“ಪದವಿಪೂರ್ವ” ಬಳಿಕ “ಮಾಸ್ಟರ್ ಡಿಗ್ರಿಗೆ” ಜಂಪ್ ಆದ ನಿರ್ದೇಶಕ ಹರಿ ಜಯಣ್ಣ
ಪದವಿಪೂರ್ವ ಚಿತ್ರದ ಬಳಿಕ ನಿರ್ದೇಶಕ ಹರಿ ಜಯಣ್ಣ ಇದೀಗ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ 135ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈ ಮೂಲಕ ಪದವಿ ಪೂರ್ವ ಮುಗಿಸಿದ ಬಳಿಕ ಚಿತ್ರರಂಗದ ವಿಶ್ವವಿದ್ಯಾಲಯ ಎಂದೇ ಹೆಸರು ಪಡೆದಿರುವ ಶಿವಣ್ಣ ಬಳಿ ಮಾಸ್ಟರ್ ಡಿಗ್ರಿಗೆ ಜಾಯಿನ್ ಆಗಲಿದ್ದಾರೆ

ಹರಿ ಜಯಣ್ಣ ಎರಡನೇ ನಿರ್ದೇಶನದ ಚಿತ್ರದಲ್ಲಿಯೇ ಶಿವಣ್ಣ ಅವರಿಗೆ ನಿರ್ದೇಶನ ಮಾಡುವ ಅವಕಾಶ ಒದಗಿ ಬಂದಿದೆ. ಈ ಮುಂಚೆ ಹರಿಪ್ರಸಾದ್ ಜಯಣ್ಣ ಆಗಿದ್ದವರು ಈಗ ಹರಿ ಜಯಣ್ಣ ಆಗಿ ಹೆಸರು ಬದಲಾಯಿಸಿಕೊಂಡು ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ.
ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅಭಿನಯದ 135ನೇ ಚಿತ್ರವನ್ನು ಆಫೆÇ್ರೀಡೈಟ್ ರಿನೈಸ್ಸಾನ್ಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ರಾಜ (ರಮೇಶ್ ಕುಮಾರ್) ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದು ಚಿತ್ರಕ್ಕೆ ಹರಿ ಜಯಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು ಗಮನ ಸೆಳೆದಿದೆ,ಇದೊಂದು ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿದ್ದು ಶಿವಣ್ಣ ವಿಭಿನ್ನ ಹಾಗೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಹರಿ ಜಯಣ್ಣ, ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರೀಕರಣ ಶುರುವಾಗಲಿದ್ದು ಚಿತ್ರದ ಸ್ಕ್ರಿಪ್ಟ್ ಮತ್ತು ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ನಾಯಕಿ ಹಾಗೂ ಇನ್ನಿತರ ಪ್ರಮುಖ ಪಾತ್ರಗಳ ಆಯ್ಕೆ ನಡೆಯುತ್ತಿದೆ ಎಂದಿದ್ದಾರೆ
ನಿರ್ಮಾಪಕ ರಾಜ (ರಮೇಶ್ ಕುಮಾರ್) ಪ್ರತಿಕ್ರಿಯಿಸಿ ಶಿವಣ್ಣ ಅವರನ್ನು ಹೊರತು ಪಡಿಸಿ ಉಳಿದ ಕಲಾವಿದರು ಹಾಗೂ ತಂತ್ರಜ್ಞರನ್ನು ಕೆಲವು ದಿನಗಳಲ್ಲಿ ಅಂತಿಮಗೊಳಿಸಲಾಗುವುದು. ತಮ್ಮ ಸಂಸ್ಥೆ ಮತ್ತು ತಂಡದಿಂದ ಶಿವಣ್ಣನ ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ


