Ganesh Acharya choreographs the song for the movie "Nagabandham"

“ನಾಗಬಂಧಂ” ಚಿತ್ರದ ಹಾಡಿಗೆ ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ - CineNewsKannada.com

“ನಾಗಬಂಧಂ” ಚಿತ್ರದ ಹಾಡಿಗೆ ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ

ವಿರಾಟ್ ಕರ್ಣ್ ನಾಯಕನಾಗಿ ನಟಿಸಿರುವ, ಅಭಿಷೇಕ್ ನಾಮ ನಿರ್ದೇಶನದ, ಕಿಶೋರ್ ಅನ್ನಾಪುರರೆಡ್ಡಿ ಅವರು ಅಭಿಷೇಕ್ ಪಿಕ್ಚರ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ ಪ್ಯಾನ್-ಇಂಡಿಯಾ ಚಿತ್ರ “ನಾಗಬಂಧಂ”. ಪ್ರಸ್ತುತ ನಾಯಕ ವಿರಾಟ್ ಕರ್ಣ್ ಮತ್ತು ನಟಿಯರಾದ ನಭಾ ನಟೇಶ್ ಮತ್ತು ಐಶ್ವರ್ಯ ಮೆನನ್ ಅವರನ್ನು ಒಳಗೊಂಡ ಈ ಚಿತ್ರದ ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

ಯುವ ನಾಯಕ ವಿರಾಟ್ ಕರ್ಣ್ ಬಹುನಿರೀಕ್ಷಿತ ಪ್ಯಾನ್- ಇಂಡಿಯಾ ಚಿತ್ರ “ನಾಗಬಂಧಂ” ಈಗಾಗಲೇ ಪೋಸ್ಟರ್ ಮೂಲಕ ಹೈಪ್ ಕ್ರಿಯೇಟ್ ಮಾಡಿದೆ. ಅಷ್ಟೇ ದೊಡ್ಡ ಪ್ರಮಾಣದಲ್ಲಿಯೇ ಈ ಸಿನಿಮಾ ಮೂಡಿಬರುತ್ತಿದೆ. ಪ್ರಸ್ತುತ, ರಾಮನಾಯ್ಡು ಸ್ಟುಡಿಯೋದಲ್ಲಿ ಭವ್ಯವಾದ ಸೆಟ್ ಹಾಕಲಾಗುತ್ತಿದ್ದು, ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಸಂಗೀತ ನಿರ್ದೇಶಕ ಅಭೆ ಸಂಯೋಜಿಸಿದ್ದಾರೆ. ಈ ಹಾಡಿಗೆ ಕಾಲ ಭೈರವ, ಅನುರಾಗ್ ಕುಲಕರ್ಣಿ ಮತ್ತು ಮಂಗ್ಲಿ ಧ್ವನಿ ನೀಡಿದ್ದಾರೆ. ಕಾಸರ್ಲಾ ಶ್ಯಾಮ್ ಅವರ ಅದ್ಭುತ ಸಾಹಿತ್ಯವಿದೆ. ಮಾಸ್ಟರ್ ಗಣೇಶ್ ಆಚಾರ್ಯ ಅವರ ಕೋರಿಯಾಗ್ರಫಿ ಈ ಹಾಡಿನ ವಿಶೇಷತೆಗಳಲ್ಲೊಂದು.

“ದಿ ಸೀಕ್ರೆಟ್ ಟ್ರೆಷರ್” ಎಂಬ ಟ್ಯಾಗ್‍ಲೈನ್‍ನೊಂದಿಗೆ, “ನಾಗಬಂಧಂ” ಒಂದು ಮಹಾಕಾವ್ಯ ಸಾಹಸವಾಗಿ ರೂಪುಗೊಳ್ಳುತ್ತದೆ. ಅಭಿಷೇಕ್ ನಾಮ ಕಥೆ ಮತ್ತು ಚಿತ್ರಕಥೆ ಎರಡಕ್ಕೂ ತಮ್ಮ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕಿಶೋರ್ ಅನ್ನಾಪುರರೆಡ್ಡಿ ಈ ಚಿತ್ರ ನಿರ್ಮಿಸುತ್ತಿದ್ದು ಲಕ್ಷ್ಮಿ ಐರಾ ಮತ್ತು ದೇವಾಂಶ್ ನಾಮಾ ಇದನ್ನು ಪ್ರಸ್ತುತಪಡಿಸುತ್ತಾರೆ.

ಈ ಚಿತ್ರದಲ್ಲಿ, ವಿರಾಟ್ ಕರ್ಣ್ ನಾಯಕನಾಗಿ ನಟಿಸಿದ್ದಾರೆ. ನಭಾ ನಟೇಶ್ ಮತ್ತು ಐಶ್ವರ್ಯಾ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ. ಜಗಪತಿ ಬಾಬು, ರಿಷಭ್ ಸಹಾನಿ, ಜಯಪ್ರಕಾಶ್, ಜಾನ್ ವಿಜಯ್, ಮುರಳಿ ಶರ್ಮಾ, ಅನಸೂಯಾ, ಶರಣ್ಯ, ಈಶ್ವರ್ ರಾವ್, ಜಾನ್ ಕೊಕ್ಕಿನ್, ಅಂಕಿತ್ ಕೊಯ್ಯ, ಸೋನಿಯಾ ಸಿಂಗ್, ಮ್ಯಾಥ್ಯೂ ವರ್ಗಾಸ್, ಜೇಸನ್ ಶಾ, ಬಿ.ಎಸ್. ಅವಿನಾಶ್ ಮತ್ತು ಬೇಬಿ ಕಿಯಾರಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

“ನಾಗಬಂಧಂ” ಎಂಬ ಈ ಪ್ಯಾನ್-ಇಂಡಿಯನ್ ಚಿತ್ರವು ಪ್ರಾಚೀನ ಪುರಾಣಗಳಿಂದ ಪ್ರೇರಿತವಾದ ನಿರೂಪಣೆಯನ್ನು ಆಧ್ಯಾತ್ಮಿಕ ಸಾಹಸದ ವಿಷಯಗಳೊಂದಿಗೆ ಪ್ರೇಕ್ಷಕರಿಗೆ ಪರಿಚಯಿಸಲಿದೆ. ಪದ್ಮನಾಭಸ್ವಾಮಿ ಮತ್ತು ಪುರಿ ಜಗನ್ನಾಥ ದೇವಾಲಯಗಳಲ್ಲಿ ಇತ್ತೀಚೆಗೆ ಪತ್ತೆಯಾದ ಗುಪ್ತ ನಿಧಿಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾ, ಈ ಪವಿತ್ರ ಸ್ಥಳಗಳನ್ನು ಸಂರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಭಾರತದ ವಿಷ್ಣು ದೇವಾಲಯಗಳ ಸುತ್ತಲಿನ ರಹಸ್ಯಗಳನ್ನು ಈ ಸಿನಿಮಾ ತೆರೆದಿಡಲಿದೆ.

“ನಾಗಬಂಧಂ” 2025 ರಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin