ಏಪ್ರಿಲ್ 5ಕ್ಕೆ ನಟ ನೀನಾಸಂ ಸತೀಶ್- ರಚಿತಾರಾಮ್, ಆದಿತಿ ತಾರಾಗಣದ “ಮ್ಯಾಟ್ನಿ” ತೆರೆಗೆ

ಆಯೋಗ್ಯ ಚಿತ್ರದ ಬಳಿಕ “ಮ್ಯಾಟ್ನಿ” ಮೂಲಕ ನಟ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಜೋಡಿ, ಮೋಡಿ ಮಾಡಲು ಮುಂದಾಗಿದೆ. ಇವರಿಬ್ಬರ ನಡುವೆ ನಟಿ ಅದಿತಿ ಪ್ರಭುದೇವ ಕೂಡ ಸಾಥ್ ನೀಡಿದ್ದಾರೆ.

“ಮ್ಯಾಟ್ನಿ” ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ತೆರೆಗೆ ಬರಬೇಕಾಗಿತ್ತು. ಸೂಕ್ತ ಸಮಯಕ್ಕಾಗಿ ಕಾದ ಚಿತ್ರ ತಂಡ ಇದೀಗ ಏಪ್ರಿಲ್ 5ಕ್ಕೆ ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದೆ.ಚಿತ್ರದ ಹಾಡುಗಳ ಮೂಲಕ ಸದ್ದು ಮಾಡಿದೆ. “ಮ್ಯಾಟ್ನಿ “ ತಂಡ ಈಗ ಮತ್ತೊಂದು ರೋಮ್ಯಾಟಿಕ್ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ.

ಸದ್ಯ ಬಿಡುಗಡೆಯಾಗಿರೋ ‘ನಿನಗಾಗಿ ಮಿಡಿಯುವುದು…’ ಹಾಡಿನಲ್ಲಿ ಸತೀಶ್ ನಿನಾಸಂ ಹಾಗೂ ಅದಿತಿ ಪ್ರಭುದೇವಾ ಕಾಣಿಸಿಕೊಂಡಿದ್ದಾರೆ ..ಈ ಹಾಡನ್ನು ಮನಾಲಿಯಲ್ಲಿ ಚಿತ್ರೀಕರಣ ಮಾಡಿದ್ದು ಹಾಡು ಸಖತ್ ಬ್ಯೂಟಿಫುಲ್ ಹಾಗೂ ರೋಮ್ಯಾಂಟಿಕ್ ಆಗಿ ಮೂಡಿ ಬಂದಿದೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡುವ ಮೂಲಕ ಮ್ಯಾಟ್ನಿ ಸಿನಿಮಾತಂಡಕ್ಕೆ ಶುಭ ಕೋರಿದ್ಧಾರೆ. ನಿನಗಾಗಿ ಮಿಡಿಯುವುದು ಹಾಡಿನ ಜೊತೆಗೆ ಮೇಕಿಂಗ್ ಅನ್ನು ಬಿಡುಗಡೆ ಮಾಡಿರೋ ತಂಡ ಮೂರು ದಿನಗಳ ಕಾಲ ಮನಾಲಿ ಚಿತ್ರೀಕರಣ ಹೇಗಿತ್ತು ಅದರ ಜೊತೆಗೆ ಚಿತ್ರತಂಡ ಮನಾಲಿಯಲ್ಲಿ ಏನೆಲ್ಲಾ ಸಾಹಸ ಮಾಡಿ ಚಿತ್ರೀಕರಣ ಮಾಡಿದೆ ಅನ್ನೋದನ್ನ ಮೇಕಿಂಗ್ ಮೂಲಕ ತಿಳಿಸಿದ್ದಾರೆ

ಮ್ಯಾಟ್ನಿ ಚಿತ್ರಕ್ಕೆ ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು ಪಾರ್ವತಿ ಎಸ್ ಗೌಡ ಬಂಡವಾಳ ಹೂಡಿದ್ದಾರೆ.ಈ ಹಾಡಿಗೆ ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡಿದ್ದು, ಸಂತು ಮಾಸ್ಟರ್ ಕೋರಿಯೋಗ್ರಾಫ್ ಮಾಡಿದ್ದಾರೆ..

ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಮ್ಯಾಟ್ನಿ ಸಿನಿಮಾದ ಈ ರೋಮ್ಯಾಂಟಿಕ್ ಹಾಡನ್ನ ಹೇಮಂತ್ ಕುಮಾರ್ ಗಂಜಂ ಬರೆದಿದ್ದು ಸಾದ್ವಿನಿ ಕೊಪ್ಪ ಹಾಡಿದ್ದಾರೆ…
ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನಿನಾಸಂ , ರಚಿತಾ ರಾಮ್, ಅದಿತಿ ಪ್ರಭುದೇವಾ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಶಿವರಾಜ್ ಕೆ ಆರ್ ಪೇಟೆ, ನಾಗಭೂಷನ್ , ಪೂರ್ಣ ಮೈಸೂರು, ದಿಗಂತ್ ತಬಲ ನಾಣಿ, ಪ್ರಕಾಶ್ ತುಂಬಿನಾಡು,ಗೋಪಿ ಮಿಮಿಕ್ರಿ,ತುಳಸಿ ಶಿವಮಣಿ ಇನ್ನು ಅನೇಕರು ಅಭಿನಯಿಸಿದ್ದಾರೆ.

ಚಿತ್ರ ಇದೇ ಏಪ್ರಿಲ್ 5 ರಂದು ಮ್ಯಾಟ್ನಿ ಸಿನಿಮಾ ರಾಜ್ಯಾಧ್ಯಂತ ತೆರೆಗೆ ಬರ್ತಿದೆ. ಈ ಮೂಲಕ ಬಹಳ ದಿನಗಳ ನಂತರ ನಟ ನೀನಾಸಂ ಸತೀಶ್ ಒಳ್ಳೆಯ ಚಿತ್ರದೊಂದಿಗೆ ಮೋಡಿ ಮಾಡಲು ಸಜ್ಜಾಗಿದ್ದಾರೆ