ಅಭಿಮಾನಿಗಳ ಪ್ರಶ್ನೆಗೆ ಶಾರುಖ್ ಖಾನ್ ಉತ್ತರ : ಡಂಕಿ ಅರ್ಥ ತಿಳಿಸಿದ ಕಿಂಗ್ ಖಾನ್
ಬಾಲಿವುಡ್ ಬಾದ್ ಶಾ ಅಭಿನಯದ `ಡಂಕಿ’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗುತ್ತಿದೆ. ಶಾರುಖ್ ಖಾನ್, ತಾಪ್ಸೀ ಪನ್ನು, ವಿಕ್ಕಿ ಕೌಶಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಟೀಸರ್ ಹಾಗೂ ಹಾಡು ಗಮನ ಸೆಳೆದಿದೆ.
ಅದ್ರಲ್ಲೂ ಶಾರುಖ್ ಖಾನ್ ನಟನೆಯ ಪಠಾಣ್' ಹಾಗೂ
ಜವಾನ್’ ಸಿನಿಮಾ ಹಿಟ್ ಆದ ಬಳಿಕ `ಡಂಕಿ’ ಚಿತ್ರದ ಬಗ್ಗೆ ಇರುವ ನಿರೀಕ್ಷೆ ದ್ವಿಗುಣವಾಗಿದೆ. ಅಷ್ಟಕ್ಕೂ ಡಂಕಿ ಅರ್ಥ ಏನೆಂದು ತಿಳಿಯಬೇಕಿದೆ. ಅಭಿಮಾನಿಗಳಿಂದ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ತಮ್ಮದೇ ಸ್ಟೈಲ್ನಲ್ಲಿ ಶಾರುಖ್ ಉತ್ತರ ನೀಡಿದ್ದಾರೆ.
ಶಾರುಖ್ ಖಾನ್ ಅಭಿಮಾನಿ ಬಳಗ ದೊಡ್ಡದಿದೆ. ಸಮಯ ಸಿಕ್ಕಾಗ ಅವರು ಟ್ವಿಟರ್‍ನಲ್ಲಿ #AskSRK ಸೆಷನ್ ನಡೆಸುತ್ತಾರೆ. ಅಭಿಮಾನಿಗಳು ತಮ್ಮಿಷ್ಟದ ಪ್ರಶ್ನೆ ಮುಂದಿಡಬಹುದು. ಇದಕ್ಕೆ ಶಾರುಖ್ ಖಾನ್ ಉತ್ತರಿಸುವ ಪ್ರಯತ್ನ ಮಾಡುತ್ತಾರೆ. ಅವರಿಗೆ ಹಲವು ರೀತಿಯ ಪ್ರಶ್ನೆಗಳು ಎದುರಾಗುತ್ತವೆ. ಆ ಪೈಕಿ `ಡಂಕಿ’ ಸಿನಿಮಾ ಬಗ್ಗೆಯೂ ಪ್ರಶ್ನೆ ಕೇಳಲಾಗಿದೆ.
ಅಭಿಮಾನಿಯೋರ್ವ ಡಂಕಿ ಅರ್ಥ ಕೇಳಿದ್ದಾನೆ. ಇದಕ್ಕೆ ಶಾರುಖ್ ಖಾನ್ ಅವರ ಉತ್ತರ ಸಖತ್ ಫನ್ನಿ ಆಗಿತ್ತು. ಕಾನೂನು ಬಾಹಿರವಾಗಿ ಗಡಿ ಪ್ರವೇಶಕ್ಕೆ ಡಂಕಿ ಎಂದು ಕರೆಯಲಾಗಿದೆ. ಅದನ್ನು ಡಂಕಿ ಎಂದು ಉಚ್ಛರಿಸಲಾಗುತ್ತದೆ. ಆದರೆ ಫಂಕಿ…ಹಂಕಿ….ಅಥವಾ ಮಂಕಿ ಎಂದು ಉಚ್ಚರಿಸಲಾಗುತ್ತಿದೆ ಎಂದು ಫನ್ ಆಗಿ ಉತ್ತರಿಸಿದ್ದಾರೆ.
ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‍ಟೇನ್‍ಮೆಂಟ್ ಮತ್ತು ರಾಜ್‍ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‍ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‍ಮಸ್ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.