ನಟ ಪ್ರವೀರ್ ಶೆಟ್ಟಿ ಸಿನಿಮಾಗೆ ‘ಬಘೀರ’ ಬಲ : “ನಿದ್ರಾದೇವಿ ನೆಕ್ಟ್ ಡೋರ್” ಟೀಸರ್ ಬಿಡುಗಡೆ
ಕನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯತ್ನಗಳಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. “ನಿದ್ರಾದೇವಿ ನೆಕ್ಟ್ ಡೋರ್” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.
ಬಘೀರ ಚಿತ್ರದ ಗೆಲುವಿನ ಖುಷಿಯಲ್ಲಿರುವ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ “ನಿದ್ರಾದೇವಿ ನೆಕ್ಟ್ ಡೋರ್” ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ನಟ ಶ್ರೀಮುರುಳಿ ನಿರ್ಮಾಪಕ ಜಯರಾಮ್ ದೇವಸಮುದ್ರ ತುಂಬಾ ಕಾಳಜಿ, ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ ಒಳ್ಳೆಯದು ಆಗಲಿ. ನಾನು ಪ್ರವೀರ್ ಜಿಮ್ ಮೇಟ್ಸ್. ಅವರಿಗೆ ಒಳ್ಳೆಯದು ಆಗುತ್ತದೆ. ನಿಮ್ಮ ಕಣ್ಣಲ್ಲಿ ನಟನೆ ನೋಡಿದೆ. ಶೈನ್ ಫ್ಯಾನ್ ನಾನು. ನೀವು ಚಿತ್ರದಲ್ಲಿ ಚೆನ್ನಾಗಿ ಕಾಣ್ತಿದ್ದೀರಾ. ರಿಷಿಕಾಗೂ ಒಳ್ಳೆಯದು ಆಗಲಿ. ಕ್ಯಾಪ್ಟನ್ ಆಗಿ ಸುರಾಗ್ ಏನೋ ವಿಷ್ಯ ಹೇಳುತ್ತಿರುವುದು ಗೊತ್ತಾಗುತ್ತಿದೆ ತಂಡಕ್ಕೆ ಒಳ್ಳೆಯದಾಗಲಿ ಎಂದರು
ನಟ ಪ್ರವೀರ್ ಶೆಟ್ಟಿ ಮಾತನಾಡಿ, ಸುರಾಗ್ ನನಗೂ ಎರಡು ವರ್ಷದ ಜರ್ನಿ ಇದೆ. ನಮ್ಮ ಸ್ಟೋರಿ ಇಟ್ಕೊಂಡು ಹಲವಾರು ನಿರ್ಮಾಪಕರ ಬಳಿ ಹೋದೆವು. ಕೊನೆಗೆ ಜಯರಾಮ್ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾದರು.ರಿಷಿಕಾ ಅವರಿಂದ ತುಂಬಾ ಕಲಿಯುತ್ತಿದ್ದೇವೆ. ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.
ನಿರ್ದೇಶಕ ಸುರಾಗ್ ಮಾತನಾಡಿ, ಪ್ರವೀರ್ ನಾನು ಒಟ್ಟಿಗೆ ಸೇರಿದಾಗ ನಮ್ಮಿಬ್ಬರಿಗೆ ಒಂದೇ ತರ ಸಿನಿಮಾ ಮಾಡಬೇಕೆಂಬ ವಿಷನ್ ಇತ್ತು. ಕಥೆ ,ಮಾಡಿಕೊಂಡಿದ್ದೇನೋ ಅದನ್ನು ಪ್ರವೀರ್‍ಗೆ ಹೇಳಿದಾU ಖುಷಿಪಟ್ಟರು. ಟೆಕ್ನಿಕಲ್ ಟೀಂ ಈ ಚಿತ್ರಕ್ಕೆ ಸಾಕಷ್ಟು ಶ್ರಮಿಸಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ ಎಂದರು.
“ನಿದ್ರಾದೇವಿ ನೆಕ್ಟ್ ಡೋರ್” ಟೀಸರ್ ಬಹಳ ಕುತೂಹಲ ಹೆಚ್ಚಿಸಿದೆ. ಟೀಸರ್ ನಲ್ಲಿ ಕಥೆ ಗಟ್ಟುರಟ್ಟು ಮಾಡದೇ ಟೀಸರ್ ಕಟ್ ಮಾಡಲಾಗಿದೆ. ಚೆಂದದ “ನಿದ್ರಾದೇವಿ ನೆಕ್ಟ್ ಡೋರ್” ನಿದ್ರೆ ಇಲ್ಲದ ವ್ಯಕ್ತಿಯ ಸುತ್ತ ಸಾಗುವ ಕಥಾಹಂದರ ಸಿನಿಮಾದಲ್ಲಿದೆ. ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದು ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ನಿರ್ಮಾಪಕರಾದ ಜಯರಾಮ್ ದೇವಸಮುದ್ರ ತಮ್ಮ ಸುರಮ್ ಮೂವೀಸ್ ಬ್ಯಾನರ್ನಡಿಯಲ್ಲಿ ನಿರ್ಮಿಸಿದು, ಹಿಂದೆ ಇದೇ ಸಂಸ್ಥೆಯಲ್ಲಿ “ರೇವ್ ಪಾರ್ಟಿ ” ಮತ್ತು ” “ಎಂಗೇಜ್ಮೆಂಟ್ ” ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. “ನಿದ್ರಾದೇವಿ ನೆಕ್ಟ್ ಡೋರ್” ಅವರ ಬ್ಯಾನರ್ನಲ್ಲಿ ಬರುತಿರುವ ಒಂದು ವಿಭಿನ್ನ ಚಿತ್ರ. ಈ ಸಿನಿಮಾಗೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಊಲಾಸ್ ಹೈದೂರ್ ಅವರ ಪೆÇ್ರಡಕ್ಷನ್ ಡಿಸೈನ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ ಸಂಕಲನವಿದೆ.