ಲೈಫ್ ಟುಡೇ’ ಚಿತ್ರದ ಸಿಕ್ಕರೆ ಸಿಕ್ಕರೆ ಹಾಡು ಬಿಡುಗಡೆ
ಕಿರಣ್ ಆದಿತ್ಯ- ಲೇಖ ಚಂದ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ, ಕಾಂತ ಕಣ್ಣಲ್ಲಿ ನಿರ್ದೇಶನ ದಲ್ಲಿ ಮೂಡಿ ಬರುತ್ತಿರುವ ಮೇಘನಾ ಪ್ರದೀಪ್ ನಿರ್ಮಾಣ ಮಾಡಿರುವ ಚೊಚ್ಚಲ ಸಿನಿಮಾ ‘ಲೈಫ್ ಟುಡೇ’ ಸಿನಿಮಾದ ಸಿಕ್ಕರೆ ಸಿಕ್ಕರೆ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ

ನಟಿ ಮಾನ್ವಿತ ಹರೀಶ್, ಬಿಗ್ ಬಾಸ್ ಖ್ಯಾತಿಯ ರಿಷಾ ಗೌಡ ಮತ್ತೊತರರು ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದರು
‘ಸಿಕ್ಕರೆ ಸಿಕ್ಕರೆ’ ಹಾಡಗೆ ಕೆ ರಾಮನಾರಾಯಣ್ ಸಾಹಿತ್ಯ ಬರೆದಿದ್ದು. ಈಗಾಗಲೇ ಸಿದ್ದಯ್ಯ ಸ್ವಾಮಿ ಬನ್ನಿ ಹಾಗೂ ಅಣ್ತಮ್ಮ ಜೋಡೆತ್ತು ಹಾಡನ್ನು ಹಾಡಿ ಫುಲ್ ಆನ್ ಟ್ರೆಂಡ್ ನಲ್ಲಿರುವ ಜೋಗಿ ಪ್ರೇಮ್ ಈ ಹಾಡಿಗೆ ಮತ್ತೆ ತಮ್ಮ ಧನಿ ನೀಡಿದ್ದಾರೆ.
ನಾಯಕ ನಟ ಕಿರಣ್ ಆದಿತ್ಯ ಮಾತನಾಡಿ ನೈಜತೆ ಇಟ್ಕೊಂಡು ಮಾಡಿರೋ ಕಂಟೆಂಟ್ ಅದಕ್ಕೆ ಕಮರ್ಷಿಯಲ್ ಟಚ್ ಕೊಟ್ಟಿದೆ.ಕಾಲೇಜು ಯುವಕರಿಗೆ ಮಾಡಿರುವ ಸಿನಿಮಾ, ನಟ ಯಶ್ ಅಭಿಮಾನಿ ಅಣ್ತಮ್ಮ ಇಲ್ಲಿ ಯಾರೂ ಹೀರೋಗಳನ್ನ ಹುಟ್ಟು ಹಾಕಲ್ಲ ನಮಗೆ ನಾವೇ ಹೀರೋ ಆಗ್ಬೇಕು ಅನ್ನೋದನ್ನ ಪಾಲಿಸ್ತೀನಿ ಎಂದರು..

ಮಾನ್ವಿತ ಹರೀಶ್ ಮಾತನಾಡಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ಮಾಡೋದು ಎಷ್ಟು ಕಷ್ಟ ಅಂತ ಗೊತ್ತು. ಒಳ್ಳೆಯದಾಗಲಿ ಎಂದು ಹೇಳಿದರು
ಚಿತ್ರ ಕಾರ್ಯಕಾರಿ ನಿರ್ಮಾಪಕಿ ವೃಷಾ ಪಾಟೀಲ್ ಮಾತನಾಡಿ ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ತಿಳಿಸಿದರು

