Duniya Vijay's daughter Rithanya's birthday: Landlord's first look released

ದುನಿಯಾ ವಿಜಯ್ ಪುತ್ರಿ ರಿತನ್ಯ ಹುಟ್ಟುಹಬ್ಬ: ಲಾಂಡ್‍ಲಾರ್ಡ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ - CineNewsKannada.com

ದುನಿಯಾ ವಿಜಯ್ ಪುತ್ರಿ ರಿತನ್ಯ ಹುಟ್ಟುಹಬ್ಬ: ಲಾಂಡ್‍ಲಾರ್ಡ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಅಭಿನಯದ ಮೂಲಕ ಆಭಿಮಾನಿಗಳ ಮನ ಗೆದ್ದಿರುವ ಸ್ಯಾಂಡಲ್‍ವುಡ್ ಸಲಗ ದುನಿಯಾ ವಿಜಯ್ ಕುಮಾರ್ ಪುತ್ರಿ ರಿತನ್ಯ ವಿಜಯ್ ಬಣ್ಣದ ಬದುಕಿಗೆ ಬಲಗಾಲಿಟ್ಟಿರುವುದು ಎಲ್ಲಿರಗೂ ತಿಳಿದಿರುವ ಸಂಗತಿ. ಆಗಸ್ಟ್ 30 ರಿತನ್ಯ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ “ಲ್ಯಾಂಡ್ ಲಾರ್ಡ್” ಚಿತ್ರ ಫಸ್ಟ್ ಲುಕ್ ಬಿಡುಗಡೆ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದೆ.

ಲಾಂಡ್ ಲಾರ್ಡ್ ಚಿತ್ರದಲ್ಲಿ ದುನಿಯಾ ವಿಜಯ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ. ತಂದೆಯ ಜೊತೆ ರಿತನ್ಯ ವಿಜಯ್ ಲಾಂಡ್ ಲಾರ್ಡ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಿತನ್ಯಾ ವಿಜಯ್ ಅವರು ಭಾಗ್ಯ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಲ್ಯಾಂಡ್ ಲಾರ್ಡ್” ಚಿತ್ರದ ರಿತನ್ಯ ವಿಜಯ್ ಅವರ ಫಸ್ಟ್ ಲುಕ್ ಪೋಸ್ಟರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ ಹಾಗೂ ಕುತೂಹಲ ಮೂಡಿಸಿದೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್ “ಸಾರಥಿ” ಚಿತ್ರ ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ.ಕೆ.ಎಸ್”ಸಾರಥಿ ಫಿಲಂಸ್” ಮೂಲಕ ನಿರ್ಮಾಣ ಮಾಡುತ್ತಿರುವ, “ಗುರುಶಿಷ್ಯರು” ಚಿತ್ರದ ನಿರ್ದೇಶಕ ಹಾಗೂ “ಕಾಟೇರ” ಚಿತ್ರದ ಕಥಾ ಲೇಖಕ ಜಡೇಶ್ ಕೆ ಹಂಪಿ ನಿರ್ದೇಶನದ ಚಿತ್ರ ಲಾಂಡ್ ಲಾರ್ಡ್.
.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಸ್ವಾಮಿ ಜೆ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. “ಲ್ಯಾಂಡ್ ಲಾರ್ಡ್” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ವರ್ಷದ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin