Kolkata Film Festival: Timmana Mottegulu movie set to screen
ಕೋಲ್ಕತ್ತಾ ಚಿತ್ರೋತ್ಸವ: ಪ್ರದರ್ಶನಕ್ಕೆ ಸಜ್ಜಾದ “ತಿಮ್ಮನ ಮೊಟ್ಟೆಗಳು” ಚಿತ್ರ
ಶ್ರೀಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ ಅಯ್ಯಂಗಾರ್ ನಿರ್ಮಾಣದಲ್ಲಿ ರಕ್ಷಿತ್ ತೀರ್ಥಹಳ್ಳಿ ರವರ “ಕಾಡಿನ ನೆಂಟರು” ಪುಸ್ತಕದ ಆಧಾರದ ಮೇಲೆ ತಯಾರಾದ “ತಿಮ್ಮನ ಮೊಟ್ಟೆಗಳು” ಚಿತ್ರ “ಕೋಲ್ಕತ್ತಾ ಅಂತರಾಷ್ಟ್ರೀಯ ಡಿಸೆಂಬರ್ ಚಲನಚಿತ್ರೋತ್ಸವ” ದಲ್ಲಿ ಆಯ್ಕೆಯಾದ ಚಿತ್ರ 7 ರಂದು ಕೋಲ್ಕತ್ತಾದಲ್ಲಿ ಪ್ರದರ್ಶನಗೊಳ್ಳಲಿದೆ.
ಪರಿಸರ ಮತ್ತು ಮಾನವ ಸಂಬಂಧಗಳ ಸುತ್ತ ಹೆಣೆಯ ಕಥೆಯಲ್ಲಿ ಕಾಳಿಂಗ ಹಾವಿನ ಕೆಲವು ವಿಷಯಗಳು ಚಿತ್ರದ ಜೀವಾಳವಾಗಿದೆ.
ಸುಚೇಂದ್ರ ಪ್ರಸಾದ್, ಕೇಶವ್ ಗುತ್ತಳಿಕೆ, ಶೃಂಗೇರಿ ರಾಮಣ್ಣ, ಆಶಿಕಾ ಸೋಮಶೇಖರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ ಎಸ್ ಕೆಂಪರಾಜು ಸಂಕಲನ, ಹೇಮಂತ್ ಜೋಯಿಸ್ ಸಂಗೀತ, ಪ್ರವೀಣ್ ಎಸ್ ಛಾಯಾಗ್ರಾಹಣ ಚಿತ್ರಕ್ಕಿದೆ.