ಕೆ.ಆರ್.ಜಿ. ಕನೆಕ್ಟ್ಸ್ ಗೆ 4 ವರ್ಷಗಳ ಸಂಭ್ರಮ
ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಕೆ.ಆರ್.ಜಿ.ಸ್ಟೂಡಿಯೋಸ್ ನ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕಗಳ ಸಂಸ್ಥೆ ಕೆ.ಆರ್.ಜಿ ಕನೆಕ್ಟ್ಸ್ ಆರಂಭಗೊಂಡು ೪ ವರ್ಷಗಳು. ಈ ಅಂಗವಾಗಿ ಕೆ.ಆರ್.ಜಿ ಕನೆಕ್ಟ್ಸ್ ತನ್ನ ಹೊಸ ಲೋಗೋ ಬಿಡುಗಡೆ ಮಾಡಿದೆ.
2020ರಲ್ಲಿ ಆರಂಭಗೊಂಡ ಕನೆಕ್ಟ್ಸ್ ” ಹಲವಾರು ಚಿತ್ರಗಳನ್ನು ಮಾರ್ಕೆಟಿಂಗ್ ಮಾಡಿ, ತನ್ನದೇ ಆದ ಛಾಪನ್ನು ಮೂಡಿಸಿದೆ. ಆಕ್ಟ್ 1978 ಚಿತ್ರದಿಂದ ಆರಂಭಗೊಂಡ ಮಾರ್ಕೆಟಿಂಗ್ ಪಯಣ, ಹೊಸ ಆವಿಷ್ಕಾರಗಳೊಡನೆ ಇಂದಿಗೂ ಸಾಗುತ್ತಿದೆ. “ಕನೆಕ್ಟ್ಸ್ ” ಮಾರ್ಕೆಟಿಂಗ್ ಮಾಡಿದ ಬ್ಲಾಕ್ ಬಸ್ಟರ್ ಚಿತ್ರಗಳಾದ “ಕೆ.ಜಿ.ಎಫ್”, “ಯುವರತ್ನ”, “ಕಾಂತಾರ”, “ಬಡವ ರಾಸ್ಕಲ್”, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಅಭೂತಪೂರ್ವ ಹೆಸರನ್ನು ಗಳಿಸಿದೆ.
ಕನ್ನಡ ಚಿತ್ರರಂಗದದಲ್ಲಿ ಮಾರ್ಕೆಟಿಂಗ್ ಕೌಶಲ್ಯವನ್ನು, ತಂತ್ರಗಳನ್ನು ರೂಪಿಸುವಲ್ಲಿ ಕನೆಕ್ಟ್ಸ್ ” ವಿಶಿಷ್ಟ ಹೆಸರನ್ನು ಗಳಿಸಿದೆ. ಅಷ್ಟೇ ಅಲ್ಲದೆ, ವಿಭಿನ್ನವಾದ ಸಹಯೋಗಗಳ ಮೂಲಕ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.
ಹೆಸರಾಂತ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವಾದ ಡ್ರೆಸ್ಸಿಂಗ್ ರೂಮ್ ಶೋನೊಂದಿಗೆ (ಡಿ.ಆರ್.ಎಸ್) ಒಂದು ವಿಶೇಷವಾದ ಸಹಯೋಗಕ್ಕೆ ಮುಂದಾಗಿದೆ. ಕೆ.ಆರ್.ಜಿ.ಸ್ಟೂಡಿಯೋಸ್ ನ ಮುಂಬರುವ “ಪೌಡರ್” ಚಿತ್ರಕ್ಕಾಗಿ, ಮಾರ್ಕೆಟಿಂಗ್ ತಂಡ 1522-ದಿ ಪಬ್ ಜೊತೆಗೆ ಸಹಯೋಗಕ್ಕೆ ಕೈ ಜೋಡಿಸಿದೆ.
ಕೆ.ಆರ್.ಜಿ ಕನೆಕ್ಟ್ಸ್ ವಿಭಿನ್ನ ಮಾರ್ಕೆಟಿಂಗ್ ಯೋಜನೆಗಳಿಗೆ ಸಾಥ್ ನೀಡುವುದು ಅದರ ಕ್ರಿಯೇಟಿವ್ ತಂಡ. ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಈ ತಂಡ ತನ್ನ ವಿಭಿನ್ನವಾದ “ಕ್ಯಾರೆಕ್ಟರ್ ಪೋಸ್ಟರ್” ಗಳ ಮೂಲಕ ಎಲ್ಲರ ಗಮನ ಸೆಳೆದಿದೆ.