ಮಾರ್ಚ್6ಕ್ಕೆ ಪೊಲೀಸ್ ಕಥಾನಕದ “ಶೇಷ 2016” ಚಿತ್ರ ಬಿಡುಗಡೆ
ಪೊಲೀಸ್ ಕಥಾನಕ ಹೊಂದಿರುವ ಶೇಷ 2016 ಚಿತ್ರ ಮಾರ್ಚ್ 6ಕ್ಕೆ ಬಿಡುಗಡೆ ಸಜ್ಜಾಗಿದೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರೀಕರಣವಾದ ಸಿನಿಮಾದಲ್ಲಿ ಪೆÇಲೀಸ್ ಇಲಾಖೆಯಲ್ಲಿರುವಂತಹ ಭ್ರಷ್ಟ ಹಾಗೂ ಪ್ರಾಮಾಣಿಕತೆಯ ಸಂಘರ್ಷದ ನಡುವೆ ಸಾಗುವ ಕುತೂಹಲಕಾರಿ ಕಥೆಯನ್ನು ಒಳಗೊಂಡಿದೆ.

ಉಮೇಶ್ ಗೌಡ , ಮಂಜುವಾಣಿ .ವಿ. ಎಸ್ ಹಾಗೂ ವೀಣಾ. ಎಸ್ ನಿರ್ಮಾಣದ ಚಿತ್ರವನ್ನು ಯುವ ಪ್ರತಿಭೆ ಪ್ರದೀಪ್ ಅರಸೀಕೆರೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಹಾಗೂ ಓ ಟಿಟಿ ಪ್ಲಾಟ್ಫಾರ್ಮ್ ರೈಟ್ ಪಡೆದಿದೆ.
ಎಸಿಪಿ ಗಣೇಶ್ ಹಾಗೂ ಮೋಹನ್ ಕುಮಾರ್ ದಾನಪ್ಪ ಆಗಮಿಸಿ ಚಿತ್ರದ ಬಿಡುಗಡೆ ದಿನಾಂಕದ ಪೆÇೀಸ್ಟರ್ ಲಾಂಚ್ ಮಾಡಿ ಹಾರೈಸಿದರು
ನಿರ್ದೇಶಕ ಪ್ರದೀಪ್ ಅರಸೀಕೆರೆ ಮಾತನಾಡಿ ಒಳ್ಳೆಯದು ಕೆಟ್ಟದರ ಸಂಘರ್ಷಗಳ ನಂತರ ಉಳಿದಿರುವದನ್ನ ಶೇಷ ಎನ್ನುತ್ತಾರೆ. 2016ರ ಕಾಲದ ಘಟ್ಟದಲ್ಲಿ ಕರ್ನಾಟಕ ಹಾಗೂ ಕೇರಳ ಬಾರ್ಡರ್ ನಲ್ಲಿ ನಡೆಯುವಂತಹ ಕಾಲ್ಪನಿಕ ಘಟನೆಗಳ ಸುತ್ತ ಬೆಸೆದುಕೊಂಡು ಮಾಡಿರುವಂತಹ ಚಿತ್ರ ಇದಾಗಿದೆ. ಸರ್ಕಾರಿ ಆಸ್ಪತ್ರೆ ಇಲ್ಲದಿದ್ದರೆ ಖಾಸಗಿ, ಸರ್ಕಾರಿ ಶಾಲೆ ಇಲ್ಲದಿದ್ದರೆ ಖಾಸಗಿ ಶಾಲೆ ಇರುತ್ತದೆ, ಆದರೆ ಸರ್ಕಾರದ ಪೆÇಲೀಸ್ ಇಲಾಖೆಯಲ್ಲಿ ಬದಲಿ ವ್ಯವಸ್ಥೆ ಇಲ್ಲ. ಇಂಥ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದಿಂದ ಜನರು ಹೇಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏನೆಲ್ಲಾ ಕಷ್ಟ , ಕಾರ್ಪಣ್ಯಗಳು ಎದುರಾಗುತ್ತದೆ ಎಂಬ ಸೂಕ್ಷ್ಮ ವಿಚಾರವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ ಸುಮಾರು 35 ದಿನ ಶೂಟಿಂಗ್ ಮಾಡಿದ್ದು , ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ನಿರ್ಮಾಪಕ ಉಮೇಶ್ ಗೌಡ ಮಾತನಾಡಿ ಕೇರಳದ ವೈನಾಡು ಸೇರಿದಂತೆ ಹಲವು ಭಾಗಗಳಲ್ಲೂ ಕೂಡ ಪ್ರಚಾರದ ಕೆಲಸ ನಡೆಸಿ ನಂತರ ಮಾರ್ಚ್ 6ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದರು
ನಟ ಪ್ರಮೋದ್ ಶೆಟ್ಟಿ ಮಾತನಾಡಿ ಮಲಯಾಳಂ ಭಾಷೆಯಲ್ಲಿ ಡಬ್ ಕೂಡ ಮಾಡಿದ್ದೇನೆ. ಸ್ಟೇಷನ್ ಸುತ್ತ ನಡೆಯುವ ಘಟನೆ. ಒಂದು ರೀತಿ ಬೆಲ್ ಬಾಟಮ್ ಫೀಲ್ ಕೊಡುತ್ತೆ.. ಚಿತ್ರ ಬಹಳ ಕುತೂಹಲಕಾರಿಯಾಗಿದೆ ಎಂದರು

ಹಿರಿಯ ನಟ ಸಿದ್ಲಿಂಗು ಶ್ರೀಧರ್ ಮಾತನಾಡಿ ಹೆಡ್ ಕಾನ್ಸ್ಟೇಬಲ್ ಪಾತ್ರ ಮಾಡಿದ್ದೇನೆ. ಸುಮಾರು 15 ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ ಎಂದು ವಿವರಿಸಿದರು
ನಟಿ ಅರ್ಚನಾ ಕೊಟ್ಟಿಗೆ ಮಾತನಾಡಿ ಇದರಲ್ಲಿ ಪೊಲೀಸ್ ಪಾತ್ರವೇ , ಆದರೆ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಹೇಳೋ ಹಾಗಿಲ್ಲ , ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಯಶಸ್ವಿಗೊಳಿಸಿ ಎಂದರು.
ನಟ ಸಾಯಿ ಭೈರವ ಕೂಡ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಲಯಾಳಂನ ಪ್ರತಿಭೆ ಜಾನ್ ಕೈಪ್ಪಲ್ಲಿ ಪ್ರಮುಖ ಪೆÇಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಎಸ್ ಪಿ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು , ಆರ್. ಎಸ್ .ಆನಂದ್ ಕುಮಾರ್ ಛಾಯಾಗ್ರಹಣವಿದೆ

