“ರಾಮರಸ’ ಹಂಚಲು ದೇವೇಂದ್ರ ನಾಗಿ ಬಂದ ನಟ ಶರಣ್
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ, ನಾಯಕ ನಟನಾಗಿ ತಮ್ಮದೇ ಆದ ಛಾಪು ಮೂಡಿಸಿದ ಬಹುಮುಖ ಪ್ರತಿಭೆ, ಸ್ಯಾಂಡಲ್ ವುಡ್ ನ ಅಧ್ಯಕ್ಷ, ನಟ ಶರಣ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ನಡುವೆ “ ರಾಮರಸ” ಚಿತ್ರ ತಂಡದಿಂದ ಹೊಸ ಸುದ್ದಿ ಹೊರ ಬಿದ್ದಿದೆ. ಯಾವುದೇ ಪಾತ್ರ ನೀಡಿದರೂ ಲೀಲಾಜಾಲವಾಗಿ ನಟಿಸುವ ಶರಣ್ ಅವರನ್ನು “ಇಂದ್ರ’ ನನ್ನಾಗಿಸಿದ ಹಿರಿಮೆ ನಿರ್ಮಾಪಕ ಗುರು ದೇಶಪಾಂಡೆ ಅವರದು

ಜಿ ಅಕಾಡಮಿ ಮತ್ತು ಸೆವೆನ್ ಸ್ಟಾರ್ ಮೂವೀಸ್ ಸಹಯೋಗದಲ್ಲಿ ಗುರು ದೇಶಪಾಂಡೆ ಮತ್ತು ವಿಕ್ರಮ್ ಆರ್ಯ ನಿರ್ಮಾಣ ಮಾಡುತ್ತಿರುವ “ರಾಮರಸ” ಚಿತ್ರದಲ್ಲಿ ಶರಣ್ ಅವರನ್ನು ದೇವತೆಗಳ ಅಧಿಪತಿ, ಹೊಮ – ಹವನ ಮತ್ತು ಯಜ್ಞಗಳ ಪರಮಪತಿ, ಮೆರವಣಿಗೆಯ ಆಮ್ರಾಟ, ಶೌರ್ಯಶಾಲಿ, ಕರುಣಾಮಯ ಮತ್ತು ಪ್ರಭಾವಶಾಲಿ ಇಂದ್ರ ಈ ನಮ್ಮ ಅದ್ಭುತ ದೇವೇಂದ್ರನ ಪಾತ್ರದಲ್ಲಿ ಪರಿಚಯ ಮಾಡಲಾಗಿದೆ

ಹಾಸ್ಯನಟನಾಗಿ ಪ್ರಾರಂಭವಾದ ಅತ್ಯದ್ಭುತ ನಟ, ಹೀರೋ ಆಗಿ ತಮ್ಮದೇ ಆದ ಹಾಸ್ಯತನವನ್ನು ಎಲ್ಲ ಚಿತ್ರಗಳಲ್ಲಿಯೂ ಅವರ ಛಾಪನ್ನು ಮೂಡಿಸಿದ್ದಾರೆ. ಇಂದಿಗೂ ಸ್ಯಾಟಲೈಟ್ ಮತ್ತು ಟಿ ಆರ್ ಪಿ ಗಳ ಚಾಂಪಿಯನ್. “ರಾಮರಸ ಚಿತ್ರದಲ್ಲಿ ರಾಮರಸ ಚಿತ್ರದಲ್ಲಿ ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜವಾದ ಉದ್ದೇಶ ಮುಂದಿನ ಅಧ್ಯಾಯದಲ್ಲಿ ಬಹಿರಂಗವಾಗಲಿದೆ
ಚಿತ್ರದಲ್ಲಿ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್, ಹೆಬಾ ಪಟೇಲ್, ಬಾಲಾಜಿ ಮನೋಹರ, ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ
ಬಿ. ಎಂ. ಗಿರಿರಾಜ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಕ್ರಿಯೇಟಿವ್ ಹೆಡ್ ಆಗಿ ಗುರು ದೇಶಪಾಂಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಭರತ್ ಬಿ.ಜೆ ಸಂಗೀತ ನೀಡುತ್ತಿದ್ದಾರೆ.

ಇನ್ನುಳಿದಂತೆ ಎ.ವಿ.ಕೃಷ್ಣ ಕುಮಾರ್(ಕೆ.ಕೆ.), ಅರ್ಜುನ್ ಕಿಟ್ಟು, ಹೊಸ್ಮನೆ ಮೂರ್ತಿ, ಅರ್ಜುನ್ ರಾಜ್, ಮುರುಳಿ, ಡಾ. ನಾಗೇಂದ್ರ ಪ್ರಸಾದ್, ಪುನೀತ್ ಆರ್ಯ, ನಾಗಾರ್ಜುನ್ ಶರ್ಮ, ಸುಧೀಂದ್ರ ವೆಂಕಟೇಶ್, ಅನಿಲ್ ಯಾದವ್, ಸೆವಿಯರ್, ಮಹೇಶ್ , ಸುರೇಶ್ ಗುಣ,ಧರ್ಮರಾಜ, ಸ್ಟಿಲ್ ಸುರೇಶ್ ಕಾರ್ಯ ನಿರ್ವಹಿಸಲಿದ್ದಾರೆ

