“ಸರ್ವಂತರರ್ಯಾಮಿ” ಸದ್ದಿಲ್ಲದ ಚಿತ್ರೀಕರಣ ಪೂರ್ಣ
ರಂಗಭೂಮಿ ಹಿನ್ನೆಲೆ ಇರುವ ರಂಗಸ್ವಾಮಿ ಕಪಿನಿಪಾಳ್ಯ ನಿರ್ದೇಶನ, ನಿರ್ಮಾಣದ “ಸರ್ವಂತರರ್ಯಾಮಿ” ಎಲ್ಲರ ಕೈಯಲ್ಲೂ ನಾನೇ ಸ್ವಾಮಿ’ ಚಿತ್ರ ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಂಡಿದೆ.

ಶಿವರಾತ್ರಿಯ ಹಿನ್ನೆಲೆಯಲ್ಲಿ ಶಿವನ ಬಗ್ಗೆ ನಿರ್ದೇಶಕರೇ ಬರೆ ಬರೆದ ಹಾಡು ಬಿಡುಗಡೆ ಮಾಡಲಾಗಿದೆ. ಗೀತೆಗೆ ರಮೇಶ್ ಕೃಷ್ಣ ಸಂಗೀತ ನೀಡಿದ್ದು ಚಿತ್ರಕ್ಕೆ ಹಿರಿಯ ನಿರ್ದೇಶಕ ಹಾಗು ಗೀತರಚನೆಕಾರ ಕೆ.ರಾಮ್ ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ.
ನಿರ್ದೇಶಕ ರಂಗಸ್ವಾಮಿ ಕಪನಿಪಾಳ್ಯ ಮಾತನಾಡಿ ಕಳೆದ 35 ವರ್ಷಗಳ ಹಿಂದೆ ಚಿತ್ರರಂಗದಲ್ಲಿದ್ದೆ, ಅಂದಿನಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಆಸೆ ಇತ್ತು. ಹೀಗಾಗಿ ಚಿತ್ರ ಮಾಡಿದ್ದೇನೆ. ರಾಮ್‍ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ.
ಸರ್ವಂತರಯಾಮಿ ಅಂದರೆ ಮೊಬೈಲ್‍ನಿಂದ ಏನೆಲ್ಲಾ ಸಮಸ್ಯೆ ಆಗಲಿದೆ. ಮೊಬೈಲ್‍ನಿಂದ ಆಗುವ ಅನುಕೂಲ ಅನಾನುಕೂಲಗಳನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.ಮಕ್ಕಳ ಚಿತ್ರ. ಮಕ್ಕಳಿಗಾಗಿ ಮಾಡಿದ್ದೇನೆ. ಮುಗಿದಿದ್ದು ಡಬ್ಬಿಂಗ್ ಆಗಿದೆ. ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ನಿರ್ಮಾಪಕ ಹಿತಾ ಆರ್ ಗೌಡ ಮಾತನಾಡಿ ರಂಗಭೂಮಿ ಒಲವು ಅಪ್ಪನ ಮೇಲೆ ಇತ್ತು, ಅಪ್ಪ ಪಾತ್ರವನ್ನು ಜೀವಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು
ಸಂಗೀತ ನಿರ್ದೇಶಕ ರಮೇಶ್ ಕೃಷ್ಣ ಮಾತನಾಡಿ ಆರಂಭದಲ್ಲಿ ಶಿವ ಹಾಡು ಮಾಡಿಸಿದರು ಆಮೇಲೆ ಬೇರೆ ಹಾಡು ಮಾಡಿಸಿ ಸಿನಿಮಾ ಮಾಡೋಣ ಎಂದರು ಎಂದು ಮಾಹಿತಿ ಹಂಚಿಕೊಂಡರು
ಚಿತ್ರಕ್ಕೆ ಬೆನ್ನೆಲುಬಾಗಿನಿಂತ ಕೆ ರಾಮ್ ನಾರಾಯಣ್ ಮಾತನಾಡಿ ನಿರ್ದೇಶಕ ರಂಗಸ್ವಾಮಿ ಅವರು ಸಿನಿಮಾ ಮಾಡುವ ಕನನು ಈಗ ನನಸಾಗಿದೆ. ತಂಡ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ ತಂಡಕ್ಕೆ ಒಳ್ಳೆಯದಾಗಲಿ ಎಂದರು
ನಟಿ ಸಂಜನಾ ದುಬೈ ಮಾತನಾಡಿ ಮೊದಲ ಬಾರಿಗೆ ನಟಿಸಿದ್ದೇನೆ. ಆರಂಭದ ಚಿತ್ರದಲ್ಲಿ ಪಾರ್ವತಿ ದೇವಿಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು
ಕಲಾವಿದ ಸೂರ್ಯ ಪ್ರವೀಣ್ ಮಾತನಾಡಿ ಹಾಡು ಚೆನ್ನಾಗಿ ಬಂದಿದೆ. ನೆಗೆಟೀವ್ ಶೇಡ್ ಪಾತ್ರ.. ಇದರಲ್ಲಿ ವಿಭಿನ್ನ ಪಾತ್ರ ರಾಮ್ ನಾರಾಯಣ್ ಜೊತೆ ಕೆಲಸ ಮಾಡಿದ್ದು ಕೆಲವು ಚಿತ್ರಗಳಲ್ಲಿ ರಕ್ತ ಸುರಿ ಕೆಲಸ ಮಾಡಿದರೂ ಕ್ಯಾರೆ ಅನ್ನಲ್ಲ, ಈ ಚಿತ್ರದಲ್ಲಿ ಬೆವರೂ ಕೂಡ ಸುರಿಸಿಲ್ಲ ಆದರೆ ಚೆನ್ನಾಗಿ ನೋಡಿಕೊಂಡರು ಎಂದರು.

ಕಲಾವಿದ ನಾಗರಾಜ್ ಮಾತನಾಡಿ 20 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ ಪೆÇೀಸ್ಟರ್‍ನಲ್ಲಿ ಪೆÇೀಟೋ ಬರುವ ಪಾತ್ರ ಇದು ಚಿತ್ರ ಚೆನ್ನಾಗಿ ಮೂಡಿಬಂದಿದೆ. ಗಂಡ ಹೆಂಡತಿ ಮಗಳು, ಸ್ಟೇಷನ್ ,ಕೋರ್ಟ್‍ಮ ಮಗಳಿಗಾಗಿ ಅಪ್ಪ ಏನೆಲ್ಲಾಮಾಡ್ತಾರೆ ಎನ್ಮುವುದು ಕಥೆ ಎಂದು ಹೇಳಿದರು
ಛಾಯಾಗ್ರಾಹಣ ರಾಜು ಹೆಮ್ಮಿಗೆಪುರ ಕಲಾವಿದರಾದ ವಿಕ್ಟರಿ ವಾಸು, ಮೈರಾ, ಅಮೂಲ್ಯ ನಾರಾಯಣ್,ಉಮೇಶ್ ಸಕ್ಕರೆನಾಡು, ಉಮೇಶ್ ಪುಂಗ ಮತ್ತಿತರರು ಮಾಹಿತಿ ಹಂಚಿಕೊಂಡರು

