"Muddu Muddu Puttu Lakshmi" song from the movie "Aayogya-2" released

“ಆಯೋಗ್ಯ- 2” ಚಿತ್ರದ “ಮುದ್ದು ಮುದ್ದು ಪುಟ್ಟು ಲಕ್ಷ್ಮಿ” ಹಾಡು ಬಿಡುಗಡೆ - CineNewsKannada.com

“ಆಯೋಗ್ಯ- 2” ಚಿತ್ರದ “ಮುದ್ದು ಮುದ್ದು ಪುಟ್ಟು ಲಕ್ಷ್ಮಿ” ಹಾಡು ಬಿಡುಗಡೆ

ಅಭಿನಯ ಚತುರ ನೀನಾಸಂ ಸತೀಶ್- ರಚಿತಾ ರಾಮ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ “ಆಯೋಗ್ಯ” ಚಿತ್ರ ಭರ್ಜರಿ ಯಶಸ್ಸು ಗಳಸಿದ್ದ ಚಿತ್ರಕ್ಕೆ ಎಸ್ .ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಇದೀಗ 8 ವರ್ಷದ ನಂತರ ಅದೇ ಕಾಂಬಿನೇಷನ್ ನಲ್ಲಿ ” ಆಯೋಗ್ಯ – 2 “ಚಿತ್ರ ಆಗಸ್ಟ್ 14 ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ನಟ ನೀನಾಸಂ ಸತೀಶ್ ಹುಟ್ಟುಹಬ್ಬ ಹಾಗು ನಿರ್ದೇಶಕ ಎಸ್. ಮಹೇಶ್ ಕುಮಾರ್ ಅವರ ಮೊದಲ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಬರ್ಜರಿ ಚೇತನ್ ಗೀತ ರಚನೆಯ “ಮುದ್ದು ಮುದ್ದು ಪುಟ್ಟು ಲಕ್ಷ್ಮಿ” ಹಾಡನ್ನು ಅರ್ಜುನ್ ಜನ್ಯ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಅರ್ಜುನ್ ಜನ್ಯ ಈ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ನಾನು ಹಾಡೋಂದನ್ನ ಗೆಸ್ಟ್ ಆಗಿ ಬಿಡುಗಡೆ ಮಾಡ್ತಿರೋದು. ಎಂಟು ವರ್ಷದ ಹಿಂದೆ ಅಯೋಗ್ಯ ಸಿನಿಮಾಗೆ ಹಾಡು ಕಂಪೆÇೀಸ್ ಮಾಡುವಾಗ ಹೇಗಿತ್ತು ಅನ್ನೋ ಹಳೆಯ ದಿನಗಳನ್ನ ನೆನಪು ಮಾಡಿಕೊಂಡರು..

ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ ಎಂಟು ವರ್ಷದ ನಂತರ ಬರ್ತಿದ್ದೀವಿ ಈ ಹಾಡು ನಿಮ್ಮೆಲ್ಲರಿಗೂ ಖುಷಿ ಕೊಡುತ್ತೆ.ಶೂಟ್ ಸಮಯದಲ್ಲಿ ನಡೆದ ಘಟನೆಗಳನ್ನ ಮೆಲುಕು ಹಾಕಿದ್ರು..ಅಯೋಗ್ಯ ಸಿನಿಮಾಗಿಂತಲೂ ಅಯೋಗ್ಯ 2 ಚಿತ್ರದಲ್ಲಿ ಹೆಚ್ಚು ಎಂಟರ್ಟೈನ್ಮೆಂಟ್ ಇದೆ ಎಂದರು.

ನಟ ಸತೀಶ್ ನಿನಾಸಂ ಹಾಗೂ ನಟಿ ರಚಿತಾ ರಾಮ್ ಇಬ್ಬರು ಒಟ್ಟಿಗೆ ವೇದಿಕೆಗೆ ಬಂದು ಹಾಡು ಬರೆದಿರುವ ಚೇತನ್ ಕುಮಾರ್ ,ಹಾಡಿರೋ ಸಿದ್ ಶ್ರೀರಾಮ್ ಪೃಥ್ವಿ ಭಟ್ ಅವರಿಗೆ ಥ್ಯಾಂಕ್ಸ್ ಹೇಳಿದ್ರು. ಜೊತೆಯಲ್ಲಿ ನಟಿಸಿದಕ್ಕಾಗಿ ಇಬ್ಬರು ಪರಸ್ಪರ ಧನ್ಯವಾದ ತಿಳಿಸಿದರು.

ಅಯೋಗ್ಯ2 ಸಿನಿಮಾವನ್ನ ಮುನೇಗೌಡರು ನಿರ್ಮಾಣ ಮಾಡುತ್ತಿದ್ದು ಅಯೋಗ್ಯ 2′ ಚಿತ್ರದ ಆಡಿಯೋ ಹಕ್ಕನ್ನು ರೂ.2 ಕೋಟಿ ಕೊಟ್ಟು ಆನಂದ್ ಆಡಿಯೋ ಖರೀದಿಸಿದೆ .

ಗೀತ ರಚನೆಕಾರ ಬಹದ್ದೂರು ಚೇತನ್ ಮಾತನಾಡಿ ಗ್ರಾಮೀಣ ಸೊಗಡಿನ ಕುರಿತಾದ ಹಾಡು ಹೊಸ ಹೊಸ ಪದ ಹುಡುಕುತ್ತಿರುವೆ ಅದುವೇ ಪುಟ್‍ಲಕ್ಷ್ಮಿ ಹಾಡು ಚಿತ್ರ ನೋಡಿ ಹರಿಸಿ ಎಂದು ಹಾರೈಸಿ ಎಂದು

ಸಂಭಾಷಣೆಕಾರ ಮಾಸ್ತಿ ಮಾತನಾಡಿ ಮಚ್ಚು ರೌಡಿಗಳ ಜೊತೆ ಕಾಲ ಕಳೆಯುತ್ತಿದ್ದ ನನ್ನನ್ನು ನಿರ್ದೇಶಕ ಮಹೇರ್ಶ, ಮಂಡ್ಯಕ್ಕೆ ಕರೆದುಕೊಂಡು ಹೋಗಿ ರೈತರ ಮದ್ಯ ಬಿಟ್ಟವರು ನವಿರಾದ ಹಾಸ್ಯದಿಂದ ಚಿತ್ರ ಮೂಡಿಬಂದಿದೆ. ನಟ ಸತೀಶ್ ಅವರದಲ್ಲಿ ಕೋಪ ಮತ್ತು ಪ್ರೀತಿ , ಖಂಡಿಸುವುದು ಮತ್ತು ಪ್ರೀತಿಸೋದು ಎರಡೂ ಗೊತ್ತಿದ್ದೆ. ಮಗ ತಾಯಿಯನ್ನು ಮಗು ಥರ ನೋಡಿಕೊಂಡರು ನೀವು ಎಲ್ಲರಿಗೂ ಸ್ಪೂರ್ತಿ ಎಂದರು

ಕಲಾವಿದರಾದ ಸುಂದರ್‍ರಾಜ್ ಶಿವರಾಜ್ ಕೆ.ಆರ್ ಪೇಟೆ , ಮಂಜು ಪಾವಗಡ , ಕಿರಣ್ ನಾಯಕ್, ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

ಚಿತ್ರದಲ್ಲಿ ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin