Yuvraj Kumar starrer "Ekka" will hit the screens on July 18 across the state

ಯುವರಾಜ್ ಕುಮಾರ್ ನಟನೆಯ ” ಎಕ್ಕ” ಜುಲೈ 18ಕ್ಕೆ ರಾಜ್ಯಾದ್ಯಂತ ತೆರೆಗೆ - CineNewsKannada.com

ಯುವರಾಜ್ ಕುಮಾರ್ ನಟನೆಯ ” ಎಕ್ಕ” ಜುಲೈ 18ಕ್ಕೆ ರಾಜ್ಯಾದ್ಯಂತ ತೆರೆಗೆ

ಯುವ ರಾಜ್ ಕುಮಾರ್‌ ಕನ್ನಡ ಚಿತ್ರರಂಗದ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದು, ಎರಡನೇ ಸಿನಿಮಾ ‘ಎಕ್ಕ’ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ರೆಡಿಯಾಗಿದ್ದು ಜುಲೈ 18 ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ

ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ಸಿನಿಮಾ ಮಾಡಬೇಕಿದ್ದರೆ ಒಂದೊಳ್ಳೆ ವೈಬ್ ಇದ್ದರೆ ಅದು ಚೆನ್ನಾಗಿ ಹೋಗುತ್ತದೆ ಎಂಬ ನಂಬಿಕೆ ಇದೆ. ಚಿತ್ರದ ಪ್ರತಿ ಕಂಟೆಂಟ್ ಎಷ್ಟು ಎಂಜಾಯ್ ಮಾಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಾ. ನೋಡುವಾಗ ನಿಮಗೂ ಕೂಡ ಅದೇ ಎಮೋಷನ್ ಪಾಸ್ ಆಗುತ್ತದೆ ಎಂದುಕೊಂಡಿದ್ದೇನೆ. ಈ ಜರ್ನಿಯಲ್ಲಿ ಏನೂ ಕಲಿದ್ದೇನೆ ಎಂದರೆ, ಒಂಬತ್ತು ತಿಂಗಳಲ್ಲಿ ಮಗು ಹೆತ್ತಾಗೆ ಸಿನಿಮಾ ಮಾಡಬಹುದು ಎಂದರು.

ನಾಯಕ ಯುವ ಮಾತನಾಡಿ, ಎಕ್ಕ ಸಿನಿಮಾದಿಂದ ನಾವು ಬಿಟ್ಟಿರುವ ಎಲ್ಲಾ ಕಂಟೆಂಟ್ ಎಲ್ಲರಿಗೂ ಮುಟ್ಟುತ್ತಿದೆ. ಬ್ಯಾಂಗಲ್ ಬಂಗಾರಿ ಹಾಡಿಗೆ ಎಲ್ಲಾ ವರ್ಗದ ಜನ ಇಷ್ಟಪಟ್ಟು ಡ್ಯಾನ್ಸ್ ಮಾಡಿರುವುದನ್ನು ನೋಡಲು ಖುಷಿಯಾಗುತ್ತದೆ. ಥಿಯೇಟರ್ ನಲ್ಲಿ ಸಿನಿಮಾವನ್ನು ಎಲ್ಲರೂ ಎಂಜಾಯ್ ಮಾಡುತ್ತೀರ. ಖುಷಿಯಿಂದ ಸಿನಿಮಾವನ್ನು ಮಾಡಿದ್ದೇವೆ. ನನ್ನನ್ನು ನೀವು ಹೊಸ ರೀತಿಯಲ್ಲಿ ನೋಡಬಹುದು. ಜುಲೈ 18ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.

ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ, ಜೂನ್ 6ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಿದ್ದೇವು. ಆದರೆ ಸಿನಿಮಾ ಕೆಲಸ ಬಾಕಿ ಇರುವುದರಿಂದ ಒಂದು ತಿಂಗಳು ಅಂದರೆ ಜುಲೈ 18ಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಪಿಕ್ಚರ್ಸ್ ಚೆನ್ನಾಗಿದ್ದರೆ ಜನ ಥಿಯೇಟರ್ ಗೆ ಬರುತ್ತಾರೆ. ಸೆಕೆಂಡ್ ಆಫ್‌ನಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೆಡಿ, ಡೆವಿಲ್, 45 ಇದೆ. ತುಂಬಾ ಸಿನಿಮಾಗಳಿವೆ. ಅತುಲ್ , ಆದಿತ್ಯಾ, ಜಾಲಿ ಜಾಕ್,ಸಾಧುಕೋಕಿಲಾ, ಪುನೀತ್ ರುದ್ರನಾಗ್, ಡಾಕ್ಟರ್ ಸೂರಿ, ಹರಿಣಿ, ಶೃತಿ ಮೇಡಂ, ರಾಹುಲ್ ದೇವಶೆಟ್ಟಿ ಮುಂತಾದ ತಾರಾಬಳಗ ಚಿತ್ರದಲ್ಲಿ ಇದೆ ಎಂದು ಮಾಹಿತಿ ನೀಡಿದರು.

ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ಸಿನಿಮಾ ಹಾಡುಗಳು ಅಂತಾ ಬಂದಾಗ ಎಲ್ಲರ ಐಡಿಯಾಗಳ ಸಹಕಾರ ಇದೆ. ಈ ಸಿನಿಮಾ ಮಾಡುತ್ತಿರುವುದು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ಇನ್ನೂ ಸಿನಿಮಾದಲ್ಲಿ ಹಾಡುಗಳಿವೆ. ಚಿತ್ರ ಕೂಡ ಚೆನ್ನಾಗಿ ಬಂದಿದೆ‌. ಸದ್ಯ ಹಿನ್ನೆಲೆ‌ ಸಂಗೀತ ಕೆಲಸ ನಡೆಯುತ್ತಿದೆ. ಎಲ್ಲಾ ಕಂಟೆಂಟ್ ಗೆ ಮೆಚ್ಚುಗೆ ಸಿಗುತ್ತಿರುವುದು ಖುಷಿ ಎಂದು ಹೇಳಿದರು.

ಎಕ್ಕ ಚಿತ್ರದಲ್ಲಿ ನಾಯಕ ಯುವ ರಾಜ್ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್‌ ಕೊಟ್ಟಿದ್ದಾರೆ. ಉಳಿದಂತೆ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣವಿದೆ.ರೋಹಿತ್ ಪದಕಿ ನಿರ್ದೇಶನದ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ‘ಎಕ್ಕ’.

ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ ಚಿತ್ರ ನಿರ್ಮಾಣ ಮಾಡಲಾಗಿದೆ. ಎಕ್ಕ’ ಚಿತ್ರದ ವಿಚಾರಕ್ಕೆ ಬಂದರೆ ಇದು ಪಕ್ಕಾ ರಾ ಕಮರ್ಷಿಯಲ್ ಸಿನಿಮಾ. ಮಾಸ್ ಪ್ರೇಕ್ಷರಕನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಎಕ್ಕ ಸಿನಿಮಾ ಜುಲೈ 18ಕ್ಕೆ ಗ್ರ್ಯಾಂಡ್ ರಿಲೀಸ್‌ ಆಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin