Kicchu Sudeep's sister's son's new film 'Mango Pachcha'

ಕಿಚ್ಚು ಸುದೀಪ್ ಅಕ್ಕನ ಮಗನ ಹೊಸ ಚಿತ್ರ ‘ಮ್ಯಾಂಗೋ ಪಚ್ಚ’ - CineNewsKannada.com

ಕಿಚ್ಚು ಸುದೀಪ್ ಅಕ್ಕನ ಮಗನ ಹೊಸ ಚಿತ್ರ ‘ಮ್ಯಾಂಗೋ ಪಚ್ಚ’

ಸ್ಯಾಂಡಲ್‍ವುಡ್‍ಗೆ ಅದ್ದೂರಿ ಎಂಟ್ರಿ ಕೊಟ್ಟಿರುವ ಮತ್ತೊಬ್ಬ ಆರಡಿ ಕಟೌಟ್ ಸಂಚಿತ್ ಸಂಜೀವ್. ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿ ಹುಟ್ಟುಹಬ್ಬಕ್ಕೆ ಚೊಚ್ಚಲ ಚಿತ್ರ ‘ಮ್ಯಾಂಗೋ ಪಚ್ಚ’ ಶೀರ್ಷಿಕೆ ಅನಾವರಣವಾಗಿದೆ.

#SanchithSanjeev

ಹುಟ್ಟುಹಬ್ಬದ ಪ್ರಯುಕ್ತ ಪ್ರೊಮೊ ರಿಲೀಸ್ ಮಾಡುವ ಜೊತೆಗೆ ಟೈಟಲ್ ಕೂಡ ಅನಾವರಣ ಮಾಡಲಾಗಿದೆ. ಸಂಚಿ ಚೊಚ್ಚಲ ಸಿನಿಮಾಗೆ ‘ಮ್ಯಾಂಗೋ ಪಚ್ಚ’ ಎಂದು ಟೈಟಲ್ ಇಡಲಾಗಿದೆ.

ಕ್ರೇಜಿ ಸ್ಟಾರ್ ಬಾರ್ ಅಂಡ್ ರೆಸ್ಟೊರೆಂಟ್ ಗೆ ಎಂಟ್ರಿ ಕೊಡುವ ಫಾರಿನ್ ಲೇಡಿಗೆ ಡಿವಿಡಿ ಅಂಗಡಿ ಮಾಲಿಕನ ಬಗ್ಗೆ ಕಥೆ ಹೇಳುವ ಮೂಲಕ ಪ್ರೊಮೊ ಪ್ರಾರಂಭವಾಗಲಿದೆ. ಖಾಲಿ ಇರುವ ಟೇಬಲ್ ಯಾರದ್ದು ಎಂದು ಕೇಳುವ ಫಾರಿನ್ ಲೇಡಿಗೆ ಮ್ಯಾಂಗೋ ಪಚ್ಚನ ಕಥೆ ಹೇಳುವ ಮೂಲಕ ಸಂಚಿತ್ ಖಡಕ್ ಲುಕ್ ರಿವೀಲ್ ಆಗಲಿದೆ. ಧಮ್ ಎಳೆಯುವ ಸಂಚಿ ರಗಡ್ ಗೆಟಪ್ ಸಿನಿ ಅಭಿಮಾನಿಗಳ ನಿದ್ದೆ ಗೆಡಿಸುವಂತಿದೆ.

ಸಂಚಿಗೆ ನಾಯಕಿಯಾಗಿ ಪೆಪೆ ಸಿನಿಮಾ ಖ್ಯಾತಿಯ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಂಚಿ ಮೊದಲ ಸಿನಿಮಾಗೆ ವಿವೇಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿವೇಕ ಅವರಿಗ ಮೊದಲ ಸಿನಿಮಾ. ಸುದೀಪ್ ಅಕ್ಕನ ಮಗನ ಚೊಚ್ಚಲ ಚಿತ್ರಕ್ಕೆ ಕೆ ಆರ್ ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ.

#SanchithSanjeev

ಮೈಸೂರು ಮೂಲಕ ಕ್ರೈಂ ಥ್ರಿಲ್ಲರ್ ಸಿನಿಮಾ. 2001 ರಿಂದ 2011ರ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ.

ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರಛಾಯಾಗ್ರಾಹಣ, ವಿಶ್ವಾಸ್ ಆರ್ಟ್ ವರ್ಕ್ ಚಿತ್ರಕ್ಕಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin