Actor Shivarajkumar wishes good luck for the teaser of the film "Yuva Sarkar"

“ಯುವ ಸರ್ಕಾರ್ ” ಚಿತ್ರದ ಟೀಸರ್ ಗೆ ನಟ ಶಿವರಾಜ್ ಕುಮಾರ್ ಶುಭ ಹಾರೈಕೆ - CineNewsKannada.com

“ಯುವ ಸರ್ಕಾರ್ ” ಚಿತ್ರದ ಟೀಸರ್ ಗೆ ನಟ ಶಿವರಾಜ್ ಕುಮಾರ್ ಶುಭ ಹಾರೈಕೆ

ಪಾರ್ವತಮ್ಮ ರಾಜ್ ಕುಮಾರ್ ತಂಗಿಯ ಪುತ್ರ ಸಂತೋಷ್ ಕುಮಾರ್ ನಿರ್ದೇಶನದ “ಯುವ ಸರ್ಕಾರ್” ಚಿತ್ರೀಕರಣ ಪೂರ್ಣಗೊಳಿಸಿದ್ದು ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟೀಸರ್‍ನ್ನು ವೀಕ್ಷಿಸಿದ ನಟ ಶಿವರಾಜ್ ಕುಮಾರ್ ಶುಭ ಹಾರೈಸಿದ್ಧಾರೆ.

ಚಿತ್ರದ ಹಾಡನ್ನು ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ್ರು ಹಾಗೂ ಎಸ್.ಎ.ಗೋವಿಂದರಾಜ್ ಬಿಡುಗಡೆ ಮಾಡಿದರೆ ಟೀಸರನ್ನು ಭಾಮ ಹರೀಶ್, ಎ.ಗಣೇಶ್, ಮಾಧವಿ ಸೇರಿ ಬಿಡುಗಡೆ ಮಾಡಿ ಶುಭ ಹಾರೈಸಿದರು

ಚಿತ್ರದಲ್ಲಿ ವೀರೇನ್ ಕೇಶವ್ ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಬಿಗ್ ಬಾಸ್ ಜಾಹ್ನವಿ, ಶೃತಿ ದೇಶಪಾಂಡೆ ಹಾಗೂ ಅಲ್ಫಿಯಾ ನಟಿಸಿದ್ದಾರೆ. ಚಿತ್ರವನ್ನು ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ನೇರವಾಗಿ ಚಿತ್ರೀಕರಿಸಲಾಗಿದೆ. ಹಾಗಾಗಿ ಚಿತ್ರದಲ್ಲಿ ಮೂರು ಭಾಷೆಯ ಕಲಾವಿದರೂ ನಟಿಸಿದ್ದಾರೆ. ನಟ ಧರ್ಮಕೀರ್ತಿರಾಜ್ ಹಾಗೂ ತಂದೆ ಕೀರ್ತಿರಾಜ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ನಿರ್ದೇಶಕ, ನಿರ್ಮಾಪಕ ಸಂತೋಷ್ ಕುಮಾರ್ ಮಾತನಾಡಿ ತಾಯಿ ಮಗನ ಮಧ್ಯೆ ನಡೆಯುವ ಎಮೋಷನಲ್ ಕಥೆಯಿದು. ತಮಿಳಲ್ಲಿ ಯುವನ್ ರಾಬಿನ್ ಹುಡ್, ಹಿಂದಿಯಲ್ಲಿ ಅದೇ ಯುವ ಸರ್ಕಾರ್ ಎಂಬ ಹೆಸರನ್ನಿಟ್ಟಿದ್ದೇವೆ. ಆಕೆ ತನ್ನ ಮಗನನ್ನು ಗಾಂಧಿಯ ಥರ ಬೆಳೆಸುತ್ತಾಳೆ, ಆದರೆ ಆ ಮಗ ಯಾಕೆ ರಾಬಿನ್ ಹುಡ್ ರೀತಿ ಆಗ್ತಾನೆ ಅನ್ನೋದೇ ಚಿತ್ರದ ಕಥೆ. ಆ ರಾಬಿನ್ ಹುಡ್ ಬಡವರಿಗೆ ಸಹಾಯ ಮಾಡ್ತಿದ್ದ, ಆತನನ್ನು ಒಬ್ಬ ದರೋಡೆಕೋರನ ಥರ ತೋರಿಸಿದ್ದರು. ಆದರೆ ನಾವಿಲ್ಲಿ ಜನಸ್ನೇಹಿಯಾಗಿ ತೋರಿಸಿದ್ದೇವೆ. ನೇರವಾಗಿ ಮೂರು ಭಾಷೆಯಲ್ಲಿ ಚಿತ್ರೀಕರಿಸಿದ್ದೇವೆ ಎಂದರು

ಚೆನ್ನೈ, ಚಿಕ್ಕಮಗಳೂರು, ಮೇಲುಕೋಟೆಯ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಏಪ್ರಿಲ್ ನಲ್ಲಿ ಚಿತ್ರದ ಫಸ್ಟ್ ಕಾಪಿ ಹೊರಬರಲಿದೆ. ಮೇ ಜೂನ್ ನಲ್ಲಿ ರಿಲೀಸ್ ಮಾಡುವ ಯೋಜನೆಯಿದೆ. ತಮಿಳಿನ ನಟ ವೈಜಿ ಅವರು ಒಬ್ಬ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು

ಚಿತ್ರದ ನಾಯಕ ವೀರೆನ್ ಕೇಶವ್, ಧರ್ಮ ಕೀರ್ತಿರಾಜ್, ನಾಯಕಿಯರು ಹಾಗು ಡಾ.ಶಿವಪ್ಪ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು. ಬಿಗ್ ಬಾಸ್ ಅಶ್ವಿನಿಗೌಡ ಕೂಡ ಅತಿಥಿಯಾಗಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin