Actor Ayyappa in a new look for the film 'Pabbar'

‘ಪಬ್ಬಾರ್’ ಚಿತ್ರಕ್ಕಾಗಿ ಹೊಸ ಲುಕ್‍ನಲ್ಲಿ ನಟ ಅಯ್ಯಪ್ಪ - CineNewsKannada.com

‘ಪಬ್ಬಾರ್’ ಚಿತ್ರಕ್ಕಾಗಿ ಹೊಸ ಲುಕ್‍ನಲ್ಲಿ ನಟ ಅಯ್ಯಪ್ಪ

ಹಿರಿಯ ಕಲಾವಿದರಾದ ಸಾಯಿ ಕುಮಾರ್ ಮತ್ತು ರವಿಶಂಕರ್ ಅವರ ಸಹೋದರ ಅಯ್ಯಪ್ಪ ತಮ್ಮ ವಿಭಿನ್ನ ಗೆಟಪ್‍ಗಳಿಂದಲೇ ಗಮನ ಸೆಳೆದವರು, ಇದೀಗ ಪಬ್ಬಾರ್ ಚಿತ್ರಕ್ಕಾಗಿ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಪಬ್ಬಾರ್. ಚಿತ್ರದಲ್ಲಿ ಧೀರೇನ್ ರಾಮ್ ಕುಮಾರ್ ನಾಯಕನಾಗಿ, ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಾಖಾಹಾರಿ ನಿರ್ದೇಶಕ ಸಂದೀಪ್ ಸುಂಕದ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ಪಬ್ಬಾರ್ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಕಲಾವಿದ ಅಯ್ಯಪ್ಪ ಎಂಟ್ರಿ ಕೊಟ್ಟಿದ್ದಾರೆ.

ಅಯ್ಯಪ್ಪ ಪಿ ಶರ್ಮ ಪಬ್ಬಾರ್ ಸಿನಿಮಾದಲ್ಲಿ ಖಡಕ್ ಪೆÇಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಹೊಸ ಅವತಾರ ತಾಳಿದ್ದಾರೆ. ಅಯ್ಯಪ್ಪ 14 ವರ್ಷದ ಬಳಿಕ ಹೇರ್ ಕಟ್ ಮತ್ತು ಕ್ಲೀನ್ ಶೇವ್ ಮಾಡಿ ಸ್ಮಾರ್ಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದ ಗಡ್ಡ ಬಿಟ್ಟು ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪಬ್ಬಾರ್ ಸಿನಿಮಾದ ಪಾತ್ರಕ್ಕಾಗಿ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡಿದ್ದಾರೆ.

ಮಯೂರ್ ಅಂಬೇಕಲ್ಲು ಸಂಗೀತ, ವಿಶ್ವಜಿತ್ ರಾವ್ ಕ್ಯಾಮರಾವರ್ಕ್ ಚಿತ್ರಕ್ಕಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಹಿರಿಯ ನಟ ರಾಮಕೃಷ್ಣ, ಸಕುಟುಂಬ ಸಮೇತ ಖ್ಯಾತಿಯ ಭರತ್ ಜಿಬಿ, ಶ್ರೀಹರ್ಷ ಗೋಭಟ್ ತಾರಾಬಳಗದಲ್ಲಿದ್ದಾರೆ.

ಪಬ್ಬಾರ್ ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಚಿತ್ರಕಥೆಗೆ ಕೇಂದ್ರಬಿಂದು. ಹಾಗಾಗಿ ಚಿತ್ರಕ್ಕೆ ‘ಪಬ್ಬಾರ್’ ಎಂಬ ಟೈಟಲ್ ಇಡಲಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin