Nani-Srinidhi Shetty..film to release on May 1st

ನಾನಿ-ಶ್ರೀನಿಧಿ ಶೆಟ್ಟಿ..ಮೇ 1ಕ್ಕೆ ಚಿತ್ರ ಬಿಡುಗಡೆ - CineNewsKannada.com

ನಾನಿ-ಶ್ರೀನಿಧಿ ಶೆಟ್ಟಿ..ಮೇ 1ಕ್ಕೆ ಚಿತ್ರ ಬಿಡುಗಡೆ

ಆಕ್ಷನ್ ಥ್ರಿಲ್ಲರ್ ‘ಹಿಟ್-3’ ಸಿನಿಮಾ ಮೇ1ಕ್ಕೆ ತೆರೆಗೆ ಬರ್ತಿದೆ. ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ಹಿಂದಿ, ಕನ್ನಡ, ತಮಿಳು ಭಾಷೆಗಳಿಗೂ ಡಬ್ ಆಗಿ ಪ್ರೇಕ್ಷಕರ ಮುಂದೆ ಬರಲಿದೆ.

ಶೈಲೇಶ್ ಕೋಲನು ನಿರ್ದೇಶನ ಚಿತ್ರಕ್ಕಿದೆ. ಈ ವೇಳೆ ಮಾತಿಗಿಳಿದ ನಟ ನಾನಿ , ಹಿಟ್-3 ಸಿನಿಮಾ ಮೇ ಒಂದರಂದು ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಂಬಿಕೆ ಇದೆ. ಸಿನಿಮಾ ನೋಡಿದೆ. ಅದ್ಭುತವಾಗಿ ಮೂಡಿಬಂದಿದೆ. ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಯಾವುದೇ ಜಾನರ್ ಗೆ ಸ್ಟಿಕ್ ಆಗುವುದಿಲ್ಲ. ಹೊಸದನ್ನು ಕಲಿಯಲು ಪ್ರಯತ್ನ ಮಾಡುತ್ತೇನೆ. ಶ್ರೀನಿಧಿ ಈ ಚಿತ್ರದಲ್ಲಿ ಕನ್ನಡ ಡಬ್ ಮಾಡಿದ್ದಾರೆ ಎಂದು ತಿಳಿಸಿದರು,

ಶ್ರೀನಿಧಿ ಶೆಟ್ಟಿ ಮಾತನಾಡಿ ಮೇ 1ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಮೂವೀ ಸ್ವಲ್ಪ ಸಮಯ ಆದ ಬಳಿಕ ಬರುತ್ತಿದೆ. ಮೂರುವರೆ ವರ್ಷದ ಬಳಿಕ ನನ್ನನ್ನು ತೆರೆಮೇಲೆ ನೋಡಿಕೊಳ್ಳುತ್ತಿದ್ದೇನೆ. ಕೆಜಿಎಫ್, ಕೆಜಿಎಫ್ 2 ಸಿನಿಮಾಗಳಿಗೆ ಕೊಟ್ಟ ಬೆಂಬಲ ಮುಂದುವರಿಯಲಿ ಎಂದರು

ಹಿಟ್ 3 ಭಾಗದಲ್ಲಿ ನಾನಿ ಹೀರೊ ಐಪಿಎಸ್ ಅರ್ಜುನ್ ಸರ್ಕಾರ್ ಆಗಿ ಅಬ್ಬರಿಸಿದ್ದಾರೆ. ಮೃದುಲಾ ಪಾತ್ರದಲ್ಲಿ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ‘ಹಿಟ್’ ಸರಣಿಯ ಹಿಂದಿನ 2 ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಪಾರ್ಟ್-3 ಕುತೂಹಲ ಮೂಡಿಸಿದೆ.

ಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು, ಮಿಕ್ಕಿ ಜೆ ಮೇಯರ್ ಸಂಗೀತ, ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನ ಹಿಟ್-3 ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin