‘ರೌಡಿ ಜನಾರ್ದನ’ ಅವತಾರದಲ್ಲಿ ನಟ ವಿಜಯ್ ದೇವರಕೊಂಡ: ಗಮನ ಸೆಳೆದ ಗ್ಲಿಂಪ್ಸ್
ತೆಲುಗಿನ ನಟ ವಿಜಯ್ ದೇವರಕೊಂಡ “ರೌಡಿ ಜನಾರ್ಧನ”ನ ಹೊಸ ಅವತಾರ ತಾಳಿದ್ದಾರೆ. ಈ ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ ದಿಲ್ ರಾಜು ಹಾಗು ಶಿರೀಶ್ ನಿರ್ಮಾಣದ ಚಿತ್ರಕ್ಕೆ ರವಿ ಕಿರಣ್ ಕೋಲಾ ನಿರ್ದೇಶನವಿರವ ಚಿತ್ರ 2026ರ ಡಿಸೆಂಬರ್ನಲ್ಲಿ ತೆರೆಗೆ ಬರಲಿದೆ

‘ರಾಜಾ ವಾರು ರಾಣಿ ಗಾರು’ ಚಿತ್ರದ ಮೂಲಕ ಹೆಸರು ಮಾಡಿದ್ದ ಪ್ರತಿಭಾವಂತ ನಿರ್ದೇಶಕ ರವಿ ಕಿರಣ್ ಕೋಲಾ ಚಿತ್ರ ನಿರ್ದೇಶಿಸುತ್ತಿದ್ದಾರೆ. ರಕ್ತಸಿಕ್ತ ಹಾಗೂ ರಾ ಆಕ್ಷನ್ ಕಥಾಹಂದರ ಹೊಂದಿರುವ ಗ್ಲಿಂಪ್ಸ್, ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ವಿಜಯ್ ದೇವರಕೊಂಡ ಅ ಈ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ವಿಭಿನ್ನ ಸ್ಲಾಂಗ್ ಮತ್ತು ಮ್ಯಾನರಿಸಂ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ.
ಗ್ಲಿಂಪ್ಸ್ನಲ್ಲಿ ವಿಜಯ್ ದೇವರಕೊಂಡ ರಕ್ತಸಿಕ್ತ ಮೈಕಟ್ಟು, ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸುತ್ತಿದ್ದು, ತೀಕ್ಷ್ಣ ಕಣ್ಣೋಟ ಮತ್ತು ಪವರ್ಫುಲ್ ಸ್ಕ್ರೀನ್ ಪ್ರೆಸೆನ್ಸ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. 1980ರ ಕಾಲಘಟ್ಟದ ಪೂರ್ವ ಗೋದಾವರಿ ಜಿಲ್ಲೆಯ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದ್ದು, ವಿಜಯ್ ಅವರು ಈ ಚಿತ್ರಕ್ಕಾಗಿ ವಿಶೇಷವಾಗಿ ಗೋದಾವರಿ ಸ್ಲಾಂಗ್ ಬಳಸಿದ್ದಾರೆ.

ಚಿತ್ರಕ್ಕೆ ಆನೆಂಡ್ ಸಿ. ಚಂದ್ರನ್ ಅವರ ಛಾಯಾಗ್ರಹಣವಿದ್ದು, ಕ್ರಿಸ್ಟೋ ಕ್ಸೇವಿಯರ್ ಅವರ ಸಂಗೀತ ಮತ್ತು ಸುಪ್ರೀಂ ಸುಂದರ್ ಅವರ ಆಕ್ಷನ್ ಕೊರಿಯೋಗ್ರಫಿ ಚಿತ್ರದ ಗಾಂಭೀರ್ಯವನ್ನು ಹೆಚ್ಚಿಸಿವೆ. ‘ರೌಡಿ ಜನಾರ್ದನ’ ಸಿನಿಮಾ 2026ರ ಡಿಸೆಂಬರ್ನಲ್ಲಿ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಜಯ್ ದೇವರಕೊಂಡ, ಕೀರ್ತಿ ಸುರೇಶ್ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ

