಕನಸನ್ನು ನನಸು ಮಾಡುತ್ತಾನೆಯೇ ಎಂಬ ಕುತೂಹಲವೇ ಚಿತ್ರದ ಕಥೆಯ ಹೂರಣ.

ಚಿತ್ರಕ್ಕೆ ಲಕ್ಷ್ಮಿ ನರಸಿಂಹ ಎಂ. ನಿರ್ದೇಶನ ಮಾಡಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.

ಚಿತ್ರದಲ್ಲಿಸಚಿನ್ ಜೈ, ಲಕ್ಷ್ಮಿ ನರಸಿಂಹ, ನಿಸರ್ಗ ಅಪ್ಪಣ್ಣ, ಚೈತ್ರ ಗೌಡ, ಪ್ರಮೀಳಾ ಸುಬ್ರಹ್ಮಣ್ಯ, ನೊಣವಿನಕೆರೆ ರಾಮಕೃಷ್ಣಯ್ಯ, ಭಾನು ಪ್ರಕಾಶ್, ನಿಖಿತಾ ಶೆಟ್ಟಿ, ಅಭಿಗುರು, ವೇಣು, ಪವನ್ ರಿಚ್ಚಿ, ತರುಣ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಲಕ್ಕಿ ಛಾಯಾಗ್ರಹಣ, ಆಕಾಶ್ ಮಹೇಂದ್ರಕರ್ ಸಂಕಲನ, ವಿಶಾಲ್ ಆಲಾಪ್ ಸಂಗೀತ, ಮದನ್ ಮ್ಯಾಡಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ದೇವು ಪೆÇ್ರಡಕ್ಷನ್ ಡಿಸೈನರ್ ಆಗಿ, ಸುಪ್ರೀಮ್ ಸುಬ್ಬು ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ವೀರೇಶ್ ಮೇಕಪ್ ಹಾಗೂ ಜೇಕಬ್ ಮ್ಯಾಥ್ಯೂ ಬಣ್ಣದ ಸಂಯೋಜನೆ ಮಾಡಿದ್ದಾರೆ. ನಿರ್ದೇಶನ ತಂಡದಲ್ಲಿ ದುಷ್ಯಂತ್, ಲಕ್ಷ್ಮೀಶ್, ದೀಪಕ್, ತರುಣ್, ಪ್ರದೀಪ್, ಪವನ್, ಸಿದ್ಧಾರ್ಥ್ ಹಾಗೂ ಅಣ್ಣೇಗೌಡ ಇದ್ದಾರೆ. ಸುಧೀಂದ್ರ ವೆಂಕಟೇಶ್ ಚಿತ್ರದ ಪಿ.ಆರ್.ಒ ಆಗಿದ್ದಾರೆ.

Related Posts

‘ದೇವಿ ಮಹಾತ್ಮೆ’ ಚಿತ್ರ ಡಿಸೆಂಬರ್ 4 ರಂದು ಬಿಡುಗಡೆ : ಕೆಆರ್ ಜಿ ಸ್ಟುಡಿಯೋಸ್ ವಿತರಣೆ

ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ದೇವಿ ಮಹಾತ್ಮೆ’ ಚಿತ್ರ ಡಿಸೆಂಬರ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ ‘ಹೊಂಬಾಳೆ ಮ್ಯೂಸಿಕ್’ ಸಂಸ್ಥೆ ಪಡೆದುಕೊಂಡಿತ್ತು. ಇತ್ತೀಚೆಗಷ್ಟೇ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾದ…

ಕದ್ರಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬ್ರೋ ಗೌಡ’ ಪ್ರವೇಶ

ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಕನ್ನಡಿಗರ ಮನೆಮಾತಾಗಿ, ಬಳಿಕ ಲಕ್ಷ್ಮೀ ಬಾರಮ್ಮ’,ಅಗ್ನಿಸಾಕ್ಷಿ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿರುವ ನಟ ಶಮಂತ್ ಬ್ರೋ ಗೌಡ, ಇದೀಗ ಪೂರ್ಣಪ್ರಮಾಣದ ನಾಯಕನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಭಿನ್ನ ಕಥಾಹಂದರದ ರಾಘು’…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581