ಯುವ ಪ್ರತಿಭೆಗಳ “ಪಪ್ಪಿ” ಚಿತ್ರಕ್ಕೆ ಕೈ ಜೋಡಿಸಿದ ನಟ ಧೃವ ಸರ್ಜಾ
ಹೊಸಬರು ಹೊಸ ಪ್ರಯೋಗಳನ್ನು ಮಾಡುತ್ತಲೇ ಇರುತ್ತಾರೆ. ಆ ಪ್ರಯೋಗಳು ಸಕ್ಸಸ್ ಆಗಲಿ ಬಿಡಲಿ ತಮ್ಮ ಪ್ರಯತ್ನಗಳನ್ನು ಯಾವತ್ತೂ ಕೈ ಬಿಡೋದಿಲ್ಲ. ಈಗ ಹೊಸಬರೇ ಸೇರಿಕೊಂಡು ಉತ್ತರ ಕರ್ನಾಟದ ಜವಾರಿ ಭಾಷೆಯಲ್ಲೊಂದು “ಪಪ್ಪಿ” ಸಿನಿಮಾ ಮಾಡಿದ್ದಾರೆ. ನಟ ದೃವ ಸರ್ಜಾ ಸಾಥ್ ನೀಡಿದ್ದಾರೆ

ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ, ಟ್ರೇಲರ್ ನೋಡಿದವವರೆಲ್ಲರೂ ಹೊಟ್ಟೆ ತುಂಬ ನಕ್ಕು ನಲಿಯುವುದರ ಜೊತೆಗೆ ಭಾವುಕರಾಗಿದ್ದಾರೆ. ಒಂದೊಳ್ಳೆ ಕಥೆ ಹೇಳೋದಿಕ್ಕೆ ಹೊರಟಿರುವ ಯುವ ಪ್ರತಿಭೆಗಳು ಮುಂದಾಗಿದ್ದಾರೆ
ಈ ಹಿಂದೆ ಫಸ್ಟ್ ಲವ್ ಸಿನಿಮಾ ಮಾಡಿದ್ದ ಆಯುಷ್ ಮಲ್ಲಿ ಸಾರಥ್ಯದಲ್ಲಿ ಮೂಡಿಬಂದಿರುವ ಚಿತ್ರ “ಪಪ್ಪಿ”. ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ಪಪ್ಪಿ ಸಿನಿಮಾವನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅರ್ಪಿಸುತ್ತಿದ್ದು, ಮೇ 1ಕ್ಕೆ ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಚಿತ್ರತಂಡ ಪ್ರಚಾರ ನಡೆಸುತ್ತಿದೆ.
ನಟ ಧ್ರುವ ಸರ್ಜಾ ಮಾತನಾಡಿ ಪಪ್ಪಿ ಸಿನಿಮಾ ನೋಡಿದ್ದೇನೆ. ಜಗದೀಶ್ ಹಾಗೂ ಆದಿತ್ಯ ತುಂಬಾ ಓಳ್ಳೆ ಆಕ್ಟರ್. ರೇಣುಕಾ ಮೇಡಂ, ದುರ್ಗಪ್ಪ ಎಲ್ಲರೂ ರಿಯಲಿಸ್ಟಿಕ್ ಆಗಿ ನಟಿಸಿದ್ದಾರೆ. ಇವರೆಲ್ಲರೂ ಇಷ್ಟು ಚೆನ್ನಾಗಿ ನಟಿಸಿದ್ದಾರೆ ಎಂದರೆ ಕಾರಣಕರ್ತೃ ನಿರ್ದೇಶಕರು. ತಿಥಿ ಸಿನಿಮಾ ನೋಡಿ ಆಮೇಲೆ ಇದ್ದ ವೈಬ್ಸ್ ಈಚಿತ್ರಕ್ಕಿದೆ. ಎಮೋಷನ್ ಗೆ ಎಲ್ಲರೂ ಕನೆಕ್ಟ್ ಆಗುತ್ತಾರೆ. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ. ಎಲ್ಲಾ ಹೊಸ ಪ್ರತಿಭೆಗಳನ್ನು ಕನ್ನಡಾಭಿಮಾನಿಗಳು ಕೈಬಿಡಬೇಡಿ. ಇಡೀ ಪಪ್ಪಿ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ನಿರ್ದೇಶಕ ಆಯುಷ್ ಮಲ್ಲಿ ಮಾತನಾಡಿ ಪಪ್ಪಿ ಟ್ರೇಲರ್ ಅರ್ಗನಿಕ್ ಆಗಿ ರೀಚ್ ಆಗಿದೆ. ಯಾವುದೇ ರೀತಿ ಬೂಸ್ಟ್ ಮಾಡಿಲ್ಲ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಟ್ರೇಲರ್ ರಿಲೀಸ್ ಆದ ಬಳಿಕ ಧ್ರುವ ಅಣ್ಣ ಕಡೆಯಿಂದ ಕಾಲ್ ಬರುತ್ತದೆ. ಟ್ರೇಲರ್ ನೋಡಿ ನಿನಗೆ ಏನ್ ಸಾಥ್ ಬೇಕೋ ನಾನು ಕೊಡುತ್ತೇನೆ. ಈ ರೀತಿಯ ಟ್ಯಾಲೆಂಟ್ ಇಂಡಸ್ಟ್ರೀಗೆ ಬೇಕು. ಉತ್ತರ ಕರ್ನಾಟಕದವರು ಚಿತ್ರರಂಗಕ್ಕೆ ಬರಬೇಕು ಎಂದು ಬೆಂಬಲ ನೀಡಿದ್ದಾರೆ. ವಿಜಯ್ ರಾಜ್ ಕುಮಾರ್, ರಮ್ಯಾ ಮೇಡಂ, ರಾಣಾ ದಗ್ಗುಭಾಟಿ ಎಲ್ಲರೂ ಟ್ರೇಲರ್ ಮೆಚ್ಚಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿಕೂಡ ಟ್ರೇಲರ್ ನೋಡಿ ಇಷ್ಟಪಟ್ಟು, ಉತ್ತರ ಕರ್ನಾಟಕದವರು ಇಂಡಸ್ಟ್ರೀಗೆ ಬರಬೇಕು ಎಂದು ಹೇಳಿದ್ದಾರೆ ಎಂದರು.

ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ಥಳೀಯ ಕಲಾವಿರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದ್ರುಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಬಿ ಸುರೇಶ್ ಬಾಬು ಕ್ಯಾಮೆರಾ ಹಿಡಿದಿದ್ದು, ವಿಶ್ವ ಎನ್ ಎಂ ಸಂಕಲನ ಪಪ್ಪಿ ಚಿತ್ರಕ್ಕಿದೆ. ಹಾಸ್ಯದ ಜೊತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ಪಪ್ಪಿಗೆ ಅಂದಪ್ಪ ಸಂಕನೂರು ಬಂಡವಾಳ ಹೂಡಿದ್ದಾರೆ. ಕೆಆರ್ ಜಿ ಪಪ್ಪಿ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ.
ಪಪ್ಪಿ ಟ್ರೇಲರ್ ಪಕ್ಕದ ಟಾಲಿವುಡ್ ಇಂಡಸ್ಟ್ರೀ ರಾಣಾ ದಗ್ಗುಭಾಟಿ ಅವರನ್ನು ತಲುಪಿದೆ. ಟ್ರೇಲರ್ ನೋಡಿ ರಾಣಾ ಇಷ್ಟಪಟ್ಟಿದ್ದು, ಆಫೀಸ್ ಕಡೆಯಿಂದ ಕಾಲ್ ಬಂದಿದೆಯಂತೆ. ಪಪ್ಪಿ ಟ್ರೇಲರ್ ನೋಡಿ ರಾಣಾ ತೆಲುಗು ರೈಟ್ಸ್ ಖರೀದಿಸುವ ಬಗ್ಗೆ ಆಸಕ್ತಿ ತೋರಿದ್ದಾರೆ.

