ಅದ್ದೂರಿಯಾಗಿ ಸೆಟ್ಟೇರಿದ “ಸಿಂಹರೂಪಿಣಿ” : ಮತ್ತೆ ನಿರ್ದೇಶನಕ್ಕೆ ಗೀತರಚನೆಕಾರ ಕಿನ್ನಾಳ್ ರಾಜ್

ಪ್ರಸಕ್ತ ಭಕ್ತಿ ಪ್ರಧಾನ ಚಿತ್ರಗಳು ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ, ಸದ್ಯ ‘ಸಿಂಹರೂಪಿಣಿ’ ಎನ್ನುವ ಸಿನಿಮಾವು ತುಳಸಿಹಬ್ಬದ ಶುಭ ದಿನದಂದು ಹೆಣ್ಣೂರು ಮುಖ್ಯ ರಸ್ತೆ, ಯರಪ್ಪನಹಳ್ಳಿಯಲ್ಲಿರುವ ‘ಶ್ರೀ ಆದಿಶಕ್ತಿ ಮಾರಮ್ಮ ದೇವಿ’ ಸನ್ನಿದಿಯಲ್ಲಿ ಅದ್ದೂರಿಯಾಗಿ ಮುಹೂರ್ತ ನಡೆಯಿತು.

ಜೆಂಟಲ್‍ಮ್ಯಾನ್, ಕಬ್ಜ, ಮದಗಜ ಮತ್ತು ‘ಕೆಜಿಎಫ್’ ಚಿತ್ರಕ್ಕೆ ಅಮ್ಮನ ಹಾಡು ಬರೆದಿರುವ ಕಿನ್ನಾಳ ರಾಜ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವುದು ಎರಡನೇ ಅನುಭವ. ದೇವಿಯ ಪರಮಭಕ್ತ ದೊಡ್ಡಬಳ್ಳಾಪುರದ ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಿಂಸ್ ಅಡಿ ನಿರ್ಮಾಣ ಮಾಡುತ್ತಿದ್ದಾರೆ.

ಶೀರ್ಷಿಕೆ ಹೇಳುವಂತೆ ಶ್ರೀ ಮಾರಮ್ಮ ದೇವಿ ಕುರಿತಾಗಿದ್ದು, ಗ್ರಾಫಿಕ್ಸ್ ತಂತ್ರಜ್ಘಾನ ಇರುವುದು ವಿಶೇಷ. ಸಪ್ತ ಮಾತ್ರ್ರಿಕೆಯರ ವಿಷಯಗಳನ್ನು ಹೊಂದಿದ್ದು, ರಾಕ್ಷಸನನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾಳೆ. ಅದರಲ್ಲಿ ಕೊನೆಯದು ಶ್ರೀ ಮಾರಮ್ಮ ದೇವಿಯದು ಆಗಿರುತ್ತದೆ. ಹಾಗೂ ತಾಯಿಯ ಪವಾಡಗಳನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ತಾರಾಗಣದಲ್ಲಿ ಹರೀಶ್‍ರಾಯ್, ಯಶ್‍ಶೆಟ್ಟಿ, ದಿನೇಶ್‍ಮಂಗಳೂರು, ಪುನೀತ್‍ರುದ್ರನಾಗ್, ನೀನಾಸಂ ಅಶ್ವತ್ಥ್, ಹಿರಿಯ ನಟ ಸುಮನ್, ತಮಿಳಿನ ದಿನಾ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹೊಸ ಪ್ರತಿಭೆ ಸಾಗರ್, ನಿರೂಪಕಿ ಅಂಕಿತಾಗೌಡ ಈ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿ ಕೊಳ್ಳುತ್ತಿದ್ದಾರೆ.
ಉಳಿದಂತೆ ಯಶಸ್ವಿನಿ, ಭಜರಂಗಿ ಪ್ರಸನ್ನ, ಬಲರಾಜವಾಡಿ, ವಿಜಯ್‍ಚೆಂಡೂರು, ಗಣೇಶ್‍ರಾವ್, ನಟ ವರ್ದನ್. ಮನ ಮೋಹನ್‍ರೈ, ಹಿಟ್ಲರ್ ಸಿನಿಮಾದ ನಾಯಕ ಆರವ್‍ಲೋಹಿತ್, ಪೀಳ್ಳಣ್ಣ, ಕೆಂಪೆಗೌಡ, ರೀಲ್ಸ್ ಹಾಗೂ ಶಾರ್ಟ್ ಫಿಲಂಸ್ ಮೂಲಕ ಮನೆ ಮಾತಾಗಿರುವ ಭೂಮಿಕಮಂಜುನಾಥ್, ಮಧುಶ್ರೀ, ರಾಶೀಕ, ವೇದಾಹಾಸನ್, ಸುನಂದಕಲ್ಬುರ್ಗಿ ಮುಂತಾದವರು ನಟಿಸುತ್ತಿದ್ದಾರೆ.

ನಾಲ್ಕು ಗೀತೆಗಳಿಗೆ ಆಕಾಶ್‍ಪರ್ವ ಸಂಗೀತ ಸಂಯೋಹಿಸುತ್ತಿದ್ದಾರೆ. ಛಾಯಾಗ್ರಹಣ ನಂದಕುಮಾರ್, ಸಂಕಲನ ವೆಂಕಿ.ಯು.ಡಿ.ವಿ, ನೃತ್ಯ ಅರುಣ್‍ರೈ, ಸಾಹಸ ಚಂದ್ರುಬಂಡೆ, ಕಾರ್ಯಕಾರಿ ನಿರ್ಮಾಪಕ ಕೆ.ಬಾಲಸುಬ್ರ್ರಮಣ್ಯಂ ಚಿತ್ರತಂಡದಲ್ಲಿದ್ದಾರೆ. ಬೆಂಗಳೂರು, ದೊಡ್ಡಬಳ್ಳಾಪುರ ಹಾಗೂ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅಂದುಕೊಂಡಂತೆ ಆದರೆ ಯುಗಾದಿ ಹಬ್ಬಕ್ಕೆ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.