“ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಚಿತ್ರದ ಸ್ಟೂಡೆಂಟ್ ಪಾರ್ಟಿ ವೀಡಿಯೋ ಹಾಡು ಬಿಡುಗಡೆ
ಅರುಣ್ ಅಮುಕ್ತ ನಿರ್ದೇಶನದ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಚಿತ್ರದ ಸ್ಟೂಡೆಂಟ್ ಪಾರ್ಟಿ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ನಿರ್ದೇಶಕ ಅರುಣ್ ಅಮುಕ್ತ, ಚಂದನ್ ಶೆಟ್ಟಿ, ಚೇತನ್ ಕುಮಾರ್ ಸೇರಿ ಇಡೀ ತಂಡ ಈ ವೇಳೆ ಸಾಕ್ಷಿಯಾಯಿತು
ಈಗ ಬಿಡುಗಡೆಯಾಗಿರುವ ಹಾಡು ರ್ಯಾಪ್ ಶೈಲಿಯಲ್ಲಿ ಮೂಡಿ ಬಂದಿದೆ. ಚೇತನ್ ಕುಮಾರ್ ಸಾಹಿತ್ಯಕ್ಕೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಅವರುಗಳ ಎರಡನೇ ಸಮಾಗಮ.
ವಿಜೇತ್ ಕೃಷ್ಣ, ಚಂದನ್ ಶೆಟ್ಟಿ ಮತ್ತು ಚೇತನ್ ಕುಮಾರ್ ದಶಕದ ಹಿಂದೆ ರೂಂ ಮೇಟ್ ಗಳಾಗಿದ್ದರಂತೆ. ಈ ಹಿಂದೆ ವಿಜೇತ್ ಮತ್ತು ಚಂದನ್ ಶೆಟ್ಟಿ ಸಮಾಗಮದಲ್ಲಿ ಒಂದೇ ಒಂದು ಪೆಗ್ಗಿಗೆ ಎಂಬ ಹಾಡು ಬಂದಿತ್ತು. ಅದು ಸೂಪರ್ ಹಿಟ್ ಆಗಿತ್ತು. ಈ ಹಾಡೂ ಅದೇ ರೀತಿ ಹಿಟ್ಟಾಗಲೆಂಬ ಆಶಯವನ್ನ ಚಂದನ್ ಶೆಟ್ಟಿ ವ್ಯಕ್ತ ಪಡಿಸಿದ್ದಾರೆ.
ಸಾಹಿತ್ಯ ಬರೆದಿರುವ ಚೇತನ್ ಕುಮಾರ್ ಅವರಿಗೆ ವಿಜೇತ್ ಕೃಷ್ಣ ಅವರ ಸಂಗೀತ ಅಂದ್ರೆ ಇಷ್ಟವಂತೆ. ಆ ಪ್ರೀತಿಯಿಂದಲೇ ಈ ಹಾಡು ಬರೆದಿದ್ದೇನೆಂದಿರುವ ಚೇತನ್, ಇದೂ ಜನಮನ ಗೆಲ್ಲಲೆಂದು ಹಾರೈಸಿದ್ದಾರೆ. ಈ ವೇದಿಕೆಯಲ್ಲಿ ಸದರಿ ಹಾಡಿನಲ್ಲಿ ನಟಿಸಿರುವ ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಕೂಡಾ ಹಾಜರಿದ್ದರು.
ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ
ಅರುಣ್ ಸುರೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಚಂದನ್ ಶೆಟ್ಟಿ , ಅಮರ್, ಭಾವನಾ, ಮನಸ್ವಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.