Yashasvini Nachappa became the heroine through the film 'ondu Sanne ondu Maatu'

‘ ಒಂದು ಸನ್ನೆ ಒಂದು ಮಾತು ‘ ಚಿತ್ರದ ಮೂಲಕ ನಾಯಕಿಯಾದ ಯಶಸ್ವಿನಿ ನಾಚಪ್ಪ - CineNewsKannada.com

‘ ಒಂದು ಸನ್ನೆ ಒಂದು ಮಾತು ‘ ಚಿತ್ರದ ಮೂಲಕ ನಾಯಕಿಯಾದ ಯಶಸ್ವಿನಿ ನಾಚಪ್ಪ

ಕೊಡಗಿನಿಂದ ಮತ್ತೊಬ್ಬ ಸುಂದರಿ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅದುವೇ ಮುಗುಳುನಗೆ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಯೋಗರಾಜ್ ಭಟ್ಟರ ಕ್ಯಾಂಪಿನಲ್ಲಿ ಗಮನ ಸೆಳೆದ ಹುಡುಗಿ ಯಶಸ್ವಿನಿ ನಾಚಪ್ಪ.

ಇದೀಗ ‘ಒಂದು ಸನ್ನೆ ಒಂದು ಮಾತು’ ಸಿನಿಮಾ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ ಯಶಸ್ವಿನಿ ನಾಚಪ್ಪ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ಸೂಪರ್ ಹಿಟ್ ಸಿನಿಮಾ ಮುಗುಳುನಗೆಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಪ್ರತಿಭೆ ಯಶಸ್ವಿನಿ ನಾಚಪ್ಪ “ಒಂದು ಸನ್ನೆ ಒಂದು ಮಾತು” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಅನೇಕ ಚಿತ್ರಗಳಲ್ಲಿ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಹಲವಾರು ಚಿತ್ರಗಳಿಗೆ ಡಬ್ಬಿಂಗ್ ಕಲಾವಿದೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಯಶಸ್ವಿನಿ ನಾಚಪ್ಪ ಅವರಿಗಿದೆ. ಮೂಲತಃ ರಂಗಭೂಮಿಯ ನಂಟಿರುವ ಈ ಪ್ರತಿಭೆ ಇತ್ತೀಚಿನ ದಿನಗಳಲ್ಲಿ ಬಂದಂತಹ ಹೊಸ ಕಲಾವಿದರಿಗೆ ನಟನೆಯಲ್ಲಿ ಟ್ರೇನಿಂಗ್ ಮಾಡಿದ ಅನುಭವವನ್ನೂ ಕೂಡ ಇವರಿಗೆ.

ಟಗರು ಪಲ್ಯ ಸಿನಿಮಾ ಮೂಲಕ ನಾಯಕಿಯಾದ ಅಮೃತಾ ಪ್ರೇಮ್, ಪದವಿ ಪೂರ್ವ ಮೂಲಕ ನಾಯಕನಾದ ಪೃಥ್ವಿ ಶ್ಯಾಮನೂರ್, ಅಂಜಲಿ, ಯಶಾ ಶಿವಕುಮಾರ್ ಹಾಗೂ ಅರ್ಜುನ್ ಗೌಡ ಸೇರಿದಂತೆ ಒಂದಷ್ಟು ಯುವ ಸಿನಿಮೋತ್ಸಾಹಿಗಳಿಗೆ ನಟನೆಯ ತರಬೇತಿ ನೀಡಿದವರು ಯಶಸ್ವಿನಿ. ಅಭಿನಯ ಫ್ಲಸ್ ನಿರ್ದೇಶನದ ಅನುಭವ ಹೊಂದಿರುವ ಈ ಸುಂದರಿ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಅಂದಹಾಗೇ ಥ್ರೀ ಮಂಕೀಸ್ ಶೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಒಂದು ಸನ್ನೆ ಒಂದು ಮಾತು ಚಿತ್ರಕ್ಕೆ ಸಂತೋಷ್ ಬಾಗಲಕೋಟಿ ಆಕ್ಷನ್ ಕಟ್ ಹೇಳಿದ್ದಾರೆ. ವಿವೇಕ ಚಕ್ರವರ್ತಿ ಸಂಗೀತ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ. ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಯಶಸ್ವಿನಿ ನಾಚಪ್ಪ ಈ ನಾಯಕಿಯಾಗಿ ಬೆಳ್ಳಿಪರದೆಗೆ ಪರಿಚಿತರಾಗುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin