Actor Dixit Shetty's movie "Blink" will hit the screens on March 8

ಮಾಚ್ 8ಕ್ಕೆ ನಟ ದೀಕ್ಷಿತ್ ಶೆಟ್ಟಿ ಅಭಿನಯದ “ಬ್ಲಿಂಕ್” ಚಿತ್ರ ತೆರೆಗೆ - CineNewsKannada.com

ಮಾಚ್ 8ಕ್ಕೆ ನಟ ದೀಕ್ಷಿತ್ ಶೆಟ್ಟಿ ಅಭಿನಯದ “ಬ್ಲಿಂಕ್” ಚಿತ್ರ ತೆರೆಗೆ

ಈಗಾಗಲೇ ತಮ್ಮ ಹೊಸತನದಿಂದ ಜನರ ಗಮನಸೆಳೆದಿರುವ “ಬ್ಲಿಂಕ್” ಚಿತ್ರ ತಂಡ ಮಾರ್ಚ್ 8ಕ್ಕೆ ಚಿತ್ರಮಂದಿರದೊಳಗೆ ಪ್ರವೇಶಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ .ಇದರ ಸಲುವಾಗಿ ಬ್ಲಿಂಕ್ ಚಿತ್ರ ತಂಡವು ವಿನೂತನ ರೀತಿಯಲ್ಲಿ ಪ್ರಚಾರ ಮಾಡಲು ಮುಂದಾಗಿದೆ..

ನಗರದ ವಿವಿಧ ಭಾಗಗಳಲ್ಲಿ ಪ್ರಸ್ತುತ ಟ್ರೆಂಡಿನ ಹಾಡಿನ ಸಾಲುಗಳನ್ನು ಬಳಸಿಕೊಂಡು ತಮ್ಮ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ..ಈ ಪ್ರಚಾರ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿದ್ದು ಜನರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಜನನಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬ್ಲಿಂಕ್ ಚಿತ್ರ ಸೈಫೈ ಪ್ರಕಾರದ ಚಿತ್ರವಾಗಿದ್ದು ಪ್ರೇಕ್ಷಕರನ್ನು ಸೆಳಿದಿಟ್ಟುಕೊಳ್ಳುವುದು ಖಂಡಿತವೆಂದು ನಿರ್ಮಾಪಕ ರವಿಚಂದ್ರ ಎ.ಜೆ ಹೇಳಿದ್ದಾರೆ.

ಚೊಚ್ಚಲ ನಿರ್ದೇಶನದಲ್ಲೇ ಚಿತ್ರದ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು ಇದೊಂದು ಕಾಲ್ಪನಿಕ ಕಥೆಯಾಗಿದ್ದು ಕನ್ನಡ ಚಿತ್ರರಂಗದಲ್ಲಿ ಈ ಪ್ರಕಾರದ ಚಿತ್ರಗಳು ತೀರಾ ಕಡಿಮೆ ತೆರೆಕಂಡಿದ್ದು ಈ ಚಿತ್ರವು ನೋಡುಗರಲ್ಲಿ ಹೊಸತನ ಮೂಡಿಸುತ್ತದೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಹೇಳುತ್ತಾರೆ

ದಿಯಾ, ದಸರಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿಯವರು ನಾಯಕ ನಟನ ಜವಬ್ದಾರಿಯನ್ನು ಹೊತ್ತಿದ್ದಾರೆ.. ಹಾಗೂ ಹೊಸ ದಿನಚರಿ ಖ್ಯಾತಿಯ ಮಂದಾರ ಬಟ್ಟಲಹಳ್ಳಿ ನಾಯಕಿನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚಿಗೆ ತೆರೆಕಂಡ ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ 2 ಚಿತ್ರದ ಸುರಭಿ ಪಾತ್ರಧಾರಿ ಚೈತ್ರ ಜೆ ಆಚಾರ್ ಬ್ಲಿಂಕ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ ಹಾಗೂ ವಜ್ರಧೀರ್ ಜೈನ್, ಗೋಪಾಲಕೃಷ್ಣ ದೇಶಪಾಂಡೆ , ಕಿರಣ್ ನಾಯ್ಕ್ , ಮುರುಳಿ ಶೃಂಗೇರಿ , ಸುರೇಶ್ ಅನಗಹಳ್ಳಿ ಸೇರಿದಂತೆ ಇನ್ನು ದೊಡ್ಡ ತಾರಬಳಗವಿದೆ. ಈ ಚಿತ್ರಕ್ಕೆ ಪ್ರಸನ್ನ ಕುಮಾರ್ ಎಂ ಎಸ್ ರವರ ಸಂಗೀತ ನಿರ್ದೇಶನವಿದ್ದು , ಅವಿನಾಶ ಶಾಸ್ರ್ತಿರವರ ಕ್ಯಾಮೆರಾ ಕೈ ಚಳಕವಿದೆ. ಹಾಗೂ ಸಂಜೀವ್ ಜಾಗೀರ್ದಾರ್ ರವರ ಸಂಕಲನವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin