`ಡಂಕಿ’ ಸ್ನೇಹಿತರ ಹಾಡು ಬಿಡುಗಡೆ : ಚಿತ್ರ ಡಿಸೆಂಬರ್ 21ಕ್ಕೆ ತೆರೆಗೆ
![`ಡಂಕಿ’ ಸ್ನೇಹಿತರ ಹಾಡು ಬಿಡುಗಡೆ : ಚಿತ್ರ ಡಿಸೆಂಬರ್ 21ಕ್ಕೆ ತೆರೆಗೆ](https://www.cininewskannada.com/wp-content/uploads/2023/12/3-2.jpg?v=1701493515)
ಶಾರುಖ್ ಖಾನ್ ಹಾಗೂ ರಾಜ್ ಕುಮಾರ್ ಹಿರಾನಿ ಈ ಕ್ರೇಜಿ ಕಾಂಬಿನೇಷನ್‍ನ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾ ಡಂಕಿ. ಇದೇ 21ರಂದು ವಲ್ರ್ಡ್ ವೈಡ್ ಚಿತ್ರ ಬಿಡುಗಡೆಯಾಗ್ತಿದ್ದು, ಪ್ರಚಾರ ಭರಾಟೆ ಕೂಡ ಜೋರಾಗಿದೆ. ಡಂಕಿ ಡ್ರಾಪ್-1 ವಿಡಿಯೋ ಅನಾವರಣ ಮಾಡುವ ಮೂಲಕ ಪ್ರಮೋಷನ್ ಶುರು ಮಾಡಿದ್ದ ಚಿತ್ರತಂಡವೀಗ ಡಂಕಿ ಡ್ರಾಪ್-3 ಟೈಟಲ್ ನಡಿ ಎರಡನೇ ಹಾಡು ಬಿಡುಗಡೆ ಮಾಡಿದೆ.
ಡಂಕಿ ಸಿನಿಮಾದ ಲುಟ್ ಪುಟ್ ಗಯಾ ಹಾಡು ಮೋಡಿ ಮಾಡ್ತಿದೆ. ಶಾರುಖ್ ಹಾಗೂ ತಾಪ್ಸಿ ನಡುವಿನ ಪ್ರೇಮಗೀತೆ ಹಿಟ್ ಲೀಸ್ಟ್ ಸೇರಿದೆ. ಇದೀಗ ಡಂಕಿ ಸಿನಿಮಾದ ಎಮೋಷನಲ್ ನಂಬರ್ ಬಿಡುಗಡೆಯಾಗಿದೆ. `ನಿಕ್ಲೆ ದ ಕಭಿ ಹಮ್ ಘರ್ ಸೆ’ ಎಂಬ ಸಾಹಿತ್ಯದ ಸಾಂಗ್ ರಿಲೀಸ್ ಆಗಿದೆ. ಜಾವೇದ್ ಅಖ್ತಾರ್ ಸಾಹಿತ್ಯ ಬರೆದಿದ್ದು, ಸೋನು ನಿಗಂ ಕಂಠ ಕುಣಿಸಿದ್ದು, ಪ್ರೀತಂ ಸಂಗೀತ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ..
ನಾಲ್ಕು ಜನ ಸ್ನೇಹಿತರು ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ಹೋಗುವುದ್ದೇ ಚಿತ್ರದ ಕಥೆ. ಆ ಕಥೆಯ ಎಮೋಷನಲ್ ಪಯಣವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. 3 ಇಡಿಯಟ್ಸ್',
ಲಗೆ ರಹೋ ಮುನ್ನಾಭಾಯಿ’, ಪಿಕೆ',
ಸಂಜು’, ಮುನ್ನಾಭಾಯಿ ಎಂಬಿಬಿಎಸ್' ರೀತಿಯ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ರಾಜ್ಕುಮಾರ್ ಹಿರಾನಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ಸೇರಿ
ಡಂಕಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಸಿನಿಮಾದಲ್ಲಿ ಶಾರುಖ್ ಖಾನ್ ಗೆ ನಾಯಕಿಯಾಗಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಇನ್ನೂ ಕೆಲವು ನಟರು ನಟಿಸಿದ್ದಾರೆ. ಭಾರತದಿಂದ ಅಕ್ರಮವಾಗಿ ಕೆಲ ಯುವಕರು ವಿದೇಶಕ್ಕೆ ತೆರಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ಡಂಕಿ' ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‍ಟೈನ್ಮೆಂಟ್ ಹಾಗೂ ರಾಜ್‍ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‍ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 21ಕ್ಕೆ
ಡಂಕಿ’ ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.