” ಅಪರಿಚಿತೆ ” ಚಿತ್ರದಿಂದ ಆಸಿಡ್ ದಾಳಿಗೆ ತುತ್ತಾದ ಮಹಿಳೆಯರ ಸನ್ಮಾನ
‘ತಾಯವ್ವ’ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಅಭಿನಯದ ‘ಅಪರಿಚಿತೆ’ ಚಿತ್ರ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿತ್ತು. ಇತ್ತೀಚಿಗೆ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ಮಾಪಕ ಸುರೇಶ್ ಕುಮಾರ್ ಹಾಗೂ ನಟಿ ಗೀತಪ್ರಿಯ “ಸಕ್ಸಸ್ ಆಫ್ ಅಪರಿಚಿತೆ” ಹೆಸರಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.

ಚಿತ್ರದ ಕಲೆಕ್ಷನ್ ನಿಂದ ಬಂದ ಹಣದಿಂದ ಆಸಿಡ್ ದಾಳಿಗೆ ತುತ್ತಾದ ಮೂವರು ಮಹಿಳೆಯರಿಗೆ ಐವತ್ತು ಸಾವಿರದ ಚೆಕ್ ನೀಡಿ ಸನ್ಮಾನಿಸಿದರು. ನಟಿ ಮೇಘನರಾಜ್,. ಹಿರಿಯ ನಟರಾದ ಶ್ರೀನಾಥ್, ಸುರೇಶ್ ಹೆಬ್ಳೀಕರ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು
ನಟಿ ಮೇಘನಾ ರಾಜ್ ಮಾತನಾಡಿ ಗೀತಪ್ರಿಯ ಒಂದೊಳ್ಳೆ ಉದ್ದೇಶವಿಟ್ಟು ಸಿನಿಮಾ ಮಾಡಿದ್ದಾರೆ. ಆಸಿಡ್ ದಾಳಿಯಿಂದ ತುತ್ತಾದ ಮಹಿಳೆಯರಿಗೆ ಸಹಾಯ ಮಾಡುವ ಉತ್ತಮ ಕಾರ್ಯದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಲ್ಲಿ ಬಂದಿರುವ ಮಹಿಳೆಯರ ಕಥೆ ಕೇಳಿ ನಾನು ಭಾವುಕಳಾದೆ ಎಂದರು.

ನಟಿ ಗೀತ ಪ್ರಿಯ ಮಾತನಾಡಿ “ಅಪರಿಚಿತೆ” ಚಿತ್ರದ ಗಳಿಕೆಯಿಂದ ಬಂದ ಹಣದಿಂದ ಆಸಿಡ್ ದಾಳಿಯಿಂದ ನೊಂದು, ಪುನಃ ಜೀವನ ಕಟ್ಟಿಕೊಂಡಿರುವ ಮೂವರು ಮಹಿಳೆಯರಿಗೆ ಸಹಾಯ ಮಾಡೋಣ ಎನಿಸಿತು.
ಮೇಘನಾರಾಜ್ , ಹಿರಿಯ ನಟರಾದ ಶ್ರೀನಾಥ್, ಸುರೇಶ್ ಹೆಬ್ಳೀಕರ್ ಅವರಿಗೆ ಧನ್ಯವಾದ ಎಂದು ತಿಳಿಸಿದರು.
ಸುರೇಶ್ ಕುಮಾರ್ ನಿರ್ಮಿಸಿರುವ ಚಿತ್ರವನ್ನು ವಿಶ್ವನಾಥ್ ನಿರ್ದೇಶಿಸಿದ್ದಾರೆ. ಗೀತಪ್ರಿಯ, ಸಿಂಧೂ ಲೋಕನಾಥ್, ಆರ್.ಜೆ. ನಿಖಿತಾ, ಹಿರಿಯ ನಟ ಶ್ರೀನಾಥ್ ಹಾಗೂ ಶ್ರೀನಾಥ್ ಪುತ್ರ ರೋಹಿತ್ ಕೂಡ ಚಿತ್ರದ ತಾರಾಬಳಗದಲ್ಲಿದ್ದಾರೆ.


