A young team is ready to entertain with the film “Amruta Anjan”.

“ಅಮೃತ ಅಂಜನ್” ಚಿತ್ರದ ಮೂಲಕ ಮನರಂಜನೆ ಉಣಬಡಿಸಲು ಮಂದಾದ ಯುವ ತಂಡ - CineNewsKannada.com

“ಅಮೃತ ಅಂಜನ್” ಚಿತ್ರದ ಮೂಲಕ ಮನರಂಜನೆ ಉಣಬಡಿಸಲು ಮಂದಾದ ಯುವ ತಂಡ

ಯೂಟೂಬ್‍ನಲ್ಲಿ ಕಾಮಿಡಿ ವಿಡಿಯೋ ಮಾಡಿಕೊಂಡು ಗಮನ ಸೆಳೆದಿದ್ದ ತಂಡ ತಾವು ಮಾಡಿದ್ದ “ಅಮೃತಾಂಜನ್” ಕಿರು ಚಿತ್ರಕ್ಕೆ ಯೂಟೂಬ್‍ನಲ್ಲಿ ಬಾರಿ ಜನಮನ್ನಣೆ ಸಿಕ್ಕ ಹಿನ್ನೆಲೆಯಲ್ಲಿ ತಂಡ ಗೆಲುವಿನ ವಿಶ್ವಾಸದಲ್ಲಿ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದ್ದಾರೆ.ಅದಕ್ಕಾಗಿ ಕಿರುಚಿತ್ರದಲ್ಲಿದ್ದ ತಂಡ ಇಲ್ಲಿ “ಅಮೃತ ಅಂಜನ್ “ ಮೂಲಕ ಜನರ ಮನ ಗೆಲ್ಲಲು ತಂಡ ಮುಂದಾಗಿದೆ.

“ಅಮೃತ ಅಂಜನ್” ಚಿತ್ರದ ಮೂಲಕ ಮನರಂಜನೆ ಉಣಬಡಿಸಲು ಯುವ ತಂಡ ಮುಂದಾಗಿದ್ದು ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆಚಿತ್ರ ಜನವರಿ 30 ರಂದು ತೆರೆಗೆ ಬರಲು ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಹಾಡುಗಳ ಪ್ರದರ್ಶನ ಹಮ್ಮಿಕೊಂಡಿತ್ತು.

ಈ ವೇಳೆ ಮಾತಿಗಿಳಿದ ನಿರ್ದೇಶಕ ಜ್ಯೋತಿ ರಾವ್ ಮೋಹಿತ್, ಇದಕ್ಕೂ ಮೊದಲು ಸೋಡಾಬುಡ್ಡಿ ಎಂಬ ಸಿನಿಮಾ ಮಾಡಿದ್ದೆ ಆ ಚಿತ್ರ ಸೋಲು ಕಂಡಿತು. ಕೆಲಸ ಇಲ್ಲದೆ ಮನೆಯಲ್ಲಿ ಇದ್ದಾಗ ಮನೆಯಲ್ಲಿದ್ದಾಗ ಮಾಡಿದ್ದ ಕಿರುಚಿತ್ರ ಅಮೃತಾಂಜನ್ ಬಾರಿ ಜಪ್ರಿಯತೆ ಪಡೆಯಿತು ಈಗ ಅದೇ ತಂಡ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ತಿಂಗಳಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದ್ದು ಎಲ್ಲರ ಸಹಕಾರ ಬೆಂಬಲ ಇರಲಿ ಎಂದು ಕೇಳಿಕೊಂಡರು.

ತಂದೆ-ಮಗನ ಬಾಂಧವ್ಯ, ಹುಟುಗಾಟ, ಪ್ರೀತಿ, ಪ್ರೇಮ್ ಸೇರಿದಂತೆ ಮನರಂಜನೆಯ ಅಂಶಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ನಮ್ಮದು, ಚಿತ್ರ ಬಿಡುಗಡೆಗೂ ಮುನ್ನ ಕೆಲವು ಸ್ಥಳಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಮಾಡುವ ಉದ್ದೇಶವಿದೆ ಎಂದು ಹೇಳಿದರು

ನಟ ಸುಧಾಕರ್ ಗೌಡ ಮಾತನಾಡಿ, ಈ ಹಿಂದಿನ ನಡೆದ ಘಟನೆಗೆ ಕ್ಷಮೆ ಕೇಳಿದ್ದೆ, ಆದು ಸರಿ ತಪ್ಪೋ, ಮತ್ತೆ ಅದೇ ವಿಷಯವನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಯುವ ತಂಡ ಸೇರಿಕೊಂಡು ಜನರಿಗೆ ಇಷ್ಟವಾಗುವ ಸಿನಿಮಾ ಮಾಡಿದ್ದೇವೆ. ಒಂದು ಸಿನಿಮಾ ಮಾಡಿ ಹೋಗುವ ಉದ್ದೇಶ ನಮ್ಮದಲ್ಲ, ಹರಸಿ ಮತ್ತಷ್ಟು ಸಿನಿಮಾ ಮಾಡುವ ಉದ್ದೇಶವಿದೆ ಎಂದರು.

ನಾಯಕಿ ಪಾಯಲ್ ಚೆಂಗಪ್ಪ ಮಾತನಾಡಿ ಕಿರುಚಿತ್ರದಲ್ಲಿ ನಟಿಸುತ್ತಿದ್ದೆವು. ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ., ನಾನು ಜನರನ್ನು ನಗಿಸಬಹುದು ಎನ್ನುವುದನ್ನು ಚಿತ್ರದ ಮೂಲಕ ಮಾಡುವ ಪ್ರಯತ್ನ ಮಾಡಿದ್ದೇನೆ ಸಹಕಾರ ಬೆಂಬಲವಿರಲಿ ಎಂದು ಕೇಳಿಕೊಂಡರು.

ಮತ್ತೊಬ್ಬ ನಟ ಗೌರವ್ ಶೆಟ್ಟಿ ಮಾತನಾಡಿ, ಚಿತ್ರ ಸಂಪೂರ್ಣ ಮನರಂಜನೆಗೆ ಆದ್ಯತೆ ನೀಡಲಾಗಿದೆ. ಸನ್ನಿವೇಶಗಳು ನೈಜತೆಯಿಂದ ಕೂಡಿರಲಿ ಎನ್ನುವ ಕಾರಣಕ್ಕೆ ಕುಡಿದು ನಟಿಸಿದ್ದೇನೆ. ಚಿತ್ರ ಇಷ್ಟ ಆಗುತ್ತದೆ ಎಂದರು

ಕಲಾವಿದೆ ಮಧುಮತಿ ಮಾತನಾಡಿ, ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಮೊದಲು ಇದೇ ತಂಡದೊಂದಿಗೆ ಕಿರುಚಿತ್ರ ಮಾಡುತ್ತಿದ್ದೆವು. ಈಗ ಸಿನಿಮಾ ಮಾಡಿದ್ದೇವೆ ಎಲ್ಲರ ಬೆಂಬಲವಿರಲಿ ಎಂದು ಕೇಳಿಕೊಂಡರು

ಜಯಣ್ಣ ಫಿಲ್ಸ್ಮ್‍ಂ ಮೂಲಕ ಚಿತ್ರವನ್ನು ವಿತರಣೆ ಮಾಡುತ್ತಿದ್ದು ಹೊಸ ವರ್ಷದಲ್ಲಿ ನಗುವಿನ ಬುಗ್ಗೆ ಹರಸಿಲು ಯುವ ತಂಡ ಸಜ್ಜಾಗಿದೆ
.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin