‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ನಿರ್ದೇಶಕ ಮಹೇಶ್ ಗೌಡ ವಿಭಿನ್ನ ಪ್ರಯತ್ನ

ಮಹಿರ ಸಿನಿಮಾ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗಮನಸೆಳೆದಿದ್ದ ಮಹೇಶ್ ಗೌಡ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಮಾಡಿ ಪ್ರೇಕ್ಷಕಕುಲ ರಂಜಿಸಿದ್ದ ಮಹೇಶ್ ಈ ಬಾರಿ ವಿಭಿನ್ನ ಬಗೆಯ ಕಥಾಹಂದರದೊಂದಿಗೆ ಪ್ರತ್ಯಕ್ಷರಾಗಿದ್ದಾರೆ.

ತೊನ್ನು (ವಿಟಿಲಿಗೋ) ಸಮಸ್ಯೆ ಪ್ರಧಾನವಾಗಿಟ್ಟುಕೊಂಡು ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಎಂಬ ಚಿತ್ರ ನಿರ್ದೇಶಿಸಿ, ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಸಿದ್ದಿ ವಿನಾಯಕ ದೇಗುಲದಲ್ಲಿ ನೆರವೇರಿದೆ. ವಿಟಿಲಿಗೋ ಸಮಸ್ಯೆ ಇರುವ ಅನುಷಾ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು, ಮತ್ತೋರ್ವ ವಿಟಿಲಿಗೋ ರವಿ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ನಿರ್ದೇಶನ ಮಹೇಶ್ ಗೌಡ ತಮ್ಮಲ್ಲಿರುವ ವಿಟಿಲಿಗೋ ಸಮಸ್ಯೆಗೆ ಕಾಮಿಡಿ ಹಾಗೂ ರೋಮ್ಯಾಂಟಿಕ್ ಟಚ್ ಕೊಟ್ಟು ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಕಥೆ ರೂಪಿಸಿದ್ದಾರೆ.

ಹೊನ್ನುಡಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರೋ, ಮಹೇಶ್ ಗೌಡ ನಿರ್ದೇಶನದ ಸಿನಿಮಾ `ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಶಿವ ಎಂಬ ಪಾತ್ರಕ್ಕೆ ನಿರ್ದೇಶಕ ಮಹೇಶ್ ಜೀವ ತುಂಬಿದ್ದಾರೆ. ಮಹೇಶ್‍ಗೆ ಜೋಡಿಯಾಗಿ ಅಗ್ನಿಸಾಕ್ಷಿ ಹಾಗೂ ಸೀತಾರಾಮ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಹಳ್ಳಿ ಹುಡುಗಿಯಾಗಿ ಕವಿತಾ ಪಾತ್ರದಲ್ಲಿ ನಟಿಸಿದ್ದಾರೆ.

ಶಿವನ ಸಮಸ್ಯೆ ಗೊತ್ತಿದ್ರು ಬಾಳ ಸಂಗಾತಿಯಾಗಿ ಕವಿತಾ ಬರುತ್ತಾಳೆ. ಸಮಸ್ಯೆ ಗೊತ್ತಿದ್ರು ಕವಿತಾ ತನ್ನನ್ನ ಯಾಕೆ ಮದುವೆ ಆಗಿದ್ದಾಳೆ ಅನ್ನೋ ಗೊಂದಲದಲ್ಲಿರೋ ನಾಯಕನ ಕಥೆ. ಈ ಗೊಂದಲದ ಮಧ್ಯೆಯೇ ಸಾಗುವ ಒಂದು ಮುದ್ದಾದ ಲವ್ ಸ್ಟೋರಿ ಬಿಳಿ ಚುಕ್ಕಿ ಹಳ್ಳಿ ಹಕ್ಕಿ. ಲಕ್ಷ್ಮಿ ಸಿದ್ದಯ್ಯ ವೀಣಾ ಸುಂದರ್ ಸೇರಿದಂತೆ ಮತ್ತಿತರರು ಭಾಗಿಯಾಗಿ ಹಾರೈಸಿದ್ದಾರೆ

ವರಮಹಾಲಕ್ಷ್ಮೀ ಆಶೀರ್ವಾದದೊಂದಿಗೆ ಇಂದಿನಿಂದ ಚಿತ್ರತಂಡ ಶೂಟಿಂಗ್ ಚಾಲು ಮಾಡಿದೆ. ಕಿರಣ್ ಸಿಎಚ್‍ಎಂ ಕ್ಯಾಮೆರಾ, ರಿಯೋ ಆಂಟೋನಿ ಸಂಗೀತ ಸಿನಿಮಾಕ್ಕಿದೆ. ಕೊಪ್ಪ, ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Related Posts

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು `ಪರಾಕ್’ ಚಿತ್ರದ ಪೋಸ್ಟರ್ ಬಿಡಿಸಿದ ದಾವಣಗೆರೆ ವಿದ್ಯಾರ್ಥಿಗಳು

‘ಪರಾಕ್’ ಚಿತ್ರದ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಮಕ್ಕಳ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ದಾವಣಗೆರೆಯ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ವಿನೂತನ ರೀತಿಯಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದ ನಿರ್ದೇಶಕ ಹಾಲೇಶ್ ಕೋಗುಂಡಿ ವ್ಯಾಸಂಗ…

`ಹನುಮಾನ್ 2 ದಿ ರೈಸ್ ಆಫ್ ವಾನರಾಸ್’ ಅಧಿಕೃತ ಘೋಷಣೆ

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದು ದೇಶಾದ್ಯಂತ ಪ್ರೇಕ್ಷಕರ ಮನಗೆದ್ದ ಬ್ಲಾಕ್‍ಬಸ್ಟರ್ ಸಿನಿಮಾ ಹನು-ಮಾನ್’ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಸಿನಿಮಾ ಜಗತ್ತನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದೆ. ಹನುಮಾನ್ 2 – ದಿ ರೈಸ್ ಆಫ್ ವಾನರಾಸ್’ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದು,…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581