ಯುವ ಪ್ರತಿಭೆಗಳ “ಜಿರೋ ಟೂ ಹಿರೋ” ಚಿತ್ರಕ್ಕೆ ಅರ್ಜುನ ಅವಧೂತರ ಆಶೀರ್ವಾದ
“ಜಿರೋ ಟೂ ಹಿರೋ” ಸಿನಿಮಾ ಸೆಟ್ಟೇರಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲಗು ಹೀಗೆ 5 ಭಾಷೆಗಳಲ್ಲಿ ನಿರ್ಮಾಣವಾಗಿತ್ತಿದೆ. ಚಿತ್ರದ ಮಹೂರ್ತಕ್ಕೆ ಅವಧೂತ ಅರ್ಜುನ್ ಗುರೂಜಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ

ನಾಗವೇಣಿ ಸಂತೋಷ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾ ಈ ವರ್ಷದಲ್ಲಿ ತೆರೆಗೆ ತರುವ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ
ನಾಗವೇಣಿ ಸಂತೋಷ್ ಮಾತನಾಡಿ ಆಗಸ್ಟ್, ಸೆಪ್ಟೆಂಬರ್ ನಲ್ಲಿ ಸಿನಿಮಾ ತೆರೆಗೆ ತರುವ ಉದ್ದೇಶವಿದೆ. 13 ವರ್ಷದ ಕನಸಿದು ಪ್ರಯತ್ನ ಪಟ್ಟೆ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ ಎಲ್ಲದಕ್ಕೂ ಟೈಮ್ ಬೇಕು ನನ್ನ ಜೀವನದ ಜೊತೆ ನಡೆದಿದ್ದು ಆಗಿರಬಹುದು ನಾನೇ ಎಲ್ಲದನ್ನು ಡಿಸೈಡ್ ಮಾಡಿದ್ದೀನಿ ಮುಂಬೈನಲ್ಲಿ ಸಿನಿಮಾಕ್ಕೆ ಸಂಬಂಧಪಟ್ಟ ಸಿನಿಮಾ ಮಾಡ್ತೀನಿ ಹಿಂದಿಯಲ್ಲೂ ಮಾಡ್ತಿದ್ದೀನಿ.ಕನ್ನಡ ಮೊದಲು ಕನ್ನಡದ ಜೊತೆಗೆ ಇಂಗ್ಲೀಷ್ ಸಿನಿಮಾವನ್ನು ಕೂಡ ಮಾಡ್ತಿದ್ದೀನಿ ಎಂದರು
ಅವಧೂತ ಅರ್ಜುನ್ ಗುರೂಜಿ ಮಾತಾನಾಡಿ ಯಾವುದೇ ವ್ಯಕ್ತಿಗೆ ತಾನು ಹುಟ್ಟಿದ ನೆಲ ಮಣ್ಣು ಇದರ ಮೇಲೆ ಬಹಳ ಅಭಿಮಾನ ಇರುತ್ತೆ.. ನನಗೂ ಕೂಡ ಕನ್ನಡ ಅನ್ನೋ ಶಬ್ದದ ಮೇಲೆ ತುಂಬಾ ಅಭಿಮಾನ ಹೊಸಬರ ತಂಡ ಒಳ್ಳೆ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಕನ್ನಡ ಸಿನಿಮಾ ರಂಗ ಬೆಳಿಬೇಕು ಎತ್ತರಕ್ಕೆ ಹೋಗ್ಬೇಕು.. ಎಷ್ಟೋ ಜನ ಕಲಾವಿದರೂ ಕಷ್ಟಪಟ್ಟಿದ್ದಾರೆ ದರ್ಶನ್, ಸುದೀಪ್, ರಾಜ್ ಕುಮಾರ್, ವಿಷ್ಣು ವರ್ಧನ್ ಹೀಗೆ ತುಂಬಾ ಜನ ಇದ್ದಾರೆ ನಾವೆಲ್ಲರೂ ಕಲಾಭಿಮಾನಿಗಳು ಈ ಸಿನಿಮಾರಂಗ ತುಂಬಾ ಕಷ್ಟ ಪಡ್ತಿದ್ದೆ ಅದು ನಿಲ್ಲಬೇಕು ಎಂದು ಹಾರೈಸಿದರು

ನಾಯಕಿ ಮನಿಷಾ ಭಟ್ ಮಾತಾನಾಡಿ ಸಿನಿಮಾ ಅಂದ ತಕ್ಷಣ ಪಾಸಿಟಿವ್ ವೈಬ್ಸ್ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ.. ನಾವು ಓದ್ಕೊಂಡು ಕೆಲಸ ಮಾಡ್ಕೊಂಡು ಸಿನಿಮಾದಲ್ಲಿ ತುಂಬಾ ಕಷ್ಟಪಟ್ಟು ನಟಿಸಿದ್ದೇನೆ ನಮ್ಮನ್ನ ಬೆಂಬಲಿಸಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು
ನಾಯಕಿ ರಕ್ಷಿತಾ ಗೌಡ ಮಾತಾನಾಡಿ ಮೊದಲ ಸಿನಿಮಾ ತುಂಬಾ ಖುಷಿ ಇದೆ ಎಲ್ಲರ ಜೀವನದಲ್ಲೂ ಏರಿಳಿತ ಇದ್ದೇ ಇರುತ್ತೆ.. ಮೇಯ್ನ್ ಕಂಟೆಂಟ್ ತುಂಬಾ ಮುಖ್ಯ ಎಂದರು

ನಾಗವೇಣಿ ಸಂತೋಷ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊಟ್ಟಮೊದಲ ಬಾರಿಗೆ ನಾಗವೇಣಿ ಸಂತೋಷ ಅವರೇ ಚಿತ್ರದ ನಾಯಕನಾಗಿಯೂ ಸಹ ನಟಿಸುತ್ತಿದ್ದು, ನಾಯಕಿಯಾಗಿ ರಕ್ಷಿತಾ ಗೌಡ, ಮನೀಷಾ ಭಟ್ ಅಲ್ಲದೆ ಸುಮಾ, ನಕ್ಷತ್ರ, ರಿತ್ವಿಕಾ ಉಳಿದ ತಾರಾಗಣದಲ್ಲಿದ್ದಾರೆ. ವೆಂಕಟೇಶ ನಾಕಿ ಛಾಯಾಗ್ರಹಣ ಈ ಚಿತ್ರಕ್ಕಿದೆ ಸಿನಿಮಾ ಇದೇ ವರ್ಷ ಆಗಸ್ಟ್ ಸೆಪ್ಟೆಂಬರ್ ನಲ್ಲಿ ತರೆಗೆ ಬರಲು ಸಿದ್ಧತೆ ನಡೆಸ್ತಿದೆ ಸಿನಿಮಾ ತಂಡ.


