Salman Khan pays tribute to Kiccha Sudeep's daughter Saanvi

ಕಿಚ್ಚ ಸುದೀಪ್ ಮಗಳು ಸಾನ್ವಿ ಕಂಠಕ್ಕೆ ಸಲ್ಮಾನ್ ಖಾನ್ ಫಿದಾ - CineNewsKannada.com

ಕಿಚ್ಚ ಸುದೀಪ್ ಮಗಳು ಸಾನ್ವಿ ಕಂಠಕ್ಕೆ ಸಲ್ಮಾನ್ ಖಾನ್ ಫಿದಾ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ “ಮಾರ್ಕ್” ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಅದರಲ್ಲೂ ಚಿತ್ರದ ಮಸ್ತ್ ಮಲೈಕಾ ಹಾಡು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಮಿಲಿಯನ್ ಗಟ್ಟಲೇ ವೀವ್ಸ್ ಕಂಡಿರುವ ಈ ಗೀತೆಗೆ ಧ್ವನಿಯಾದವರು ಕಿಚ್ಚನ ಮುದ್ದಿನ ಪುತ್ರಿ ಸಾನ್ವಿ ಸುದೀಪ್.

ಸಾನ್ವಿ ಸುದೀಪ್ ಕಂಠ ಕಾಣಿಸಿರುವ ಮಸ್ತ್ ಮಲೈಕಾ ಹಾಡನ್ನು ಬಾಲಿವುಡ್ ಭಾಯಿಜಾನ್ ಮೆಚ್ಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಹಾಡಿನ ಲಿಂಕ್ ಅನ್ನು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. `ಸುಂದರವಾದ ಹಾಡು, ಒಳ್ಳೆಯದಾಗಲಿ’ ಎಂದು ಸಲ್ಮಾನ್ ಖಾನ್ ಹಾರೈಸಿದ್ದಾರೆ ಈ ಸ್ಟೋರಿಯಲ್ಲಿ ಕಿಚ್ಚ ಸುದೀಪ್ ಹಾಗೂ ಸಾನ್ವಿಯನ್ನು ಟ್ಯಾಗ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಕೊಟ್ಟ ಈ ಮೆಚ್ಚುಗೆಗೆ ಸಾನ್ವಿ ಫುಲ್ ಖುಷ್ ಆಗಿದ್ದಾರೆ. `ಎಂತಹ ಅದ್ಭುತ ಗೌರವ. ಧನ್ಯವಾದಗಳು ಸಲ್ಮಾನ್ ಸರ್’ ಎಂದು ಸಾನ್ವಿ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸಲ್ಲು ಹಾಗೂ ಕಿಚ್ಚ ಸುದೀಪ್ ಆಪ್ತ ಗೆಳೆಯರು. ಇವರಿಬ್ಬರೂ ದಬಾಂಗ್ 3 ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಸಲ್ಮಾನ್ ಹಾಗೂ ಸುದೀಪ್ ಎರಡು ಕುಟುಂಬದ ನಡುವೆ ಒಳ್ಳೆ ಒಡನಾಟವಿದೆ. ಈಗ ಕಿಚ್ಚನ ಮಗಳ ಧ್ವನಿಗೆ ಸಲ್ಲುಮೀಯಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸುದೀಪ್ ಪುತ್ರಿ ಸಾನ್ವಿ ಖುಷಿಯಾಗಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin