ನಟ ಧನ್ವೀರ್ ಹೃದಯವಂತ : ಹಿರಿಯ ನಟಿ ತಾರಾ ಅನುರಾಧ ಪ್ರಶಂಸೆ
“ವಾಮನ” ಚಿತ್ರದಲ್ಲಿ ಮಗನಾಗಿ ಕಲಾವಿದನಾಗಿ ಸಿಕ್ಕ ವರ ನಟ ಧನ್ವೀರ್. ಪ್ರತಿ ಶೆಡ್ಯೂಲ್ಡ್‍ನಲ್ಲಿ ಕೇಕ್ ಕತ್ತರಿಸಿ ಸೀರೆ ಕೊಟ್ಟಿದ್ದ ಎಂದು ಚಿತ್ರೀಕರಣದ ಅನುಭವ ಮತ್ತು ಧನ್ವೀರ್ ಅವರ ಮಾನವೀಯ ಗುಣಗಳನ್ನು ಹಾಡಿಹೊಗಳಿದರು ಹಿರಿಯ ನಟಿ ತಾರಾ ಅನುರಾಧ.

ಪ್ರತಿ ಷೆಡೂಲ್ಡ್ ಮುಗಿದಾಗ ಸೀರೆ ಕೊಟ್ಟಿದ್ದ ಎಲ್ಲವನ್ನು ಉಟ್ಟುಕೊಂಂಡಿದ್ದೇನೆ.ಏಪ್ರಿಲ್ 10 ಕ್ಕೆ ವಾಮನ ಚಿತ್ರ ಬಿಡುಗಡೆ ಆಗುತ್ತಿದೆ. ಆಗ ಮತ್ತೊಂದು ಸೀರೆ ಕೊಡು ಮಗನೆ. ಸ್ನೇಹಕ್ಕೆ ಬೆಲೆ ಕೊಡುವ ಧನ್ವೀರ್ ಹೃದಯವಂತ, ಇಂತಹ ಮಗನನ್ನು ಪಡೆದ ತಂದೆ ತಾಯಿಯರಿಗೆ ಧನ್ಯವಾದ ಎಂದರು.
ಮತ್ತೊಂದು ವಿಷಯ ಏನು ಗೊತ್ತಾ ನಟ ಧನ್ವೀರ್‍ಗೆ ನಾಯಕಿ ಜೊತೆ ರೋಮಾನ್ಸ್ ಮಾಡಲು ಆಗೋದಿಲ್ಲ.ಇದು ಕಷ್ಡವದ ಕೆಲಸ. ನಿರ್ದೇಶಕರು ಹೇಳಿ ಹೇಳಿ ಸಾಕಾಗಿ ಹೋಗಿತ್ತು. ಧನ್ವೀರ್ ಗೆ ಬೇಗ ಮದುವೆ ಮಾಡಿದರೆ ಸಮಸ್ಯೆ ಬಗೆ ಹರಿಯಲಿದೆ.ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು
ಸಿನಿಮಾದವರಿಗೆ ನಿಜವದ ದೇವಸ್ತಾನ ಅಂದ್ರೆ ಚಿತ್ರಮಂದಿರ ಹಾಗಾಗಿಯೇ ಅಣ್ಣಾವ್ರು ಅಭಿಮಾನಿಗಳೇ ದೇವರು ಎಂದು ಕರೆದಿದ್ದರು. ನಿಮ್ಮ ಕೂಗು, ಚಪ್ಪಾಳೆ,ನಗು ಎಲ್ಲವೂ ನಿಮ್ಮಿಂದಲೇ
ಚಿತ್ರದ ಮತ್ತೊಬ್ಬ ರಾಕ್ಷಸ ಇದ್ದಾರೆ ಅದುವೇ ನಿರ್ದೇಶಕ ಶಂಕರ್ ರಾಮನ್ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮತ್ತೊಬ್ಬ ಹಿರಿಯ ನಟಿ ಚಿತ್ಕಲ ಬಿರಾದಾರ್ ಮಾತನಾಡಿ ಬಜಾರ್ ಚಿತ್ರದಲ್ಲಿ ತಾಯಿ ಪಾತ್ರ ಮಾಡಿದ್ದೆ. ವಾಮನ ಮೂರನೇ ಚಿತ್ರ. ಡೇಟ್ಸ್ ಸಮಸ್ಯೆಯಾಗಿತ್ತು. ಧನ್ವೀರ್ ಕಾಲ್ ಮಾಡಿ ಡೇಟ್ಸ್ ಕೊಡಲ್ಲ ಅಂದ್ರು.ಒಮ್ಮೆ ತಾಯಿಯಾಗಿ ಕಾಣಿಸಿಕೊಂಡರೆ ಜೀವನ ಪೂರ ತಾಯಿ ಮಗನ ಸಂಬಂದ ಇರಲಿದೆ. ಚಿತ್ರೀಕರಣದ ಸಮಯದಲ್ಲಿ ಅದು ಯುಗಾದಿ ಹಬ್ಬದ ವೇಳೆ ಸೀರೆ ಕೊಟ್ಟಿದ್ದರು. ಅದು ಗ್ರಾಂಡ್ ಆಗಿದೆ. ಅದನ್ನು ಚಿತ್ರದ ಬಿಡುಗಡೆ ದಿನ ಉಡುತ್ತೇನೆ ಎಂದು ಹೇಳಿದರು.
ಹಿರಿಯ ಕಲಾವಿದ ಸಂಪತ್ ಕುಮಾರ್ ಮಾತನಾಡಿ ಎಷ್ಟೋ ವರ್ಷದ ಹಿಂದೆ ಕಟೌಟ್ ಮೂಲಕವೇ ಗಮನ ಸೆಳೆದಿದ್ದ ನಟ ದರ್ಶನ್ ಎಲ್ಲೋ ಹೋದರು. ಅದೇ ರೀತಿ ಲುಕ್ ನಟ ಧನ್ವೀರ್ ಅವರಲ್ಲಿದೆ. ಮತ್ತಷ್ಟು ಎತ್ತಕ್ಕೆ ಬೆಳೆಯಲಿ. ಚಿತ್ರೀಕರಣದ ವೇಳೆ ಖುಷ್ಕ ಕೇಳಿದ್ರೆ ಬಿರಿಯಾನಿ ಕೊಟ್ಟಿದ್ದಾರೆ. ಚಿತ್ರ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಇನ್ನೂ ನಿರ್ದೇಶಕ ಶಂಕರ್ ರಾಮನ್ ಅವರಲ್ಲಿ ದೊಡ್ಡ ಪ್ರತಿಭೆಯಿದೆ. ಇಂತಹ ನಿರ್ದೇಶಕರು ಗೆಲ್ಲಬೇಕು, ಗೆದ್ದ ನಂತರ ಮರೀಬೇಡ ಎಂದು ಹೇಳಿದರು ಬಹುಭಾಷಾ ನಟ ಸಂಪತ್.

