ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಸದಭಿರುಚಿಯ ನಿರ್ಮಾಪಕ ರಮೇಶ್ ರೆಡ್ಡಿ

ಕನ್ನಡದ ಸದಭಿರುಚಿಯ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು ಕನ್ನಡ ಚಿತ್ರರಂಗದಲ್ಲಿ ಮಾಡಿದ ಯಶಸ್ಸನ್ನು ಬಾಲಿವುಡ್ ಚಿತ್ರರಂಗದಲ್ಲಿ ಪಡೆಯುವ ತವಕದಲ್ಲಿದ್ದಾರೆ.

ಸೈಬರ್ ಕಥಾ ಹಂದರ ಹೊಂದಿರುವ “ಘುಸ್ಪೈಥಿಯಾ” ಚಿತ್ರ ಆಗಸ್ಟ್ 9 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಚಿತ್ರದ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ
ಸ್ಯಾಂಡಲ್ ವುಡ್ ನಲ್ಲಿ ಉಪ್ಪು ಹುಳಿ ಖಾರ',
ನಾತಿಚರಾಮಿ’, ಪಡ್ಡೆಹುಲಿ',
100′, `ಗಾಳಿಪಟ 2′ ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ ” 45 ” ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನಿರ್ಮಾಪಕ ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ನಿರ್ಮಿಸಿರುವ ಈ ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ. ಸೈಬರ್ ಕ್ರೈಂ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿತು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದಾರೆ.
ಆಗಸ್ಟ್ ೯ ರಂದು ಎಎ ಫಿಲಂಸ್ ಮೂಲಕ ಬಿಡುಗಡೆಯಾಗಲಿರುವ ಈ ಚಿತ್ರದ ತಾರಾಬಳಗದಲ್ಲಿ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲ, ಅಕ್ಷಯ್ ಒಬೆರಾಯ್ ಮುಂತಾದವರಿದ್ದಾರೆ.