ಬಾಲಿವುಡ್ನಲ್ಲೂ ಅರ್ಕೇಶ್ವರನದ್ದೇ ಆರ್ಭಟ … ಬಿ-ಟೌನ್ ‘ಕಬ್ಜ’

ಉಪೇಂದ್ರ, ಸುದೀಪ್ ಅಭಿನಯದ ‘ಕಬ್ಜ’ ಅಲೆ ಜೋರಾಗಿದೆ. ಬರೀ ಬೆಂಗಳೂರಿನಲ್ಲಷ್ಟೇ ಅಲ್ಲ, ದೂರದ ಮುಂಬೈನಲ್ಲೂ ಅರ್ಕೇಶ್ವರನದ್ದೇ ಆರ್ಭಟ … ಭಾರ್ಗವ್ ಭಕ್ಷಿಯದ್ದೇ ಹವಾ …


ಆರ್. ಚಂದ್ರು ನಿರ್ಮಾಣದ, ನಿರ್ದೇಶನದ ‘ಕಬ್ಜ’ ಚಿತ್ರದ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಗುರುವಾರ ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಬಂದಿದೆ.

ಮುಂಬೈನಲ್ಲಿ ‘ಕಬ್ಜ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಬಹಳ ಗ್ರ್ಯಾಂಡ್ ಆಗಿ ನಡೆದಿದೆ.
ಹಿಂದಿ ಚಿತ್ರರಂಗದ ಜನಪ್ರಿಯ ನಿರ್ಮಾಪಕ ಮತ್ತು ವಿತರಕ ಆನಂದ್ ಪಂಡಿತ್, ‘ಕಬ್ಜ’ ಚಿತ್ರದ ಹಿಂದಿ ಭಾಷೆಯ ವಿತರಣೆಯ ಹಕ್ಕುಗಳನ್ನು ಪಡೆದಾಗಲೇ, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಅದಕ್ಕೆ ತಕ್ಕ ಹಾಗೆ ಅದ್ದೂರಿಯಾಗಿ ಪ್ರಿ-ರಿಲೀಸ್ ಈವೆಂಟ್ ಆಯೋಜಿಸಿದ್ದರು ಆನಂದ್ ಪಂಡಿತ್.

ಮೊದಲಿಗೆ ಬುಲೆಟ್ ಮೂಲಕ ಸುಮಾರು 60 ಬೈಕ್ಗಳಲ್ಲಿ ಎರಡೂ ವರೆ ಕಿ.ಮೀ Rallt ಮಾಡಲಾಯಿತ. ಉಪೇಂದ್ರ, ಆನಂದ್ ಪಂಡಿತ್ ಬುಲೆಟ್ ಏರಿ ಸವಾರಿ ಮಾಡಿದರು. ಇನ್ನು, ಸುದೀಪ್, ಶ್ರೇಯಾ ಶರಣ್ ಸಹ ಅವರಿಗೆ ಸಾಥ್ ಕೊಟ್ಟರು.

ನಂತರ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ಉಪೇಂದ್ರ, ಮುಂಬೈನಲ್ಲಿ ಚಿತ್ರದ ಪ್ರಚಾರ ಮಾಡುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವುದರ ಜತೆಗೆ, ಅಭಿಮಾನಿಗಳ ಈ ಪ್ರೀತಿ ನೋಡಿ ತಮ್ಮ ಕಣ್ತುಂಬಿ ಬಂದಿದೆ ಎಂದರು. ಚಿತ್ರವನ್ನು ನೋಡಿ ಹರಸಿ, ಹಾರೈಸಿ ಎಂದರು.

ಸುದೀಪ್ಗೆ ಮುಂಬೈ ಹೊಸದಲ್ಲ. ಈಗಾಗಲೇ ಅಲ್ಲಿ ಸಾಕಷ್ಟು ಕೆಲಸ ಮಾಡಿರುವ ಅವರು, ತಮ್ಮ ಹೃದಯದಲ್ಲಿ ಮುಂಬೈ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದರು. ‘ಜನ ನಮ್ಮ ಚಿತ್ರದ ಟ್ರೇಲರ್ಗೆ ಸಾಕಷ್ಟು ಪ್ರೀತಿ ತೋರುತ್ತಿದ್ದಾರೆ. ಈ ಪ್ರೀತಿ ಚಿತ್ರ ಬಿಡುಗಡೆಯಾದ ಮೇಲೂ ಮುಂದುವರೆಯಲಿ’ ಎಂದು ಹೇಳಿದರು.
‘ಕಬ್ಜ’ ಚಿತ್ರವು ಮಾರ್ಚ್ ೧೭ ರಂದು ಜಗತ್ತಿನಾದ್ಯಂತ 50 ದೇಶಗಳ 4 ಸಾವಿರ ಪರದೆಗಳಲ್ಲಿ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.