ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ: ಸಮಾರಂಭ ಶೀಘ್ರ ಆಯೋಜನೆಗೆ ಮನವಿ
ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕಳೆದ ಸೆಪ್ಟೆಂಬರ್ನಲ್ಲಿ ಘೋಷಣೆಯಗಿದೆ. ಆದರೆ ಆರು ತಿಂಗಳು ಕಳೆದರೂ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ಯಾವುದೇ ಅಧಿಕೃತ ಘೋಷಣೆ ಆಗಿಲ್ಲ ಹೀಗಾಗಿ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅದ್ಧೂರಿ ಸಮಾರಂಭ ಆಯೋಜಿಸುವಂತೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲ ಅವರಿಗೆ ಮನವಿ ಮಾಡಿದ್ದಾರೆ

ಕನ್ನಡ ಚಿತ್ರರಂಗಕ್ಕೆ ಹೊಸ ಉತ್ತೇಜನ ನೀಡುವ ರೀತಿಯಲ್ಲಿ ಆಯೋಜಿಸಬೇಕು ಜೊತೆಗೆ ಆ ಕಾರ್ಯಕ್ರಮಕ್ಕೆ ಐವತ್ತು ಸಾವಿರದಷ್ಟು ಡಾ.ವಿಷ್ಣು ಸೇನಾನಿಗಳನ್ನು ಸಂಘಟಿಸುವ ಜವಬ್ದಾರಿ ಇದೆ ಎಂದಿದ್ಧಾರೆ
ಅಭಿಮಾನ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಸ್ಮಾರಕ ತೆರವುಗೊಳಿಸಲಾಗಿದೆ. ನಾಡಿನ ಇತಿಹಾಸದಲ್ಲೊಂದು ಕಪ್ಪುಚುಕ್ಕೆಯಾಗಿ ದಾಖಲಾಗಿದೆ. ಸಾವಿನಲ್ಲೂ ಶಾಂತಿ ನೀಡದ ವ್ಯವಸ್ಥೆ ಬಗ್ಗೆ ಅನುಕಂಪವಿದೆ. ಮೇರುನಟನ ಸ್ಮಾರಕವನ್ನೇ ತೆರುವುಗೊಳಿಸಿದ ಜಾಗದಲ್ಲಿ ಖಾಸಗಿ ಕಟ್ಟಡವೋ, ಮಾಲ್, ಕಾಂಪ್ಲೆಕ್ಸ್ ಬಂದರೆ ಅದು ಇನ್ನೂ ಅವಮಾನಕರ ಸಂಗತಿ. ಆದ್ದರಿಂದ ಆಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದೆ, ಮೂಲ ಉದ್ದೇಶಕ್ಕಾಗಿ ಮಾತ್ರವೇ ಬಳಸುವಂತೆ ಮಾಡಲು ವಾಣಿಜ್ಯ ಮಂಡಳಿಯು ಮುಂಜಾಗೃತೆಯನ್ನು ವಹಿಸಬೇಕೆಂದು ಮನವಿ ಮಾಡಿದ್ದಾರೆ
ಇದೇ ವೇಳೆ ವಾಣಿಜ್ಯಮಂಡಳಿಗೆ ನೂತನ ಅಧ್ಕಕ್ಷರಾಗಿ ಆಯ್ಕೆಯಾದ ಡಾ.ಜಯಮಾಲ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ ಡಾ.ವಿಷ್ಣು ಸೇನಾ ಸಮಿತಿಯ ಆನಂದ ರಾಜ್, ಮಲ್ಲಿಕಾರ್ಜುನ್, ಎಸ್.ರಘು, ಮೂರ್ತಿ ಮೊದಲಾದವರು ಹಾಜರಿದ್ದರು.

