Review: A film that reveals the true story of life; Firefly

Review: ಬದುಕಿನ ವಾಸ್ತವ ಕಥನದ ಅನಾವರಣದ ಚಿತ್ರ ; ಫೈರ್ ಪ್ಲೈ - CineNewsKannada.com

Review: ಬದುಕಿನ ವಾಸ್ತವ ಕಥನದ ಅನಾವರಣದ ಚಿತ್ರ ; ಫೈರ್ ಪ್ಲೈ

ಚಿತ್ರ ; ಫೈರ್ ಪ್ಲೈ
ನಿರ್ದೇಶನ : ವಂಶಿ ಕೃಷ್ಣ
ನಿರ್ಮಾಣ: ನಿವೇದಿತಾ ಶಿವರಾಜ್ ಕುಮಾರ್
ತಾರಾಗಣ; ವಂಶಿಕೃಷ್ಣ, ರಚನಾ ಇಂದರ್, ಸುಧಾರಾಣಿ, ಅಚ್ಯುತ್ ಕುಮಾರ್,ಮೂಗುಸುರೇಶ್, ಸುಂದರ್ ವೀಣಾ, ಚಿತ್ಕಲಾ ಬಿರಾದಾರ್, ವೀಣಾ ಸುಂದರ್ , ಸಿಹಿ ಕಹಿ ಚಂದ್ರು, ಶಿವರಾಜ್‍ಕುಮಾರ್ ಮತ್ತಿತರರು
ರೇಟಿಂಗ್: * 3.5/5

ಕನ್ನಡದಲ್ಲಿ ಇತ್ತೀಚೆಗೆ ತೆರೆಗೆ ಬರುತ್ತಿರುವ ಚಿತ್ರಗಳ ಪೈಕಿ ವಿಭಿನ್ನ ಮತ್ತು ವಿಶಿಷ್ಠ ಕಥಾಹಂದರದ ಚಿತ್ರ “ಪೈರ್ ಪ್ಲೈ”. ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಮಿಂಚುಹುಳು ರೀತಿ ರೀತಿ ಸದಾ ಮಿನುಗುತ್ತಿರಬೇಕು ಎನ್ನುವ ಸಂದೇಶ ಹೊತ್ತಿರುವ ಸದಭಿರುಚಿಯ ಚಿತ್ರ.

ಬದುಕಿನಲ್ಲಿ ಎಲ್ಲವೂ ಸರಿ ಇರಬೇಕು, ಜೀವನದ ಹಾದಿಯಲ್ಲಿ ಎಡವಟ್ಟಾದರೆ ಏನೆಲ್ಲಾ ಸಮಸ್ಯೆ ಸಂಕಷ್ಟ, ಕಷ್ಟ , ನಷ್ಟಗಳು ಎದುರಾಗುತ್ತವೆ, ತಮ್ಮವರು ಎಂದು ಕೊಂಡವರು ಹೇಗೆಲ್ಲಾ ನಡೆದುಕೊಳ್ಳುತ್ತಾರೆ ಎನ್ನುವ ಬದುಕುನ ಏರಿಳಿತನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಂಶಿಕೃಷ್ಣ.

ವಿಕ್ಕಿ ಅಲಿಯಾಸ್ ವಿವೇಕಾನಂದ (ವಂಶಿ ಕೃಷ್ಣ) ಅಪ್ಪ-ಅಮ್ಮನ ಮುದ್ದಿನ ಮಗ, ನಾಲ್ಕು ವರ್ಷಗಳ ಬಳಿಕ ವಿದೇಶದಿಂದ ಮನೆಗೆ ಬಂದವ. ಇದು ತಂದೆ ತಾಯಿಗೆ ಎಲ್ಲಿಲ್ಲದ ಸಂತೋಷ. ಮಗನನ್ನು ಬರಮಾಡಿಕೊಂಡು ಬರುವಾಗ ಅನಾಹುತವೊಂದು ನಡದೇ ಹೋಗುತ್ತಿದೆ. ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪ- ಅಮ್ಮನ್ನು ಕಳೆದುಕೊಂಡ ಅನಾಥನಾದ ಹುಡುಗ. ಬಂಧು ಬಳಗ ನೆಂಟರಿಷ್ಠರ ಪಾಲಿಗೆ ಬೇಡವಾದವ.ಸಮಸ್ಯೆಗೆ ಸಿಲುಕಿ ನಿದ್ರೆಯಿಂದ ವಂಚಿತನಾದ ಆತ ಮಾಡಬಾರದ ಕೆಲಸ ಒಂದು ಎರಡಲ್ಲ. ಮಾಡಲು ಕೆಲಸವಿಲ್ಲದೆ ಪರದಾಡುವ ಹುಡುಗನಿಗೆ ದೊಡ್ಡಪ್ಪ ಕೆಲಸ ಕೊಡಿಸುತ್ತಾನೆ. ಅಲ್ಲಿಯೂ ನಿಲ್ಲದ ಹೊರಗೆ ಹಾಕಿಸಿಕೊಂಡವ.

ದೊಡ್ಡಪ್ಪನ ಮನೆಯಲ್ಲಿ ಇರುವ ವಿಕ್ಕಿಗೆ ಆರಂಭದಲ್ಲಿ ಎಲ್ಲರೂ ಚೆನ್ನಾಗಿ ನಡೆಸಿಕೊಳ್ಳುತ್ತಾರೆ. ದಿನ ಕಳೆದಂತೆ ಮೂದಲಿಕೆ, ಅಸಡ್ಡೆ ಕಂಡು ಮರಳಿ ತಮ್ಮ ಮನೆಗೆ ಹೊರಬೇಕು ಎನ್ನುವ ನಿರ್ಧಾರ ಮಾಡ್ತಾನೆ,.ಜರ್ನಿಯ ಮದ್ಯೆ ಸಿಕ್ಕವಳು ನೇಹಾ (ರಚನಾ ಇಂದರ್) ಜೊತೆ ವಾಕ್, ಟಾಕ್, ಪ್ಲಾಶ್ ಬ್ಯಾಕ್, ಸಿಂಗು ಸಾಂಗ್ , ಹಾಗೆ ಬಂದು ಹೋದವಳ ಹುಡುಕಾಟ, ನಡುವೆ ಒಂದಷ್ಟು ಪಟ್ಟ ಪಡಿಪಾಟಿಲು, ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ವಿಕ್ಕಿ ಸಮಸ್ಯೆಯಿಂದ ಹೊರ ಬರುತ್ತಾನಾ ಇಲ್ಲ ಮುಂದೇ ಎನ್ನುವುದು ಕುತೂಹಲದ ಸಂಗತಿ.

ನಟನೆ ಮತ್ತು ನಿರ್ದೇಶನವನ್ನೂ ಮಾಡಿರುವ ವಂಶಿಕೃಷ್ಣ, ಎರಡೂ ವಿಬಾಗದಲ್ಲಿ ಭರವಸೆ ಮೂಡಿಸಿದ್ದಾರೆ. ಲವಲವಿಕೆಯ ನಟನೆಯಿಂದ ಗಮನ ಸೆಳೆದಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ನಟ,ನಿರ್ದೇಶಕ ಸಿಕ್ಕಂತಾಗಿದೆ. ಫಿಜ್ಜಾ ಡಿಲವರಿ ಬಾಯ್ ವಿಶೇಷ ಪಾತ್ರದಲ್ಲಿ ಹಿರಿಯ ನಟ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಅವರನ್ನು ಚಿತ್ರದಲ್ಲಿ ಮತ್ತಷ್ಟು ಬಳಸಿಕೊಂಡಿದ್ದರೆ ಚಿತ್ರಕ್ಕೆ ಇನ್ನಷ್ಟು ತೂಕ ಬರುತ್ತಿತ್ತು.

ರಚನಾ ಇಂದಿರ್, ಸುಧಾರಾಣಿ, ಅಚ್ಯುತ್ ಕುಮಾರ್ , ಮೂಗು ಸುರೇಶ್, ಸುಂದರ್ ವೀಣಾ, ಚಿತ್ಕಲಾ ಬಿರಾದಾರ್, ವೀಣಾ ಸುಂದರ್ , ಸಹಿ ಕಹಿ ಚಂದ್ರು ಶೀತಲ್ ಶೆಟ್ಟಿ ಮತ್ತಿತರರು, ಚಿತ್ರದಲ್ಕಿದ್ದಾರೆ.ಅಭಿಲಾಶ್ ಕಳತ್ತಿ ಕ್ಯಾಮರ ಚಿತ್ರಕ್ಕಿದೆ.

ಬದುಕು ನೀರಿನ ಮೇಲಿನ ಗುಳ್ಳೆ, ಆಗುವುದನ್ನು ತಪ್ಪಿಸಲು ಆಗಲ್ಲ. ಕಲ್ಲು ಗುಂಡಿನಂತೆ ನಿಲ್ಲಬೇಕು, ಕಷ್ಟಗಲೂ ಬಂದರೂ ಮಿಂಚುಹುಳು ರೀತಿ ಮಿನುಗುತ್ತಿರಬೇಕು ಎನ್ನುವ ಎನ್ನುವ ಸಂದೇಶವೂ ಚಿತ್ರದಲ್ಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin