Trailer of the film “Mavutha”, a story of the bond between a “mammoth” and an elephant, released

“ಮಾವುತ” ಮತ್ತು ಆನೆಯ ಬಾಂಧವ್ಯದ ಕಥೆಯ “ಮಾವುತ” ಚಿತ್ರದ ಟ್ರೈಲರ್ ಬಿಡುಗಡೆ - CineNewsKannada.com

“ಮಾವುತ” ಮತ್ತು ಆನೆಯ ಬಾಂಧವ್ಯದ ಕಥೆಯ “ಮಾವುತ” ಚಿತ್ರದ ಟ್ರೈಲರ್ ಬಿಡುಗಡೆ

“ಬರಿ ಟೆನ್ ಪರ್ಸೆಂಟ್ ಬಡ್ಡಿ” ಚಿತ್ರ ನಿರ್ಮಿಸಿ, ನಟಿಸಿದ್ದ ಲಕ್ಷ್ಮೀಪತಿ ಬಾಲಾಜಿ ನಿರ್ಮಿಸಿ, ನಾಯಕನಾಗಿ ನಟಿಸರುವ ಎರಡನೇ ಚಿತ್ರ “ಮಾವುತ”. ಟ್ರೇಲರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.

ಡಿ ಸಿಪಿ ಶಂಕರ್ ಬಿ,ಬಿ.ಜೆ.ಪಿ ಮುಖಂಡರಾದ ಕವಿತಾ ಸಿಂಗ್, ನಿವೃತ್ತ ಪೆÇಲೀಸ್ ಅಧಿಕಾರಿ ನಂಜುಂಡಸ್ವಾಮಿ, ಸಮಾಜ ಸೇವಕರಾದ ಭಜರಂಗಿ ಉಮೇಶ್ ಮತ್ತಿತರರು ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ನಿರ್ದೇಶಕ ರವಿಶಂಕರ್ ನಾಗ್ ನಾತನಾಡಿ “ಮಾವುತ”, ಕಾಡಿನ ಕಥೆ. ಕಾಡಿನಲ್ಲಿ ನಡೆಯುವ ಕೆಲವು ಅಕ್ರಮಗಳನ್ನು ಕಂಡು ಹಿಡಿದು ಕಾಡನ್ನು ಉಳಿಸಿಕೊಳ್ಳುವ “ಮಾವುತ” ಹಾಗೂ ಆನೆಯ ಕಥೆಯೂ ಕೂಡ. ಲಕ್ಷ್ಮೀಪತಿ ಬಾಲಾಜಿ ಚಿತ್ರ ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಸಾಗರ್ ಎಂಬ ಆನೆ ಕೂಡ ಈಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದರು.

ನಾಯಕ ಹಾಗೂ ನಿರ್ಮಾಪಕ ಲಕ್ಷ್ಮೀಪತಿ ಬಾಲಾಜಿ ಮಾತನಾಡಿ “ಮಾವುತ” ಎರಡನೇ ಚಿತ್ರ. ಇದೊಂದು ಕಾಡಿನ ಕಥಾಹಂದರ ಹೊಂದಿರುವ ಚಿತ್ರ. ಕಾಡಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಮಾವುತ ಹಾಗೂ ಆನೆಯ ಬಾಂಧವ್ಯದ ಸನ್ನಿವೇಶಗಳೇ ಚಿತ್ರದ ಹೈಲೆಟ್. ಬಹಳ ದಿನಗಳ ನಂತರ ಕನ್ನಡದಲ್ಲಿ ಆನೆ ಪೂರ್ಣ ಪ್ರಮಾಣದಲ್ಲಿ ನಟಿಸಿರುವ ಚಿತ್ರವೊಂದು ಬರುತ್ತಿದೆ. ಸಿನಿಮಾ ಮಾಡಲು ನಮಗೆ ಅನೇಕ ಬಾರಿ ಅಂಬಾರಿ ಹೊತ್ತು, ಈಗ ನಮ್ಮೊಡನೆ ಇರದ ಅರ್ಜುನನೇ ಸ್ಪೂರ್ತಿ. ಅರ್ಜುನನಿಗೆ ಅರ್ಪಣೆ ಎಂದರು

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಚಿತ್ರದಲ್ಲಿ ಸಾಹಸ ಸನ್ನಿವೇಶಗಳಿದೆ. ಒಂದಕ್ಕಿಂತ ಒಂದು ಚೆನ್ನಾಗಿದೆ. ಸಾಹಸ ಸಂಯೋಜನೆಯ ಜೊತೆಗೆ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ ಎಂದು ತಿಳಿಸಿದರು.

ನಾಯಕಿಯರಾದ ಮಹಾಲಕ್ಷ್ಮಿ, ದಿವ್ಯಶ್ರೀ, ನಟರಾದ ಲಯಕೋಕಿಲ, ಕೈಲಾಶ್ ಕುಟ್ಟಪ್ಪ, ಹಿನ್ನೆಲೆ ಸಂಗೀತ ನೀಡಿರುವ ರವಿವರ್ಮ ಹಾಗೂ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮುಂತಾದವರು “ಮಾವುತ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin