Actor Ganesh Rao KesarKar produced the movie "Tarakeshwar".

“ತಾರಕೇಶ್ವರ” ಚಿತ್ರದ ಮೂಲಕ ನಿರ್ಮಾಪಕರಾದ ನಟ ಗಣೇಶ್ ರಾವ್ ಕೇಸರ್ ಕರ್ - CineNewsKannada.com

“ತಾರಕೇಶ್ವರ” ಚಿತ್ರದ ಮೂಲಕ ನಿರ್ಮಾಪಕರಾದ ನಟ ಗಣೇಶ್ ರಾವ್ ಕೇಸರ್ ಕರ್

ಡಿ ಬಾಸ್ ದರ್ಶನ್ ಅವರ ಪ್ರೇರಣೆಯಿಂದ ಹಿರಿಯ ಕಲಾವಿದ ಗಣೇಶ್‍ರಾವ್ ಕೇಸರ್ ಕರ್ ನಿರ್ಮಾಣದ ” ತಾರಕೇಶ್ವರ” ಚಿತ್ರದ ಹಾಡುಗಳ ಅನಾವರಣ ಮತ್ತು ಶೀರ್ಷಿಕೆ ಬಿಡುಗಡೆ ಕಾರ್ಯಕಮ ನಡೆಯಿತು

ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್ ಕರ್ ನಿರ್ಮಾಣದ ಜಿ.ಆರ್ ಪಿಲ್ಮ್ ಹೊಸ ನಿರ್ಮಾಣ ಸಂಸ್ಥೆಯನ್ನು ಬಿಜೆಪಿಯ ಹಿರಿಯ ನಾಯಕ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಅನಾವರಣ ಮಾಡಿ ಶುಭ ಹಾರೈಸಿದರು.

ಇದೇ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ ಸುರೇಶ್, ಚಿತ್ರದ ಶೀರ್ಷಿಕೆ ” ತಾರಕೇಶ್ವರ” ಅಸುರ ಕುಲತಿಲಕ ಶೀರ್ಷಿಕೆ ಬಿಡುಗಡೆ ಮಾಡಿದರು.ಚಿತ್ರದ ಶೀರ್ಷಿಕೆ ಗೀತೆಯನ್ನು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅನಾವರಣಗೊಳಿಸಿದರೆ ,ಟೆಲಿವಿಷನ್ ಅಸೋಸಿಯನ್ ಅಧ್ಯಕ್ಷ ರವಿ ಗರಣಿ ಹಾಗು ನಿರ್ದೇಶಕ ಸಂಘದ ಅಧ್ಯಕ್ಷ ಎನ್. ಆರ್ ವಿಶ್ವನಾಥ್, ಸೇರಿದಂತೆ ಮತ್ತಿತರು ಬಿಡುಗಡೆ ಮಾಡಿ ಶುಭ ಹಾರೈಸಿದರು.

ಈ ವೇಳೆ ಡಾ. ಸಿ.ಎನ್ ಅಶ್ವತ್ ನಾರಾಯಣ್, ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಸಾಯಿ ಓಂ ಪ್ರಕಾಶ್ ಸೇರಿದಂತೆ ಗಣ್ಯರು ,ನಟ, ನಿರ್ಮಾಪಕ ಗಣೇಶ್ ರಾವ್ ಕೇಸರ್ ಕರ್ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ನಟ, ನಿರ್ಮಾಪಕ ಗಣೇಶ್ ರಾವ್ ಕೇಸರ್ ಕರ್ ಮಾತನಾಡಿ ಇದು ನನ್ನ 333ನೇ ಚಿತ್ರ. ಚಿತ್ರಕ್ಕೆ ನಿರ್ಮಾಪಕನಾಗಿ ಪಾದಾರ್ಪಣೆ ಮಾಡಿದ್ದೇನೆ. ಆಶೀರ್ವಾದಬೇಕು. ಗಂಗೆಗೌರಿ ಚಿತ್ರ ಸದ್ಯದಲ್ಲಿಯೇ ಸೆನ್ಸಾರ್‍ಗೆ ಹೋಗಲಿದೆ. ಈ ಹಂತದಲ್ಲಿ ತಾರಕಾಸುರ ಮುಗಿದೆ.

ನಟ ದರ್ಶನ್ ಪ್ರೇರೇಣೆಯಿಂದ ಸಿನಿಮಾ ಮಾಡಲಾಗಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಚಿತ್ರತಂಡಕ್ಕೆ ಸಹಕಾರ ಮತ್ತು ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು

ನಿರ್ದೇಶಕ ಬಿ.ಎ ಪುರುಷೋತ್ತಮ ಮಾತನಾಡಿ, ಹಿರಿಯ ನಿರ್ದೇಶಕ ಶ್ರೀನಿವಾಸ ಮೂರ್ತಿ ಅವರ ಗರಡಿಯಲ್ಲಿ ಕಲಿತಿದ್ದೇನೆ. ಜೊತೆಗೆ ಓಂ ಸಾಯಿ ಪ್ರಕಾಶ್ ಚಿತ್ರರಂಗದಲ್ಲಿ ಕಲಿಸಿಕೊಟ್ಟವರು. ಸಿದ್ದರಾಮೇಶ್ವರ ಚಿತ್ರ ಮಾಡುವಾಗ ಈಶ್ವರನ ಪಾತ್ರಕ್ಕೆ ಗಣೇಶ್‍ರಾವ್ ಕೇಸರ್‍ಕರ್ ಅವರು ಸೂಟ್ ಆಗ್ತಾರೆ ಎಂದೆ. ಬಂದು ಪಾತ್ರ ಮಾಡುತ್ತೇನೆ. ಎಂದ್ರು ನಿರ್ಮಾಪಕರು ಗೆಟಪ್ ನೋಡಿ ಮುಂದುವರಿಯಿರಿ ಎಂದರು

ಈಶ್ವರನ ಪಾತ್ರದ ಸ್ಪೂರ್ತಿಯಿಂದ ಗಂಗೆಗೌರಿ ಚಿತ್ರ ನಿರ್ಮಾಣ ಮಾಡಲಾಯಿತು. ಸಿನಿಮಾ ಮಾಡಿದ್ಸಾರೆ. ಆ ಸಿನಿಮಾ ಮಾಡುವ ಸಮಯದಲ್ಲಿ ತಾರಕೇಶ್ವರ ಚಿತ್ರದ ಕಥೆ ಹೊಳೆಯಿತು. ಅದರ ಸ್ಪೂರ್ತಿಯಿಂದ ಸಿನಿಮಾ ಬಂದಿದೆ. ಪಾತ್ರ ಮತ್ತು ಕಾಸ್ಟೂಮ್ ಚೆನ್ನೈಯಿಂದ ತರಿಸು ಮಾಡಿದ್ದಾರೆ. ಚಿತ್ರ ಚನ್ನಾಗಿ ಮೂಡಿ ಬಂದಿದೆ ತಾರಕಾಸುರ, ಅಸುರ , ತಂದೆಯ ಸೇಡಿಗೆ ಇಂದ್ರನ ಮೇಲೆ ಸೇಡಿಸಿಕೊಳ್ಳಲು ಕಥೆ ಹೊಂದಿದೆ ಎಂದರು.

ಚಿತ್ರದಲ್ಲಿ ನಟಿಸಿರುವ ರೂಪಾಲಿ, ನಮಿತಾರಾವ್, ವಿಕ್ರಂಸೂರಿ, ಎನ್.ಟಿ.ರಾಮಸ್ವಾಮಿ, ಶಂಕರ್‍ಭಟ್,ಶ್ರೀ ವಿಷ್ಣು, ಹೆಜ್ಜಾಜಿ ಮಹಾದೇವ, ಪ್ರಜ್ವಲ್ ಕೇಸರ್‍ಕರ್, ಅನ್ನಪೂರ್ಣ, ಗೀತಾ, ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಗುರುರಾಜ್, ಶ್ರೀರಾಮ್, ಬಾಲನಟಿಯರಾದ ಋತುಸ್ಪರ್ಶ, ದಿಶಾ.ಎನ್. ಮುಂತಾದವರು ಹಾಜರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin