ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಬಹುಮುಖ ಪ್ರತಿಭೆಯ ಹಿನ್ನೆಲೆಗಾಯಕಿ ಅನಿತಾ - CineNewsKannada.com

ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಬಹುಮುಖ ಪ್ರತಿಭೆಯ ಹಿನ್ನೆಲೆಗಾಯಕಿ ಅನಿತಾ

ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಂಬಲ ಮತ್ತು ತುಡಿತ ಅನೇಕ ಪ್ರತಿಭಾವಂತರದ್ದು. ಇನ್ನೂ ಕೆಲವು ಮಂದಿ ತಮ್ಮೊಳಗೆ ಕಲೆಯ ಬಗ್ಗೆ ಇರುವ ಫ್ಯಾಶನ್ ಮತ್ತು ಪ್ರೀತಿಯನ್ನು ತೋರಿಸಲು ಶ್ರಮಪಡುತ್ತಿದ್ದಾರೆ. ಅದರಲ್ಲಿ ಅನಿತಾ ಸಾರಾ ಮಹೇಶ್ ಒಬ್ಬರು.

ಮದುವೆಯಾಗಿ ಮಕ್ಕಳು, ಮೊಮ್ಮೊಕ್ಕಳಾದ ನಂತರ ತಮ್ಮೊಳಗೆ ಇರುವ ಕಲೆಂ ಪ್ರದರ್ಶಿಸಲು ಮುಂದಾಗಿದ್ದಾರೆ.ಇದಕ್ಕೆ ಪತಿ ಸಾರಾ ಮಹೇಶ್ ಮತ್ತು ಮಕ್ಕಳ ಬೆಂಬಲವೂ ಸಿಕ್ಕಿದೆ. ಅದರ ಪ್ರತಿಪ್ರಲವೇ “ ಏನಾಗಿದೆ ನನಗೇನಾಗಿದೆ” ಆಲ್ಬಂ ಹಾಡು ಬಿಡುಗಡೆಯಾಗಿದ್ದು ಈ ಹಾಡಿನಲ್ಲಿ ಅನಿತಾ ಸೊಗಸಾಗಿ ಹಾಡಿದ್ದಾರೆ. ಅವರ ಮೊಲೋಡಿ ಧ್ವನಿಗೆ ಕನ್ನಡದ ಮೂರು ಮಂದಿ ಹಿರಿಯ ಸಂಗೀತ ನಿರ್ದೇಶಕರು ಮೂಕ ವಿಸ್ಮಿತರಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಶ್ರೇಯಾ ಘೋಷಾಲ್ ಸಿಕ್ಕಂತಾಗಿದೆ

ಸಂಗೀತ ನಿರ್ದೇಶಕ ವಿ.ಮನೋಹರ್, ಸಾಧುಕೋಕಿಲ ಹಾಗು ಅಭಿಮಾನ್ ರಾಯ್ ಅವರು ಗಾಯಕಿ ಹಾಗು ಬಹುಮುಖ ಪ್ರತಿಭೆ ಅನಿತಾ ಅವರ ಪ್ರತಿಭೆಗೆ ಮಾರುಹೋಗಿದ್ದು ಕಲೆಯನ್ನು ಇನ್ನೂ ದೊಡ್ಡಮಟ್ಟದಲ್ಲಿ ಪ್ರದರ್ಶಿಸಿ ಜೊತೆಗೆ ನಿಮಗಿರುವ ಸಂಪರ್ಕದಲ್ಲಿ ಆಡಿಯೋ ಕಂಪನಿ ಆರಂಭ ಮಾಡಿ ಅನೇಕ ಹೊಸ ನಿರ್ಮಾಪಕರು,ನಿರ್ದೆಶಕರು ಮತ್ತು ಚಿತ್ರತಂಡಕ್ಕೆ ಬೆಂಬಲವಾಗಿ ನಿಲ್ಲಿ ಎಂದು ಮನವಿ ಮಾಡುವ ಮೂಲಕ “ಏನಾಗಿದೆ ನನಗೇನಾಗಿದೆ” ಆಲ್ಬಂ ಹಾಡನ್ನು ಮನಸಾರೆ ಮೆಚ್ಚಿಕೊಂಡಿದ್ಧಾರೆ.

ಗೌಸ್ ಪೀರ್ ಸಾಹಿತ್ಯ ಬರೆದಿರುವ ಹಾಡಿಗೆ ಅನಿತಾ ಸಾರಾ ಮಹೇಶ್ ಹಾಡಿದ್ದು ಅಭಿಮಾನ್ ರಾಯ್ ಸಂಗೀತ ಸಂಯೋಜಿಸಿದ್ದಾರೆ. ಆಲ್ಬಂ ಹಾಡು ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲದಂತೆ ಮೂಡಿ ಬಂದಿದೆ, ಇದು ಅನಿತಾ ಅವರೊಳಗೆ ಇರುವ ಹಿನ್ನೆಲೆ ಗಾಯಕಿಯನ್ನು ಹೊರ ಹಾಕಿದ್ದಾರೆ

ಹಾಡು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಾಧುಕೋಕಿಲ, ಅನಿತಾ ಅವರ ಗಾಯನ ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲ, ಪತಿ ಸಾರಾ ಮಹೇಶ್ ಅವರ ಬೆಂಬಲದಿಂದ ಈ ಮಟ್ಟಕ್ಕೆ ಬಂದಿದ್ಧಾರೆ. ತಾವೂ ಒಂದು ಆಲ್ಬಂ ಹಾಡು ಅವರಿಗಾಗಿ ಮಾಡಿಕೊಡುವಂತೆ ಕೇಳಿದ್ದಾರೆ. ಪ್ರಕೃತಿಯ ಮಧ್ಯೆ ಇಡೀ ನಾಡೇ ತಿರುಗಿ ನೋಡುವಂತೆ ಅವರಿಗಾಗಿ ಹಾಡು ಮಾಡಿಕೊಡುವೆ ಎಂದರು.

ಈಗ ಇರುವ ಆಡಿಯೋ ಕಂಪನಿಗಳು ಆಕಾಶದಲ್ಲಿದ್ದಾರೆ,ಅವರಾರು ಸಣ್ಣ ಪುಟ್ಟ ನಿರ್ಮಾಪಕರಿಗೆ, ನಿರ್ದೇಶಕರಿಗೆ ಚಿತ್ರಗಳಿಗೆ ಸಿಗುತ್ತಿಲ್ಲ ಹೀಗಾಗಿ ಆಡಿಯೋ ಕಂಪನಿ ಆರಂಭಿಸಿ ಕನ್ನಡ ಚಿತ್ರರಂಗಕ್ಕೆ ನೆರವಾಗಿ ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ ಎಂದು ಮನದುಂಬಿ ಹಾರೈಸಿದರು.

ವಿ,ಮನೋಹರ್ ಮಾತನಾಡಿ, ಅನಿತಾ ಅವರ ಹಾಡು ಕೇಳುತ್ತಿದ್ದರೆ ವೃತ್ತಿಪರ ಹಿನ್ನೆಲೆ ಗಾಯಕಿ ಹಾಡಿದ ರೀತಿ ಇದೆ. ಕನ್ನಡದಲ್ಲಿ ಹೀಗಾಗಲೇ ಹಲವು ಚಿತ್ರಗಳಿಗೆ ಹಾಡಿದ್ದಾರೆ. ಮುಂದೆಯೂ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಚಿತ್ರವನ್ನೂ ನಿರ್ಮಾಣ ಮಾಡಲಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು

ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಮಾತನಾಡಿ ಅನಿತಾ ಅವರು ಹಾಡು ಮಾಡಿಕೊಡುವಂತೆ ಕೇಳಿಕೊಂಡರು. ಅವರ ಧ್ವನಿಗೆ ಹೊಂದುವಂತೆ ಮೆಲೋಡಿ ಹಾಡು ಮಾಡಿದ್ದೇವೆ. “ಏನಾಗಿದೆ ನನಗೇನಾಗಿದೆ” ಹಾಡನ್ನು ಅದ್ಬುತವಾಗಿ ಹಾಡಿದ್ದಾರೆ. ಮುಂದೆಯೂ ಅವರಿಗಾಗಿ ಹಾಡು ಮಾಡಲಾಗುವುದು, ಅವರೊಳಗಿನ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ಮಾಡಲಾಗುವುದು ಎಂದು ಹೇಳಿದರು

ಗಾಯಕಿ ಅನಿತಾ ಸಾರಾ ಮಹೇಶ್ ಮಾತನಾಡಿ ನಮ್ಮದೆ ಆದ ಅನುಸಾರ ಮೂಲಕ ಹಾಡು ಬಿಡುಗಡೆ ಮಾಡಲಾಗಿದೆ, ಚಿಕ್ಕ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಅತೀವ ಆಸಕ್ತಿ ಇತ್ತು., ಮದುವೆ ಆದ ನಂತರ ಮಕ್ಕಳ ಜವಾಬ್ದಾರಿ ನಿಬಾಯಿಸಬೇಕಾಗಿತ್ತು. ಪತಿ ಸಾರಾ ಮಹೇಶ್ ರಾಜಕಾರಣದಲ್ಲಿ ಇರುವ ಹಿನ್ನೆಲೆಯಲ್ಲಿ ಅವರ ಕೆಲಸದಲ್ಲಿ ಜೊತೆಯಾಗಬೇಕಾಗಿತ್ತು, ಇದೀಗ ಒಬ್ಬ ಮಗ ವೈದ್ಯ ಮತ್ತೊಬ್ಬ ಮಗ ಉದ್ಯಮಿ, ಈಗ ನನಗೆ ಸಮಯ ಸಿಕ್ಕಿದೆ, ಹೀಗಾಗಿ ಗಾಯನಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin