ನಟ ದಳಪತಿ ವಿಜಯ್ ಹುಟ್ಟುಹಬ್ಬ; ಕೆವಿಎನ್ ಸಂಸ್ಥೆಯಿಂದ ಬಹುದೊಡ್ಡ ಉಡುಗೊರೆ
ಭಾರತೀಯ ಚಿತ್ರರಂಗದಲ್ಲಿ ನಿರ್ಮಾಣ ಸಂಸ್ಥೆಯಲ್ಲಿ ಬಹುದೊಡ್ಡ ಹೆಸರು ಮಾಡಿರುವ ಕೆ ವಿ ಎನ್ ಪ್ರೊಡಕ್ಷನ್ ಇದೀಗ ತಮಿಳು ನಟ ದಳಪತಿ ವಿಜಯ್ 51ನೇ ಹುಟ್ಟುಹಬ್ಬಕ್ಕೆ “ಜನ ನಾಯಗನ್” ಚಿತ್ರದ ಮೊದಲ ನೋಟ ಬಿಡುಗಡೆ ಮಾಡಿದೆ

ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ದೊಡ್ಡ ಚಾಪು ಮೂಡಿಸಿಸ ಕೆವಿಎನ್ ಪ್ರೊಡಕ್ಷನ್ಸ್ಬ ಮುಖ್ಯಸ್ಥ ವೆಂಕಟ್. ಕೆ . ನಾರಾಯಣ್ ಭಾರತೀಯ ಭಾಷೆಯ ಎಲ್ಲಾ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡುವ ಬಹುದೊಡ್ಡ ಕನಸು ಕಂಡಿದ್ದಾರೆ.ಸಿನಿಮಾ ನಿರ್ಮಾಣದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದ ಸಂಸ್ಥೆ ಅದುವೇ ಕೆವಿಎನ್ ಸಂಸ್ಥೆ
ಚಂದನವನ ಮೂಲಕ ಚಿತ್ರ ನಿರ್ಮಾಣ ಆರಂಭಿಸಿ ಬಾಲಿವುಡ್ , ಟಾಲಿವುಟ್ ಹಾಗೂ ಕಾಲಿವುಡ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ದಳಪತಿ ವಿಜಯ್ 69 ಚಿತ್ರವೂ ಕೂಡ. ಈ ಚಿತ್ರದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಲು ಮುಂದಾಗಿದ್ದಾರೆ.

ಜನ ನಾಯಗನ್’ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಚಿತ್ರ 2026 ಜನವರಿ 15ಕ್ಕೆ , ಅದು ವಿಶೇಷವಾಗಿ ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮದ ದಿನ ಅದ್ದೂರಿಯಾಗಿ ಚಿತ್ರ ತೆರೆಯ ಮೇಲೆ ಬರಲಿದೆ. ಹೀಗಾಗಿ ದಳಪತಿ ವಿಜಯ್ ಅಭಿಮಾನಿಗಳು ಹೀಗಿನಿಂದಲೇ ಚಿತ್ರ ವೀಕ್ಷೇಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ವೆಂಕಟ್. ಕೆ. ನಾರಾಯಣ ನಿರ್ಮಾಣದ ದುಬಾತರಿಬಬಜೆಟ್ “ಜನ ನಾಯಗನ್” ಚಿತ್ರಕ್ಕೆ ಅದ್ದೂರಿ ಸೆಟ್ ಹಾಕಲಾಗಿದೆ.
ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳು ಒಳಗೊಂಡಿದ್ದು, ಸಿನಿಮಾ ನೋಡಿ ಎದ್ದು ಹೊರಬರುವ ಪ್ರೇಕ್ಷಕನ ಮನದಲ್ಲಿ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಷ್ಟರ ಮಟ್ಟಿಗೆ ಸಿನಿಮಾ ಮೂಡಿ ಬರಲಿದೆ. “ಜನ ನಾಯಗನ್” ಚಿತ್ರದ ಮೊದಲ ನೋಟ ದಳಪತಿ ವಿಜಯ್ ಹುಟ್ಟುಹಬ್ಬಕ್ಕೆ ಹೊರ ತರುತ್ತಿದ್ದು , ಅಭಿಮಾನಿಗಳಲ್ಲಿ ಖುಷಿ ದುಪ್ಪಟ್ಟು ಮಾಡಿದೆ.

ಜನ ನಾಯಗನ್” ಚಿತ್ರದ ಮೊದಲ ಗ್ಲಿಮ್ಸ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು , ನಟ ದಳಪತಿ ವಿಜಯ್ ಅಭಿನಯದ ಲುಕ್ ಭರ್ಜರಿಯಾಗಿ ಸದ್ದು ಮಾಡಲಿದೆಯಂತೆ. ವಿಜಯ್ ಅಭಿಮಾನಿಗಳಷ್ಟೆ ಅಲ್ಲದೆ ಇಡೀ ದಕ್ಷಿಣ ಭಾರತ ಕಾಯುತ್ತಿದೆ. ಕೆವಿಎನ್ ಸಂಸ್ಥೆ ನಿರ್ಮಾಣದ ಈ ಚಿತ್ರವನ್ನು ಹೆಚ್ . ವಿನೋತ್ ನಿರ್ದೇಶಿಸಿ ಅನಿರುದ್ದ್ ರವಿಚಂದರ್ ಸಂಗೀತ ನೀಡುತ್ತಿದ್ದು , ಕೋಟ್ಯಾನು ಕೋಟಿ ದಳಪತಿ ವಿಜಯ್ ಅಭಿಮಾನಿಗಳ ಹೃದಯ ಗೆಲ್ಲೋದ್ರಲ್ಲಿ ನೋ ಡೌಟ್ ಎಂದಿದ್ದಾರೆ ನಿರ್ಮಾಪಕ ವೆಂಕಟ್. ಕೆ. ನಾರಾಯಣ.
“ಜನನಾಯಗನ್” ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕೆವಿಎನ್ ಪ್ರೊಡಕ್ಷನ್ಸ್ ಡಿಸ್ಟ್ರಿಬ್ಯುಷನ್ ಕಾರ್ಯದಲ್ಲೂ ಒಳ್ಳೆ ಹೆಸರು ಮಾಡಿದೆ. ನಿರ್ಮಾಣದ ವಿಚಾರಕ್ಕೆ ಬಂದ್ರೆ ಬಿಗ್ ಸ್ಟಾರ್ಗಳ ಬಿಗ್ ಬಜೆಟ್ ಸಿನಿಮಾ ನಿರ್ಮಾಣದ ಮೂಲಕ ದೇಶಾದ್ಯಂತ ಹೆಸರು ಮಾಡಿದೆ.

