Actor Arjun Nagarkar starrer "Kadalur Kanmani" is all set to hit the screens

ನಟ ಅರ್ಜುನ್ ನಗರ್ಕರ್ ನಟನೆಯ ”ಕಡಲೂರ ಕಣ್ಮಣಿ” ತೆರೆಗೆ ಬರಲು ಸಿದ್ದ - CineNewsKannada.com

ನಟ ಅರ್ಜುನ್ ನಗರ್ಕರ್ ನಟನೆಯ ”ಕಡಲೂರ ಕಣ್ಮಣಿ” ತೆರೆಗೆ ಬರಲು ಸಿದ್ದ

ರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ “ಕಡಲೂರ ಕಣ್ಮಣಿ” ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕೊಳ ಶೈಲೇಶ್ ಆರ್ ಪೂಜಾರಿ, ಬಸವರಾಜ್ ಗಚ್ಚಿ ನಿರ್ಮಾಣದ ಈ ಚಿತ್ರಕ್ಕೆ ವಿನೋದ್ ರಾಮ್, ಹೊಳೆನರಸಿಪುರ ಮತ್ತು ಮಹೇಶ್ ಕುಮಾರ್ ಎಂ ಅವರ ಸಹ ನಿರ್ಮಾಣವಿದೆ. ಯುವ ಪ್ರತಿಭೆ ರಾಮ್ ಪ್ರಸಾದ್ ಹುಣಸೂರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ನಾಯಕನಾಗಿ ಶಿರಸಿ ಮೂಲದ ಅರ್ಜುನ್ ನಗರ್ಕರ್ “ಕಡಲೂರ ಕಣ್ಮಣಿ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿಶಾ ಯಾಲಿನಿ ನಾಯಕಿಯಾಗಿ ನಟಿಸಿದ್ದು. ಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಉಡುಪಿ, ಮಂಗಳೂರು ಹೊನ್ನಾವರ, ಮಂಕಿ, ಮುರುಡೇಶ್ವರದ ಸುತ್ತಮುತ್ತಲ್ಲಿನ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಮನಮೋಹಕ ಪ್ರಾಕೃತಿಕ ಸ್ಥಳಗಳನ್ನು ಮನೋಹರ್, ರವಿರಾಮ್ ಸುಂದರವಾಗಿ ಚಿತ್ರೀಕರಿಸಿದ್ದಾರೆ. ‘ಕಡಲೂರ ಕಣ್ಮಣಿ’ ಚಿತ್ರಕ್ಕೆ ನಿರ್ದೇಶಕರಾದ ರಾಮ್ ಪ್ರಸಾದ್ ಅವರು ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

‘ಕಡಲೂರ ಕಣ್ಮಣಿ’ ಅಂದರೆ ವಜ್ರ ಎಂದೂ ಅರ್ಥ. ಚಿತ್ರಕಥೆ ಯುವ ಮನಸುಗಳ ಪ್ರೀತಿ ಪ್ರೇಮದ ಮೇಲೆ ಸಾಗುತ್ತದೆ.
ಸಿಟಿಯ ಹುಡುಗ ಕಡಲ ತೀರದ ಹುಡುಗಿಯ ಪ್ರೇಮ ಕಥೆಯೇ ‘ಕಡಲೂರ ಕಣ್ಮಣಿ’.ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ. ಚಿತ್ರದ ಕಲಾವಿದರು ತುಂಬಾ ಚಂದವಾಗಿ ನಟಿಸಿದ್ದಾರೆ.ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ.ಸಂಕಲನ ಕಾರ್ಯದಲ್ಲಿ ನಿಶಿತ್ ಪೂಜಾರಿ ತಮ್ಮ ಕೈಚಳಕ ತೋರಿಸಿದ್ದಾರೆ.

ಬಂಡೆ ಚಂದ್ರು ರವರ ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶಗಳು ಚೆನ್ನಾಗಿ ಮೂಡಿ ಬಂದಿವೆ.’ಕಡಲೂರ ಕಣ್ಮಣಿ’ ಚಿತ್ರವನ್ನು ಡಿಎಸ್‍ಕೆ ಸಿನಿಮಾಸ್ ಸಂಸ್ಥೆಯ ಆಡಿ ಸುನೀಲ್ ಕುಂಬಾರ್ ರವರು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದ್ದಾರೆ ಎಂದು ನಿರ್ದೇಶಕ ರಾಮ್ ಪ್ರಸಾದ್ ಹುಣಸೂರ ತಿಳಿಸಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin