ಸೆಪ್ಟೆಂಬರ್ 12 ಕ್ಕೆ ” ತೇಜ್ ಸಜ್ಜಾ” ನಟನೆಯ ‘ಮಿರಾಯಿ’ ಚಿತ್ರ ತೆರೆಗೆ - CineNewsKannada.com

ಸೆಪ್ಟೆಂಬರ್ 12 ಕ್ಕೆ ” ತೇಜ್ ಸಜ್ಜಾ” ನಟನೆಯ ‘ಮಿರಾಯಿ’ ಚಿತ್ರ ತೆರೆಗೆ

ಹನುಮಾನ್’ ಸಿನಿಮಾ ಬಳಿಕ ತೇಜ ಸಜ್ಜಾ ನಟಿಸಿದ ‘ಮಿರಾಯ್’ ಚಿತ್ರ ಬಹಳ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಮೂಲಕ ತೇಜ ಸಜ್ಜಾ ಮತ್ತೊಮ್ಮೆ ಸೂಪರ್ ಯೋಧನಾಗಿ ಕಾಣಿಸಿಕೊಂಡಿದ್ದು ಚಿತ್ರ ಸೆಪ್ಟೆಂಬರ್ ‌12 ರಂದು ತೆರೆಗೆ ಬರಲು ಸಜ್ಜಾಗಿದೆ.

ಬಹುಭಾಷೆಯಲ್ಲಿಯೇ ಮೂಡಿಬಂದಿರುವ ಚಿತ್ರದ ಟ್ರೇಲರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದೇ ತಿಂಗಳ 12ರಂದು ಮಿರಾಯ್ ತೆರೆಗೆ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರಕ್ಕಾಗಿ ನಟ ತೇಜ್ ಸಜ್ಜಾ ಬೆಂಗಳೂರಿಗೆ ಆಗಮಿಸಿದ್ದರು.

ಈ ವೇಳೆ ಮಾತನಾಡಿದ ನಟ ತೇಜ್ ಸಜ್ಜಾ
, ಮಿರಾಯ್ ದೊಡ್ಡ ಸಿನಿಮಾ. ಇಡೀ ತಂಡ ಸಾಕಷ್ಟು ಪರಿಶ್ರಮ ಹಾಕಿ ಕೆಲಸ ಮಾಡಿದೆ. ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಇನ್ನೂ ಕನ್ನಡ‌ ಕಲಿಯುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಿ. ಮಿರಾಯಿ, ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಈ ಚಿತ್ರ ಇಷ್ಟವಾಗುತ್ತದೆ. ಆಕ್ಷನ್, ಎಮೋಷನ್ ಜೊತೆಗೆ ಇತಿಹಾಸದ ಕಥೆಯನ್ನು ಮಿರಾಯ್ ನಲ್ಲಿ ಕಟ್ಟಿಕೊಡಲಾಗಿದೆ. ಪ್ರತಿಯೊಬ್ಬರೂ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಮನವಿ ಮಾಡಿದರು.

ತೇಜ ಸಜ್ಜಾ ಸೂಪರ್ ಯೋಧನಾಗಿ ಜನರನ್ನು ರಕ್ಷಿಸಲು ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ತೇಜ ಸಜ್ಜಾ ವಿರುದ್ಧ ಟಾಲಿವುಡ್ ನಟ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ತೇಜ್ ಸಜ್ಜಾ ಜೊತೆ ರಿತಿಕಾ ನಾಯಕ್ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ‘ಮಿರಾಯ್’ಗೆ ಕಥೆಯ ಜೊತೆಗೆ ಚಿತ್ರಕಥೆಯನ್ನೂ ಬರೆದು ನಿರ್ದೇಶನ ಮಾಡಿದ್ದಾರೆ.

ಮಿರಾಯ್’ ಸಿನಿಮಾವನ್ನು ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ಟಿ.ಜಿ.ವಿಶ್ವಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸದ್ದು ಮಾಡುತ್ತಿರುವ ‘ಮಿರಾಯ್’ ಸೆಪ್ಟೆಂಬರ್ 12ರಂದು ಕೇವಲ 2Dಯಲ್ಲಷ್ಟೇ ಅಲ್ಲ 3ಡಿ ಫಾರ್ಮಾಟ್‌ನಲ್ಲಿ ಬರೋಬ್ಬರಿ ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಕನ್ನಡದಲ್ಲಿ ಸಿನಿಮಾವನ್ನು ವಿಕೆ‌ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ ಬಿಡುಗಡೆ ಮಾಡುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin