ಅಮರಾವತಿಗೆ ಹೊಸ ಡಾನ್ ಅರಕೇಶ್ವರ
“ಕಬ್ಜ ” ಭೂಗತ ಲೋಕದ ಹೊಸ ಅಧ್ಯಾಯ
ಚಿತ್ರ: ಕಬ್ಜ
ನಿರ್ದೇಶನ : ಆರ್. ಚಂದ್ರು,
ತಾರಾಗಣ: ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಶ್ರೀಯಾ ಸರಣ್, ಅನೂಪ್ ರೇವಣ್ಣ, ನೀನಾಸಂ ಅಶ್ವಥ್, ಸುನೀಲ್ ಪುರಾಣಿಕ್, ತಾನ್ಯಾ ಹೋಪ್ ಮತ್ತಿತರರು
ರೇಟಿಂಗ್: **** 4.5 / 5ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- ** * / ಉತ್ತಮ – **** / ಅತ್ಯುತ್ತಮ – ***** /
ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಒಂದಷ್ಟು ವರ್ಷಗಳನ್ನು ಮುಂದಿಟ್ಟುಕೊಂಡು ಸ್ವಾಂತಂತ್ರ್ತ ಹೋರಾಟಗಾರನ ಅಮಾಯಕ ಪುತ್ರ ಗ್ಯಾಂಗ್‍ಸ್ಟರ್ ಆಗಿ ಬೆಳೆದ ರೋಚಕ ಕಥೆಯನ್ನು ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ “ಕಬ್ಜ”.
ಕನ್ನಡಕ್ಕಿರುವ ಮಾರುಕಟ್ಟೆ, ಬಂಡವಾಳದ ಮಿತಿಯ ಎಲ್ಲಾ ಗಡಿ ದಾಟಿ ಕಬ್ಜ ಚಿತ್ರದವನ್ನು ಕರ್ನಾಟಕದ ಗಡಿ ಮಾತ್ರವಲ್ಲ ಭಾರತ ಮತ್ತು ಸಾಗರದಾಚೆಯ ಗಡಿವರೆಗೂ ವಿಸ್ತರಿಸಿರುವ ದೃಶ್ಯ ವೈಭವದ ಅನಾವರಣ ಹೊಂದಿರುವ ಚಿತ್ರ ಇದು.
“ಕಬ್ಜ” ಚಿತ್ರ ಹಲವು ಕಾರಣಕ್ಕೆ ವಿಭಿನ್ನ ಮತ್ತು ವಿಚಿಷ್ಠತೆ ಮತ್ತು ವೈಶಿಷ್ಟ ಹೊಂದಿದೆ. ಚಿತ್ರದ ಕಥೆಯನ್ನು ಹೇಳುವ ದಾಟಿ, ದೃಶ್ಯಗಳನ್ನು ಕಟ್ಟಿಕೊಟ್ಟಿರುವ ರೀತಿ, ಸನ್ನಿವೇಶಗಳನ್ನು ಪೆÇೀಣಿಸಿರುವ ಬಗೆ, ಕಥೆಗೆ ಪೂರಕವಾಗಿ ಸೃಷ್ಟಿಯಾಗಿರುವ ಅಮರಾವತಿಯ ಅದ್ದುತ ಲೋಕ.,ಇದಕ್ಕೆಲ್ಲಾ ಮೂಲ ಕಾರಣ ಆರ್.ಚಂದ್ರು ಎನ್ನುವ ಧೈತ್ಯ ಪ್ರತಿಭೆಯ ಸಾಹಸ,
ಕನ್ನಡದ ಮಂದಿಗೆ ಮತ್ತು ಚಿತ್ರರಂಗದವರಿಗೆ ಯಾಕೆ ಅಂದುಕೊಂಡಿದ್ದನ್ನು ಮಾಡಲು ಸಾದ್ಯವಾಗುವುದಿಲ್ಲ ಎನ್ನುವ ಛಲದೊಂದಿಗೆ ಅಸಾದ್ಯವಾದುದನ್ನು ಸಾದ್ಯ ಮಾಡಿದ ಅದರಲ್ಲಿ ಗೆದ್ದಿದ್ದಾರೆ.
“ಕಬ್ಜ” ಕಲಾನಿರ್ದೇಶಕ ಶಿವಕುಮಾರ್ ಅವರ ಕಸರತ್ತು ಎಜೆ ಶೆಟ್ಟಿ ಕ್ಯಾಮರಾ ಕೈಚಳ, ರವಿ ಬಸ್ರೂರ್ ಸಂಗೀತ ಮಾಂತ್ರಿಕನ ಆಟ, ಘಟಾನುಘಟಿ ಕಲಾವಿದರನ್ನು ಮೂರು ನಾಲ್ಕು ವರ್ಷ ಹಿಡಿದಿಟ್ಟುಕೊಳ್ಳುವ ಜೊತೆಗೆ ಕಥೆಯ ರಹಸ್ಯ ಕಾಪಾಡಿಕೊಂಡು ಬಂದು ಎಲ್ಲರ ಮೆಚ್ಚುಗೆ ಗಳಿಸುವುದು ಸುಲಭದ ಕೆಲಸವಲ್ಲ,ಅಂದುಕೊಂಡಿದ್ದನ್ನು ಚಂದ್ರು ಅಚ್ಚು ಕಟ್ಟಾಗಿ ಮಾಡಿದ್ದಾರೆ . ಕಬ್ಜ ಚಿತ್ರದ ನಿಜವಾದ ಸೂಪರ್ ಸ್ಟಾರ್ ಆರ್.ಚಂದ್ರು.
