“ ಮಿರಾಯಿ” ಚಿತ್ರದ ಟ್ರೈಲರ್ ಅಬ್ಬರ: ತೇಜ್ ಸಜ್ಜಾ ನಟನೆ ಚಿತ್ರದ ಕುತೂಹಲ ಹೆಚ್ಚಳ
“ಹನುಮಾನ್” ಚಿತ್ರದ ಮೂಲಕ ದೇಶಾದ್ಯಂತ ಬಾರಿ ಅಭಿಮಾನಿ ಬಳಗ ಹೊಂದಿರುವ ತೆಲುಗು ಯುವ ನಟ ತೇಜ ಸಜ್ಜಾ ಈಗ ಸೂಪರ್ ಯೋಧನಾಗಿ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ.ಅದುವೇ “ ಮಿರಾಯಿ” ಚಿತ್ರದ ಮೂಲಕ.

‘ಮಿರಾಯಿ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಪ್ರೇಕ್ಷಕರಿಗೆ ಭರ್ಜರಿ ವಿಷ್ಯುವಲ್ ಟ್ರೀಟ್ ನೀಡಿದ್ದು ಮೂರು ನಿಮಿಷ ಏಳು ಸೆಕೆಂಡ್ನ ಟ್ರೈಲರ್ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದೆ
ನಟ ತೇಜ್ ಸಜ್ಜಾ ಸೂಪರ್ ಯೋಧನಾಗಿ ಜನರನ್ನು ರಕ್ಷಿಸಲು ಹೋರಾಟ ಮಾಡ್ತಾರೆ. ಅವರ ವಿರುದ್ಧ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಭರ್ಜರಿ ಆಕ್ಷನ್ ಜೊತೆಗೆ ಪುರಾಣದ ಕಥೆಯನ್ನು ಸೊಗಸಾಗಿ ಟ್ರೇಲರ್ ನಲ್ಲಿ ಕಟ್ಟಿಕೊಡಲಾಗಿದೆ. ಧರ್ಮ ರಕ್ಷಕನಾಗಿ ತೇಜ ಸಜ್ಜಾ ಹೋರಾಟ ನಡೆಸುತ್ತಾರೆ. ಟ್ರೇಲರ್ ಕೊನೆಯಲ್ಲಿ ಬರುವ ಭಗವಾನ್ ಶ್ರೀರಾಮ ಝಲಕ್ ಪ್ರೇಕ್ಷಕರಿಗೆ ರೋಮಾಂಚನ ನೀಡಲಿದೆ.
ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡಿದ್ದಾರೆ. ರಿತಿಕಾ ನಾಯಕ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮಿರಾಯ್ಗೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀನಾಗೇಂದ್ರ ತಂಗಳ ಕಲಾ ನಿರ್ದೇಶನ ಚಿತ್ರಕ್ಕಿದ್ದು, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.ಸೆಪ್ಟೆಂಬರ್ 12ರಂದು ಮಿರಾಯ್ ಸಿನಿಮಾ 2ಡಿ ಮತ್ತು 3ಡಿ ಮಾದರಿಯಲ್ಲಿ ಕನ್ನಡ ಸೇರಿದಂತೆ ಏಳು ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ

