ಸೆಪ್ಟಂಬರ್ 5ರಂದು “ಆಸ್ಟಿನ್ ನ ಮಹನ್ಮೌನ” ಚಿತ್ರ ತೆರೆಗೆ: ಕುತೂಹಲ ಹೆಚ್ಚಿಸಿದ ಟ್ರೈಲರ್
ವಿಭಿನ್ನ ಪ್ರಯತ್ನದ “ಆಸ್ಟಿನ್ ನ ಮಹನ್ಮೌನ” ಚಿತ್ರ ಸೆಪ್ಟಂಬರ್ 5 ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ

ನಿರ್ಮಾಪಕ ಕೆ. ಮಂಜು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕನ್ನಡದ ಖ್ಯಾತ ಸಾಹಿತಿ ಡಿವಿ ಗುಂಡಪ್ಪ- ಡಿವಿಜಿ ರವರ ಮೊಮ್ಮಗ ಸುಬ್ರಮಣಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಅದಕ್ಕೂ ಒಂದು ಕಾರಣವಿದೆ. ನಟ , ನಿರ್ದೇಶಕ , ನಿರ್ಮಾಪಕ ವಿನಯ್ ಕುಮಾರ್ ವೈದ್ಯನಾಥನ್ ಸೋದರ ಮಾವ
ನಿರ್ಮಾಪಕ ಕೆ. ಮಂಜು ಮಾತನಾಡಿ ಗುರುಗಳಾದ ಸುಬ್ರಮಣಿ ಅವರು ಡಿವಿಜಿ ಅವರ ಮೊಮ್ಮಗ, ಅವರ ಅಳಿಯ ನಟಿಸಿ , ನಿರ್ಮಿಸುತ್ತಿರುವ ಚಿತ್ರದ ಟ್ರೈಲರ್ ಬಹಳ ವಿಭಿನ್ನವಾಗಿ ಬಂದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳು ಯಶಸ್ಸು ಕಾಣುತ್ತಿವೆ. ಈ ಚಿತ್ರವೂ ಯಶಸ್ಸು ಗಳಿಸಲು ಎಂದು ಹಾರೈಸಿದರು
ನಟ , ನಿರ್ದೇಶಕ , ನಿರ್ಮಾಪಕ ವಿನಯ್ ಕುಮಾರ್ ವೈದ್ಯನಾಥನ್ ಮಾತನಾಡಿ ಎಲೆಕ್ಟ್ರಿಕಲ್ ಇಂಜಿನಿಯರ್ ಮುಗಿಸಿದ ಬಹಳಷ್ಟು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದು , ನಂತರ ಕಿರು ಚಿತ್ರ ನಿರ್ದೇಶಿಸಿ ತನ್ನ 13 ವರ್ಷದ ನಿರಂತರ ಶ್ರಮದ ಫಲವಾಗಿ “ಆಸ್ಟಿನ್ ನ ಮಹನ್ಮೌನ” ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದರು
ಚಿತ್ರದಲ್ಲಿ ಲವ್, ಥ್ರಿಲ್ಲಿಂಗ್ ಹಾಗೂ ಭಾವನಾತ್ಮಕ ಕಥೆ ಒಳಗೊಂಡಿದೆ. ಆಸ್ಟಿನ್ ನ ಮಹನ್ಮೌ£ಮಹಾ ಮೌನದ ಹಿಂದಿರುವ ಘಟನೆಯೇ ಇಡಿ ಚಿತ್ರದ ಹೈಲೈಟ್. 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಒಂದು ಕುಟುಂಬದ ಕಥಾನ ಒಳಗೊಂಡಿದೆ. ಕೆ ಆರ್ ಜಿ ಸಂಸ್ಥೆ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು

ನಾಯಕಿ ಪ್ರಕೃತಿ ಮಾತನಾಡಿ ಮೊದಲ ಚಿತ್ರ. ಬಹಳ ಖುಷಿ ಇದೆ. ನಿರ್ದೇಶಕರು ಕೊಟ್ಟಿರುವ ಪಾತ್ರವೂ ಬಹಳ ಉತ್ತಮವಾಗಿದೆ. ಚಿತ್ರವನ್ನು ನೋಡಿ, ಪ್ರತಿಭೆಗಳನ್ನ ಪೆÇ್ರೀತ್ಸಾಹಿಸಿ ಎಂದರು.

ಮತ್ತೋರ್ವ ನಟಿ ರಿಷಾ ಗೌಡ ಮಾತನಾಡಿ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದೇನೆ. ಚಿತ್ರಮಂದಿರದಲ್ಲಿ ನಮ್ಮ ಸಿನಿಮಾ ನೋಡಿ ಹರಸಿ ಎಂದು ಮನವಿ ಮಾಡಿಕೊಂಡರು
ಕಂಟೆಂಟ್ ಆಧಾರಿತ ಚಿತ್ರವಾಗಿದ್ದು , ಬಾಲರಾಜ್ವಾಡಿ , ರಘು ರಾಮನಕೊಪ್ಪ , ಜಗಪ್ಪ , ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರಾಜಕಾಂತ್ ಛಾಯಾಗ್ರಹಣ , ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನವಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದ್ದು , ಪೂರ್ವ ತಯಾರಿಯನ್ನ ಮಾಡಿಕೊಂಡು ಅದ್ದೂರಿಯಾಗಿ ಸೆಪ್ಟೆಂಬರ್ 05ರಂದು ರಾಜ್ಯದ್ಯಂತ ಚಿತ್ರ ತೆರೆಯ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಸಂಗೀತ ನಿರ್ದೇಶಕ ವಿಶ್ವಿ ಮಾತನಾಡಿ ಚಿತ್ರದಲ್ಲಿ ಆರು ಹಾಡು ಇದೆ , ಮೊದಲು ಹಾಡುಗಳು ಇರಲಿಲ್ಲ, ಈಗ ಹಾಡು , ಹಿನ್ನೆಲೆ ಸಂಗೀತ ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿದೆ. ಮೊದಲ ಸಂಗೀತ ನಿರ್ದೇಶನದ ಚಿತ್ರಕ್ಕೆ ಬೆಂಬಲ ನೀಡಿದ ನನ್ನ ತಂಡಕ್ಕೂ ಹಾಗೂ ನನ್ನ ಕುಟುಂಬಕ್ಕೂ ಧನ್ಯವಾದ ಎಂದರು
ಸಹ ನಿರ್ದೇಶಕ ಕಾರ್ತಿಕ್ ನಾಯಕ್ ಮಾತನಾಡಿ ರಂಗಭೂಮಿಯಿಂದ ಬಂದವನು , ಸಂಗೀತದ ಬಗ್ಗೆ ಒಲವಿತ್ತು ಅದರಂತೆ ಈ ತಂಡ ನನಗೆ ಸಿಕ್ಕಿದ್ದು ಅಂದುಕೊಂಡಂತೆ ಚಿತ್ರ ಬಂದಿದೆ, ಏನಿದ್ದರೂ ಸಿನಿಮಾ ನೋಡಿಹರಿಸಿ ಎಂದು ಕೇಳಿಕೊಂಡರು