ಕಬ್ಜ ಚಿತ್ರದ ದೃಶ್ಯವೈಭವವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ಚಂದ್ರು ಎರಡನೇ ಭಾಗದ ಕಥೆಗೆ ಮತ್ತಷ್ಡು ರಣ ರೋಚಕತೆ ಸೃಷ್ಟತಿ ಮಾಡುವ ಸುಳಿವು ನೀಡಿದ್ದಾರೆ.
ಸ್ಬಾತಂತ್ರ್ಯ ಹೋರಾಟಗಾರನ ಹಿರಿಯ ಪುತ್ರ ಸಂಕೇಶ್ವರ (ಸುನೀಲ್ ಪುರಾಣಿಕ್) ಕಿರಿಯ ಪುತ್ರ ಅರಕೇಶ್ವರ ( ಉಪೇಂದ್ರ) ನನ್ನು ಬಗಲಲಿಟ್ಟುಕೊಂಡು ಬದುಕುಕೊಟ್ಟಿಕೊಳ್ಳಲು ಉತ್ತರ ಭಾರತದಿಂದ ದಕ್ಣಿಣ ಭಾರತಕ್ಕೆ ವಲಸೆ ಬಂದ ತಾಯಿ.
ರಾಜಮನೆತನದ ಅರಸೊತ್ತಿಗೆಯನ್ನು ಕಳೆದಕೊಂಡು ವಿಲವಿಲ ಎಂದು ಒದ್ಸಾಡುವ ಮಂದಿ, ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎನ್ನುವ ಹಂಬಲ.
ಅರಕೇಶ್ವರ ಪೈಲೆಟ್ ತರಬೇತಿ ಪಡೆದವ, ಆತನ ಮೇಲೆ ರಾಜವಂಶದ ಯುವರಾಣಿ (ಶ್ರೀಯಾ ಸರಣ್) ಗೆ ಬಾಲ್ಯದಿಂದಲೇ ಒಲವು. ಬಹದ್ದೂರು ವಂಶದ ರಾಜನಿಗೆ ಪುತ್ರಿ ಸಾಮಾನ್ಯ ಯುವಕನ್ನು ಮದುವೆಯಾಗುವುದು ಇಷ್ಟವಿಲ್ಲ..
ಈ ನಡುವೆ ಅನಿರೀಕ್ಷಿತವಾಗಿ ಭೂಗತ ಲೋಕದ ಹೊಸ ಡಾನ್ ಅದ ಅರಕೇಶ್ವರ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡು, ಜನರಿಗೆ ಅಡ್ಡಗಾಲು ಹಾಕಿದ್ದರಿಗೆ ಯಮಲೋಖದ ದಾರಿ ತೋರಿಸಿದವ. ಅರಕೇಶ್ವರನ ಬಗ್ಗೆ ಒಲವಿದ್ದ ಮಧುಮತಿ ಹಠ ಬಿಡದ ಆತನನ್ನೇ ಮದುವೆಯಾಗುತ್ತಾಳೆ. ಅಲ್ಲಿಂದಲ್ಲೇ ಒಳ ಒಳಗೆ ಕತ್ತಿ ಮಸೆಯುವ ಮಾವ, ಮಗಳು ಮೊಮ್ಮಕ್ಕಳನ್ನು ಗೃಹ ಬಂಧನದಲ್ಲಿರಿಸಿ ಅರಕೇಶ್ವರನಿಗೆ ಅಂತ್ಯ ಹಾಡಲು ಕುತಂತ್ರ ನಡೆಸುತ್ತಾನೆ.ಈ ನಡುವೆ ಶಿವರಾಜ್ ಕುಮಾರ್ ಪಾತ್ರ ದುತ್ತನೆ ಪ್ರತ್ಯಕ್ಷವಾಗುತ್ತದೆ. ಅಲ್ಲಿಂದ ಕಬ್ಜ ಎರಡನೇ ಭಾಗದ ಚಿತ್ರ ಬಲು ರೋಚಕ ಅನುಭವಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ.
ನಟ ಉಪೇಂದ್ರ ಇದುವರೆಗೂ ಕಾಣಿಸಿಕೊಂಡ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ . ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ನಟಿ ಶ್ರೀಯಾ ಸರಣ್, ಪಾತ್ರವೂ ಚಿತ್ರದಲ್ಲಿ ಪ್ರಾಮುಖ್ಯತೆ ಪಡೆದಿದೆ. ರಾಜಮನೆತನದ ಮಗಳಾಗಿ ಆಕೆಯ ದೃಢ ನಿಲುವು ಚಿತ್ರದ ಕುತೂಹಲ ಹೆಚ್ಚಿಸಿದೆ.
ಕಿಚ್ಚ ಸುದೀಪ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅರಕೇಶ್ವರನ ಇಡೀ ಕಡೆಯನ್ನು ನಿರೂಪಿಸುವ ಜವಾಬ್ದಾರಿಯನ್ನು ಹೊತ್ತಿದ್ದು ಚಿತ್ರಕ್ಕೆ ಮತ್ತಷ್ಟು ತೂಕ ಬಂದಿದೆ. ಬಿ.ಸುರೇಶ್, ನೀನಾಸಂ ಅಶ್ವಥ್, ಅನೂಪ್ ರೇವಣ್ಣ, ತಾನ್ಯಾ ಹೋಪ್ ಸೇರಿದಂತೆ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ.
ಅದ್ದೂರಿಯನ್ನು ದೃಶ್ಯ ವೈಭವವನ್ನು ತೆರೆಗೆ ಕಟ್ಟಿಕೊಟ್ಟಿರುವ ಚಂದ್ರು ಗೆದ್ದಿದ್ದಾರೆ. ಮತ್ತೊಂದು ಕನ್ನಡದ ಸಿನಿಮಾ ಗಡಿಯಾಚೆ ಸದ್ದು ಮಾಡುವುದು ಖಾತ್ರಿಯಾಗಿದೆ.