Actor Siddu Moolimani's 'Seat Edge': First song to be released on February 7th

ನಟ ಸಿದ್ದು ಮೂಲಿಮನಿ ನಟನೆಯ ‘ಸೀಟ್ ಎಡ್ಜ್’ : ಫೆಬ್ರವರಿ 7ಕ್ಕೆ ಮೊದಲ ಹಾಡು ಬಿಡುಗಡೆ - CineNewsKannada.com

ನಟ ಸಿದ್ದು ಮೂಲಿಮನಿ ನಟನೆಯ ‘ಸೀಟ್ ಎಡ್ಜ್’ : ಫೆಬ್ರವರಿ 7ಕ್ಕೆ ಮೊದಲ ಹಾಡು ಬಿಡುಗಡೆ

ಯುವ ನಟ ಸಿದ್ದು ಮೂಲಿಮನಿ ನಟನೆಯ ‘ಸೀಟ್ ಎಡ್ಜ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಫೆಬ್ರವರಿ 7 ರಂದು ಮೊದಲ ಹಾಡು ಬಿಡುಡಗೆ ಮಾಡಲು ತಂಡ ಸಿದ್ದತೆ ಮಾಡಿಕೊಂಡಿದೆ.

ಪ್ರೇಕ್ಷಕರನ್ನು ಸೀಟ್ ನ ಎಡ್ಜ್ ಗೆ ಕೂರಿಸುವ ಸಿನಿಮಾ ಮಾಡಬೇಕು ಅನ್ನೋದು ಪ್ರತಿಯೊಬ್ಬ ನಿರ್ದೇಶಕರ ಕನಸು. ಇದೇ ಸೀಟ್ ಎಡ್ಜ್ ಎಂಬ ಟೈಟಲ್ ಇಟ್ಕೊಂಡು ಕನ್ನಡದಲ್ಲೊಂದು ಸಿನಿಮಾ ಬರ್ತಿದೆ. ಸದ್ದಿಲ್ಲದೇ ಚಿತ್ರದ ಶೂಟಿಂಗ್ ಕೂಡ ಮುಕ್ತಾಯಗೊಂಡಿದ್ದು, ಸೀಟ್ ಎಡ್ಜ್ ಸಿನಿಮಾವೂ ಈಗ ಬಿಡುಗಡೆ ಹಂತಕ್ಕೆ ಬಂದಿದೆ.

ಕಿರುತೆರೆ ಲೋಕದಲ್ಲಿ ಒಂದಷ್ಟು ಹೆಸರು ಮಾಡಿರುವ ಸಿದ್ದು ಮೂಲಿಮನಿ ಸೀಟ್ ಎಡ್ಜ್ ಸಿನಿಮಾದ ನಾಯಕ. ರವೀಕ್ಷಾ ಶೆಟ್ಟಿ ಚಿತ್ರದ ನಾಯಕಿ. ಡಾರ್ಕ್ ಕಾಮಿಡಿಗೆ ಹಾರರ್ ಥ್ರಿಲ್ಲರ್ ಟಚ್ ಕೊಟ್ಟು ಯುವ ನಿರ್ದೇಶಕ ಚೇತನ್ ಶೆಟ್ಟಿ ಚಿತ್ರ ತಯಾರಿಸಿದ್ದಾರೆ. ಕೆಮಿಸ್ಟ್ರೀ ಆಫ್ ಕರಿಯಪ್ಪ ಹಾಗೂ ಕ್ರಿಟಿಕಲ್ ಕೀರ್ತನೆಗಳು ಸಿನಿಮಾದಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಇವರು ಸೀಟ್ ಎಡ್ಜ್ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ.

ನೈಜ ಘಟನೆಯಿಂದ ಸ್ಪೂರ್ತಿ ಪಡೆದಿರುವ ಸೀಟ್ ಎಡ್ಜ್ ಸಿನಿಮಾದಲ್ಲಿ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಕಿರಣ್ ನಾಯಕರೇ, ಪುನೀತ್ ಬಾಬು, ತೇಜು ಪೊನ್ನಪ್ಪ,, ಮನಮೋಹನ್ ರೈ ಬಣ್ಣ ಹಚ್ಚಿದ್ದಾರೆ. ಚೇತನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು ಆಕಾಶ್ ಪರ್ವ ಸಂಗೀತ, ದೀಪಕ್ ಕುಮಾರ್ ಜೆಕೆ ಛಾಯಾಗ್ರಹಣ ಹಾಗೂ ನಾಗೇಂದ್ರ ಉಜ್ಜನಿ ಸಂಕಲನವಿದೆ.

ಎನ್ ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗಿರಿಧರ ಟಿ ವಸಂತಪುರ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸುಜಾತ ಗಿರಿಧರ್ ಸಹ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಫೆಬ್ರವರಿ 7ಕ್ಕೆ ಸೀಟ್ ಎಡ್ಜ್ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin