'Shiva Shambho Swayambho' released to celebrate Mahashivratri

ಮಹಾಶಿವರಾತ್ರಿಯ ಸಂಭ್ರಮಕ್ಕೆ ‘ಶಿವ ಶಂಭೋ ಸ್ವಯಂಭೋ’ ಬಿಡುಗಡೆ - CineNewsKannada.com

ಮಹಾಶಿವರಾತ್ರಿಯ ಸಂಭ್ರಮಕ್ಕೆ ‘ಶಿವ ಶಂಭೋ ಸ್ವಯಂಭೋ’ ಬಿಡುಗಡೆ

ಹೊಂಬಾಳೆ ಫಿಲ್ಮ್ಸ್ ಬಹುನಿರೀಕ್ಷಿತ ಭಕ್ತಿಗೀತೆ ‘ಶಿವ ಶಂಭೋ ಸ್ವಯಂಭೋ’ಫೆಬ್ರವರಿ 15ರಂದು ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಹಾಡು ಬಿಡುಗಡೆಯಾಗುವ ಮೊದಲೇ ಡಿಜಿಟಲ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈಗಾಗಲೇ ಪ್ರೊಮೊ 6 ಮಿಲಿಯನ್‍ಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವೆಂದರೆ, ಹಾಡಿನ ಪ್ರೊಮೊ ಆಡಿಯೋ ಇನ್‍ಸ್ಟಾಗ್ರಾಮ್‍ನಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಸಾವಿರಾರು ಮಂದಿ ಈ ಮಂತ್ರಮುಗ್ಧಗೊಳಿಸುವ ಧ್ವನಿಯನ್ನು ಬಳಸಿ ರೀಲ್ಸ್‍ಗಳನ್ನು ಮಾಡುತ್ತಿದ್ದು, ಈ ಹಬ್ಬದ ಸೀಸನ್‍ನ ಅತ್ಯಂತ ಜನಪ್ರಿಯ ಭಕ್ತಿಗೀತೆಯಾಗಿ ಹೊರಹೊಮ್ಮಿದೆ.

ತೀವ್ರವಾದ ಆಧ್ಯಾತ್ಮಿಕ ಶಕ್ತಿ ಹಾಗೂ ಕಂಪನ ಹೊಂದಿರುವ ಈ ಹಾಡಿನ ಸಂಗೀತ ದೇಶಾದ್ಯಂತ ಕೇಳುಗರ ಮನಗೆದ್ದಿದೆ. ಕೇವಲ ಹಿನ್ನೆಲೆ ಸಂಗೀತವೇ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡುತ್ತಿದ್ದು, ಪೂರ್ಣ ಪ್ರಮಾಣದ ಹಾಡನ್ನು ಕೇಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಭಕ್ತಿ, ಶಕ್ತಿ ಮತ್ತು ಆಧ್ಯಾತ್ಮಿಕ ಜಾಗೃತಿಯ ಸಂಕೇತವಾದ ಮಹಾಶಿವರಾತ್ರಿಯಂದೇ ಈ ಹಾಡು ಬಿಡುಗಡೆಯಾಗುತ್ತಿರುವುದು ವಿಶೇಷ. ‘ಶಿವ ಶಂಭೋ ಸ್ವಯಂಭೋ’ ಕೇವಲ ಹಾಡಾಗಿ ಉಳಿಯದೆ, ಈ ವರ್ಷದ ಶ್ರೇಷ್ಠ ಭಕ್ತಿಗೀತೆಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin