Actor Darshan is the reason why he is like a king in the film industry: Thank you, D boss

ಚಿತ್ರರಂಗದಲ್ಲಿ ರಾಜನ ರೀತಿ ಇರಲು ನಟ ದರ್ಶನ್ ಕಾರಣ : ಥ್ಯಾಂಕು ಯೂ ಡಿ ಬಾಸ್ - CineNewsKannada.com

ಚಿತ್ರರಂಗದಲ್ಲಿ ರಾಜನ ರೀತಿ ಇರಲು ನಟ ದರ್ಶನ್ ಕಾರಣ : ಥ್ಯಾಂಕು ಯೂ ಡಿ ಬಾಸ್

ಕನ್ನಡ ಚಿತ್ರರಂಗದಲ್ಲಿ 22 ವರ್ಷಗಳಿಂದ ಇದ್ದೇನೆ ಎಂದರೆ ಅದಕ್ಕೆ ಡಿ ಬಾಸ್ ದರ್ಶನ್ ಕಾರಣ ಎಂದು ಅಭಿಮಾನದಿಂದ ಹೇಳೀದ್ದಾರೆ ಹಿರಿಯ ಕಲಾವಿದ ಪೆಟ್ರೋಲ್ ಪ್ರಸನ್ನ

“ವಾಮನ” ಚಿತ್ರದ ಟ್ರೈಲರ್ ಬಿಡುಡಗೆ ನಂತರ ಮಾತನಾಡಿದ ಪೆಟ್ರೋಲ್ ಪ್ರಸನ್ನ 2000ದ ಇಸವಿಯಲ್ಲಿ ನಟ ದರ್ಶನ್ ಅವರ ಮೊದಲ ಚಿತ್ರದ ವೇಳೆ ನನ್ನವ್ವ. ದರ್ಶನ್ ಅವರನ್ನು ನೋಡಿ ರಾಜನ ಥರ ಇದ್ದಾನೆ. ಮುಂದೊಂದು ದಿನ ದೊಡ್ಡ ಮಟ್ಟಕ್ಕೆ ಬೆಳಿತಾನೆ. ಮಂಡ್ಯದವರ ಹೇಳಿದ್ದು ನಿಜ ಆಗುತ್ತೆ ಎಂದು ಹೇಳಿದ್ದರು. ಆ ಮಾತು ಸತ್ಯ ಆಗಿ ಬಹಳ ವರ್ಷಗಳೇ ಆಗಿವೆ.

ದುರುದುಷ್ಟವಶಾತ್ ಡಿ ಬಾಸ್ ಅವರ ಹುಟ್ಟುಹಬ್ಬದಂದೇ 2009ರಲ್ಲಿ ನನ್ನ ತಾಯಿ ನಿಧನರಾದರು ಎನ್ನುತ್ತಲೇ ವೇದಿಕೆ ಮೇಲೆ ಭಾವುಕರಾದರು ಕಲಾವಿದ ಪೆಟ್ರೋಲ್ ಪ್ರಸನ್ನ.

ಚಿತ್ರರಂಗದಲ್ಲಿ ಮೊದಲ ಬಾರಿಗೆ ನನ್ನ ಹೆಗಲ ಮೇಲೆ ಹಾಕಿದ್ದ ಏಕೈಕ ನಟ ಅಂದರೆ ಅದು ಡಿ ಬಾಸ್, ನಿರ್ದೇಶಕ ಪಿ.ಎನ್ ಸತ್ಯ ಚಿತ್ರದಲ್ಲಿ ನಟಿಸಲು ಅಕಾಶ ಮಾಡಿಕೊಟ್ಟಿದ್ದರು. ಆ ನಂತರ ಎಲ್ಲರ ನಿರ್ದೇಶಕರು ಮತ್ತು ನಟರು ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಹೀಗಾಗಿ ಚಿತ್ರರಂಗದಲ್ಲಿ ಇಂದು ನಾನು ರಾಜನಂತಿದ್ದೇನೆ. ಇದಕ್ಕೆಲ್ಲಾ ಕಾರಣ ನಟ ದರ್ಶನ್ ಎಂದು ಹಾಡಿ ಹೊಗಳಿದರು.

ನನ್ನ ಹೆಸರು ಪ್ರಸನ್ನ ಕುಮಾರ್ , ಡಿಬಾಸ್ ಜೊತೆ ಚಿತ್ರದಲ್ಲಿ ನಟಿಸಿದ ಬಳಿಕ ಪೆಟ್ರೋಲ್ ಪ್ರಸನ್ನ ಆದೆ. ಅದಕ್ಕೆ ಕಾರಣ ಡಿ ಬಾಸ್ . ಇನ್ನು ವಾಮನ ಚಿತ್ರದಲ್ಲಿ ದಿನಿ ಎನ್ನುವ ನೆಗೆಟೀವ್ ಪಾತ್ರ ಮಾಡಿದ್ದೇನೆ ಎಲ್ಲರಿಗೂ ಇಷ್ಟವಾಗಲಿದೆ ಎಂದರು

ಮತ್ತೊಬ್ಬ ಖಳನಟ ಕಾಕ್ರೋಚ್ ಸುಧಿ ಮಾತನಾಡಿ , ಶಾಲಾ ದಿನಗಳನ್ನು ಗೋಲ್ಡನ್ ಡೇಸ್ ಅಂತ ಕರೀತಾರೆ. ಅದು ಶ್ರೀಮಂತರ ಮಕ್ಕಳಿಗೆ ಮಾತ್ರ,ಬಡವರ ಮಕ್ಕಳಿಗೆ ಬರ್ಡನ್ ಡೇಸ್. ಶೂ ಇದ್ರೆ ,ಸಾಕ್ಸ್ ಇರಲ್ಲ. ಸಾಕ್ಸ್ ಇದ್ದರೆ ಟೈ ಇರಲ್ಲ. ಆದರೆ ನನ್ನ ಗೋಲ್ಡನ್ ಡೇಸ್ ವಾಮನ ಚಿತ್ರತಂಡದ ಜೊತೆ ಇದೆ. ನಟ ಧನ್ಚೀರ್ ಅವರ ಜೊತೆ ಕೆಲಸ ಮಾಡಿದ್ದು ಮರೆಯಲಾರದ ಕ್ಷಣ .ಬ್ಯೂಟಿಫುಲ್ ಮನಸ್ಸುಗಳು ಚಿತ್ರದ ವೇಳೆ ದರ್ಶನ್ ಅವರಿಗೆ ಪೋಟೋ ಕೊಟ್ಟಿದೆ. ಅದು ಅವರ ಮನೆಯಲ್ಲಿದೆ. ಇದು ಕೋಟಿ ಕೋಟಿ ಕೊಟ್ಟರೂ ಸಿಗುವುದಿಲ್ಲ ಎಂದು ಹೇಳಿದರು

ಹಿರಿಯ ಖಳನಟ ಕೋಟೆ ಪ್ರಭಾಕರ್ ಮಾತನಾಡಿ ಡಿ ಬಾಸ್ ಜೊತೆ ಸಾರಥಿ, ಕಲಾಸಿ ಪಾಳ್ಯ ಸೇರಿ 10 ಸಿನಿಮಾ ಮಾಡಿದ್ದೇಳ್ಯೀಗ ಧನ್ವೀರ್ ಜೊತೆ ಎರಡನೇ ಸಿನಿಮಾ , ವಾಮನ ಚಿತ್ರ ನೋಡಿ ಹರಸಿ ಎಂದು ಕೇಳಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin